ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಮಾ. 16 ರಿಂದ 23ರವರೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ತೋಪು ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿ.ಗಂಗಾಧರ್ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಜಾತ್ರಾ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು ಈ ಜಾತ್ರೆಯೂ ಕಳೆದ 93-94ರಲ್ಲಿ ನಡೆದಿತ್ತು ಈಗ 32 ವರ್ಷಗಳ ನಂತರ ನಡೆಯುತ್ತಿದೆ, ಇದರಲ್ಲಿ ಗುಡಿಗೌಡರು, ಬುದ್ದಿವಂತರು, ಕೋಲುಕಾರರು ಸಾವಿದವರು, ಏಳೂರು ಗುಡಿಕಟ್ಟಿನ, ಸೇರಿದಂತೆ ಎಲ್ಲಾ ಸಮಾಜದವರು ಸೇರಿ ನಡೆಸಲಿದ್ದಾರೆ. ಈ ಜಾತ್ರಾ ಮಹೋತ್ಸವಕ್ಕೆ ತನ್ನದೆ ಆದ ಇತಿಹಾಸ ಇದೆ. ಮಾ. 16 ರಿಂದ ಪ್ರಾರಂಭವಾಗಿ 23ರವರೆಗೆ ನಡೆಯಲಿದ್ದು ಪ್ರತಿ ದಿನ ಸಭಾ ಕಾರ್ಯಕ್ರಮಗಳು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ವಿವಿಧ ಮಠಾಧೀಶರು ಸಂಸದರು, ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿವಿಧ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ತದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಇದ್ದಲ್ಲದೆ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸೇವೆಯನ್ನು ಮಾಡಿದವರನ್ನು ಸನ್ಮಾನಿಸಲಾಗುವುದು ಎಂದ ಅವರು ಈಗಾಗಲೇ ಜಾತ್ರೆಯನ್ನು ಯಶಸ್ವಿಯಾಗಿ ಮಾಡಲು ವಿವಿಧ ರೀತಿಯ ಸಮಿತಿಗಳನ್ನು ರಚನೆ ಮಾಡಲಾಗಿದೆ ಈ ಜಾತ್ರಾ ಮಹೋತ್ಸವಕ್ಕಾಗಿ ಶಾಸಕರಾದ ಚಂದ್ರಪ್ಪರವರು ಸುಮಾರು 30 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.
ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಕಾರ್ಯಕ್ರಮವನ್ನು ಸಚಿವ ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಚಂದ್ರಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಟಗರಿನ ಕಾಳಗ ನಡೆಯಲಿದೆ. ಮಾ. 18ರಂದು ತೋಪು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಬೀರಲೀಂಗೇಶ್ವರ ಸ್ವಾಮಿಗೆ ವಿವಿಧ ಒಕ್ಕಲುಗಳಿಂದ ಮೀಸಲು ಸೇವೆ ನಡೆಯಲಿದೆ. ಮಾ.20 ರಂದು ಪೂಜಾರಿ ಮತ್ತು ವೀರಗಾರರುಗಳಿಗೆ ಕುಲ ಗುರುಗಳಿಂದ ದೀಕ್ಷೆ ಖೂಡುವ ಕಾರ್ಯಕ್ರಮ ನಡೆಯಲಿದ್ದು, ಮಾ.21 ರಂದು ದೇವರುಗಳಿಗೆ ಉಯ್ಯಾಲೆ ಸೇವೆ, ಗಂಗೆ ತರುವುದು ಮತ್ತು ಓಕಳಿ ಸೇವೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಧಾರ್ಮಿಕ ಸಭೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ. ಇದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಪಶು ಆಸ್ಪತ್ರೆ, ಸಿ.ಸಿ.ರಸ್ತೆಗಳ ಉದ್ಘಾಟನೆ ನಡೆಯಲಿದೆ. ಈ ಸಮಾರಂಭಕ್ಕೆ ವಿವಿಧ ಇಲಾಖೆಯ ಸಚಿವರುಗಳು, ಚಲನಚಿತ್ರ ನಟರಾದ ದುನಿಯಾ ವಿಜಯ್, ಲೂಸ್ ಮಾದ (ಯೋಗೇಶ್) ಆಗಮಿಸಲಿದ್ದಾರೆ. ಮಾ.22 ರಂದು ಹಲ್ಕುರಿ ಪವಾಡ ಈರೂಟ, ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.