
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 20 ಮಾನವ ತಾನು ಸಂಪಾದನೆ ಮಾಡಿದ ಬಹುತೇಕ ಸಂಪತ್ತು ಕಳ್ಳತನವಾಗುತ್ತದೆ, ಆದರೆ ವಿದ್ಯೆ ಕದಿಯಲಾಗದ ಸಂಪತ್ತು, ಇದನ್ನು ಬಳಸಿದಷ್ಟು ನಮ್ಮಲ್ಲಿ ಜ್ಞಾನ ಹೆಚ್ಚಾಗುತ್ತದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಕಬೀರಾನಂದ ಬಡಾವಣೆಯಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿ ಶುಕ್ರವಾರ ಶ್ರೀ ಕಬೀರಾನಂದಸ್ವಾಮಿ ಇಂಗ್ಲಿಷ್ ಮೀಡಿಂಯನ ಶಾಲೆಯಲ್ಲಿನ ಎಲ್.ಕೆ.ಜಿ. ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸುವುದರ ಮೂಲಕ ಮಕ್ಕಳ ಅಕ್ಷರ ಕಲಿಕೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಣ ಇಂದಿನ ದಿನಮಾನದಲ್ಲಿ ಎಲ್ಲರಿಗೂ ಅತಿ ಅವಶ್ಯಕವಾಗಿದೆ. ಪ್ರತಿಯೊಬ್ಬರು ಕಲಿಯಲೇಬೇಕಿದೆ. ಯಾರೂ ಸಹಾ ಅಕ್ಷರ ಜ್ಞಾನವನ್ನು ಪಡೆಯದೇ ಇರಬಾರದು, ಪೋಷಕರು ಸಹಾ ತಮ್ಮ ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡಬೇಕಿದೆ, ತಮ್ಮ ತೊಂದರೆಗಳನ್ನು ಮುಂದೆ ಇಟ್ಟುಕೊಂಡ ಮಕ್ಕಳ ಶಿಕ್ಷಣವನ್ನು ಮೊಟಕು ಮಾಡಬಾರದೆಂದು ಶ್ರೀಗಳು ಕಿವಿ ಮಾತು ಹೇಳಿದರು.
ವಿದ್ಯೆಯಲ್ಲಿ ಕಲಿತವ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಬದುಕನ್ನು ನಡೆಸುತ್ತಾನೆ, ಅತನಿಗೆ ಸಮಾಜದಲ್ಲಿ ಸಿಗುವ ಗೌರವ ಹೆಚ್ಚಿದೆ, ಮಾನವನಿಗೆ ಆರಂಭದ ದಿನ ಎಂದರೆ ಅಕ್ಷರ ಅಭ್ಯಾಸದ ದಿನವಾಗಿದೆ. ಅಕ್ಷರ ಎಂದರೆ ನಾಶ ರಹಿತವಾದದ್ದು, ಜೀವನದಲ್ಲಿ ನಾವು ಗಳಿಸಿದ ಸಂಪತ್ತು ಆಸ್ತಿ, ಒಡವೆ, ಬಂಗ್ಲೆ, ಹಣ, ಎಲ್ಲವೂ ನಾಶವಾಗುತ್ತದೆ ಆದರೆ ತಾವು ಕಲಿತ ವಿದ್ಯೆ ಮಾತ್ರ ಎಂದಿಗೂ ನಾಶವಾಗುವುದಿಲ್ಲ. ಕ್ಷರ ಎಂದರೆ ನಾಶ ಅಕ್ಷರ ಎಂದರೆ ನಾಶ ರಹಿತವಾದದ್ದು, ನಾವು ಕಲಿತ ವಿದ್ಯೆಯಲ್ಲಿ ಪಾಲುಗಾರಿಕೆ ಇಲ್ಲ ಆದರೆ ನಾವು ಸಂಪಾದಿಸಿದ ಅಸ್ತಿಯಲ್ಲಿ ಮಾತ್ರ ಪಾಲುಗಾರಿಕೆ ಹೋರಾಟ, ವಂಚನೆ ಕೂಲೆ, ಮೋಸ ಇದೆ. ಶಿಕ್ಷಣದಲ್ಲಿ ಇದಾವುದೂ ಇಲ್ಲ, ವಿದ್ಯೆಯಲ್ಲಿ ನಾವು ಖರ್ಚು ಮಾಡಿದಷ್ಟು ಹೆಚ್ಚಾಗುತ್ತದೆ ಆಸ್ತಿಯಂತೆ ಕಳೆಯುವುದಿಲ್ಲ, ಖರ್ಚು ಮಾಡಿದಂತೆ ಬೆಳೆಯುವುದೆದ್ದರೆ ಅದು ವಿದ್ಯೆ ಮಾತ್ರ ಎಂದು ಶ್ರೀಗಳು ತಿಳಿಸಿದರು.
