ಚಿತ್ರದುರ್ಗ ಆ. 16
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಧರ್ಮ ಶಾಲಾ ರಸ್ತೆಯಲ್ಲಿನ ಪಾಶ್ರ್ವನಾಥ ವಿದ್ಯಾಸಂಸ್ಥೆಯವತಿಯಿಂದ ಶನಿವಾರ ಪ್ಲೇಹೊಂ, ಎಲ್.ಕೆ.ಜಿ. ಮತ್ತು ಯು.ಕೆ.ಜಿ. ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಕೃಷ್ಣ, ರಾಧೆಯವರ ವೇಷ ಭೂಷಣವನ್ನು ಹಾಕುವುದರ ಮೂಲಕ ಶ್ರೀ ಕೃಷ್ಣ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು ಕೃಷ್ಣ ರಾಧೆಯವರ ವೇಷಭೂಷಣವನ್ನು ಹಾಕುವುದರ ಮೂಲಕಜನ್ಮಾಷ್ಠಮಿಗೆ ಮೆರಗನ್ನು ನೀಡಿದರು.

ಈ ಸಮಯದಲ್ಲಿ ಶಾಲೆಯ ಅಧ್ಯಕ್ಷರಾದ ಬಾಬುಲಾಜಿ ಕಾರ್ಯದರ್ಶಿ ಸುರೇಶ್‍ಕುಮಾರ್ ಸಿಸೋಡಿಯ ಮುಖ್ಯೋಪಾಧ್ಯಯರು, ಭೋಧಕ ಹಾಗೂ ಭೋದಕೇತರ ಸಿಬ್ಬಂದಿಗಳು. ಪೋಷಕರು ಹಾಗೂ ತೀರ್ಪುಗಾ ರರಾದ ಬಿಜೆಎಸ್ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷರಾದ ಜಯಶ್ರೀ ಷಾ, ಕಾರ್ಯದರ್ಶಿ ಸುಮಿತ್ರಾ ಭಾಗವಹಿಸಿದ್ದರು. ಈ ವೇಷ ಭೂಷಣದಲ್ಲಿ ಭಾಗವಹಿಸಿದ್ದ ಉತ್ತಮವಾದ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
Views: 16