ನಾವು ಹೊಸದಾದ ಬಟ್ಟೆಯನ್ನು ಖರೀದಿಸಿದರೆ ಅದು ಮುಂದೆ ಹಳೇ ಬಟ್ಟೆಯಾಗಲೇ ಬೇಕು, ನಾವು ಕೊಂಡುಕೊಂಡ ಪಾತ್ರ ಬಳಸಿದಂತೆ ಹಳೆಯದಾಗುತ್ತದೆ ಇಂದಿನ ಮಕ್ಕಳು ಮುಂದಿನ ದಿನಮಾನದಲ್ಲಿ ಯುವಕರಾಗಿ ಮುದುಕರಾಗಲೇ ಬೇಕಿದೆ, ಅದರೆ ವಿದ್ಯೆ ಯಾವೂತ್ತು ಸಹಾ ಮುದುಕರಾಗುವುದಿಲ್ಲ, ವಿದ್ಯೆ ಎನ್ನುವುದು ವಿನೂತನ ಅದು ಬೆಳದಷ್ಟು ಬೇರೆಯವರನ್ನು ಬೆಳಸುತ್ತದೆ. ವಿದ್ಯೆ ಎಲ್ಲದಕ್ಕಿಂತ ಶ್ರೇಷ್ಟವಾಗಿದೆ. ನಮ್ಮ ಮಠದಲ್ಲಿ ಸ್ವಾಮಿಗಳ ಮೂಲಕ ನಿಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸುತ್ತಿರುವುದು ಮಕ್ಕಳ ಹಾಗೂ ಪೋಷಕರ ಪುಣ್ಯವಾಗಿದೆ, ಈ ಅಕ್ಷರ ಅಭ್ಯಾಸಕ್ಕಾಗಿ ಜನತೆ ಎಲ್ಲಲೂ ಹೋಗುತ್ತಾರೆ ಅದರೆ ನಿಮ್ಮ ಊರಿನಲ್ಲಿಯೇ ನಮ್ಮ ಕೈಯಲ್ಲಿ ಮಕ್ಕಳ ಅಕ್ಷರವನ್ನು ಕಲಿಸಲು ಸಿಕ್ಕಿರುವುದು ನಿಮ್ಮ ಪುಣ್ಯವಾಗಿದೆ ಎಂದ ಶ್ರೀಗಳು ಈ ಮಕ್ಕಳು ಚನ್ನಾಗಿ ಅಭ್ಯಾಸವನ್ನು ಮಾಡುವುದರ ಮೂಲಕ ಉತ್ತಮ ಪ್ರಜೆಗಳಾಗಲಿ, ದೇಶಕ್ಕೆ ತಮ್ಮದೇ ಆದ ಕೂಡುಗೆಯನ್ನು ನೀಡಲಿ ಎಂದು ಶ್ರೀ ಶಿವಲಿಂಗಾನಂದ ಶ್ರೀಗಳು ಆಶಿಸಿದರು.
ಕಾರ್ಯಕ್ರಮದಲ್ಲಿ ಕಬೀರಾನಂದಾಶ್ರಮದ ಗಣಪತಿ ಶಾಸ್ತ್ರಿ, ಸುಬ್ರರಾಯ ಭಟ್ಟರು, ಶ್ರೀಕಬೀರಾನಂದಸ್ವಾಮಿ ಇಂಗ್ಲಿಷ್ ಮೀಡಿಂಯನ ಶಾಲೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.