“ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್‌ಗೆ ಎಟಿಎಂ ಆಗಿದೆ – ಶ್ರೀರಾಮುಲು ಆರೋಪ”

ಚಿತ್ರದುರ್ಗ ಆ. 27 

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ದೇಶದಲ್ಲಿ ನಡೆಯುವಂತಹ ಚುನಾವಣೆಗೆ ಹಣವನ್ನು ಸರಬರಾಜು ಮಾಡುವ ಸರ್ಕಾರವಾಗಿ ಕರ್ನಾಟಕ ಸರ್ಕಾರವಾಗಿದೆ ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕ ಸರ್ಕಾರ ಎಟಿಎಂ ಆಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡರಾದ ಶ್ರೀರಾಮುಲು ಆರೋಪಿಸಿದ್ದಾರೆ. 


ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಅಳುಗಾಡುತ್ತಿದೆ, ಇದನ್ನು ಹಿಡಿಯಲು ಹಲವಾರು ಜನ ಟವಲ್ ಹಾಕಿ ಕಾಯುತ್ತಿದ್ದಾರೆ ಇದನ್ನು ಮರೆ ಮಾಚುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ್‍ನಲ್ಲಿ ನಡೆಯುವ ಚುನಾವಣೆಗೆ ಪಕ್ಷ ಹೈಕಮಾಂಡಿಗೆ 300 ಕೋಟಿ ರೂ.ಗಳ ಕಪ್ಪವನ್ನು ನೀಡಲು ಮಂದಾಗಿದ್ದಾರೆ ಇದಕ್ಕೆ ಸಚಿವರಿಂದ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ದೂರಿದ ಅವರು, ರಾಜ್ಯದಲ್ಲಿ ಅಭೀವೃದ್ದಿ ಎನ್ನುವುದು ಮರೀಚಿಕೆಯಾಗಿದೆ ನಮ್ಮ ಕಾಲದಲ್ಲಿ ಆದ ಕಾಮಗಾರಿಗಳು ಈಗ ಪ್ರಾರಂಭವಾಗುತ್ತಿವೆ, ಶಾಸಕರುಗಳು ತಮ್ಮ ಕ್ಷೇತ್ರದ ಅಭೀವೃದ್ದಿಗೆ ಹಣವನ್ನು ನೀಡುವಂತೆ ಮುಖ್ಯಮಂತ್ರಿಗಳನ್ನು ಗೋಗರೆಯುತ್ತಿದ್ದಾರೆ. ಎಂದು ದೂರಿದರು.


ನ.15ರಂದು ಮುಖ್ಯಮಂತ್ರಿಗಳು ದೆಹಲಿ ಪ್ರವಾಸವನ್ನು ಮಾಡಲಿದ್ದಾರೆ ಇದರಲ್ಲಿ ಪಕ್ಷದ ಹೈಕಮಾಂಡನ್ನು ಭೇಟಿ ಮಾಡಿ 2028ರವರೆಗೆ ನಾನೇ ಮುಖ್ಯಮಂತ್ರಿಯಾಗಿರುವಂತೆ ನೋಡಿಕೊಳ್ಳಿ ನಿಮಗೆ  ಏನು ಬೇಕು ಆದನ್ನು ನಾನು ಮಾಡುತ್ತೇನೆ ಎಂದು ಹೇಳುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪ್ರತಿಯಾಗಿ ಡಿ.ಕೆ. ಶಿವಕುಮಾರ್ ಸಹಾ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣನ್ನು ಹಾಕಿದ್ದಾರೆ. ಅವರು ಸಹಾ ಈ ಬಾರಿ ಮುಖ್ಯಮಂತ್ರಿಯಾಗಲೇ ಬೇಕೆಂದು ಹಠ ಹಿಡಿದಿದ್ದಾರೆ ಅವರು ಸಹಾ ಪಕ್ಷದ ಹೈಕಮಾಂಡನ್ನು ಓಲೈಕೆ ಮಾಡಲು ಮುಂದಾಗಿದ್ದಾರೆ. ಈಗ ಇರುವ ಶಾಸಕರಲ್ಲಿ ಎರಡು ಗುಂಪುಗಳಾಗಿದೆ ಒಂದು ಗುಂಪು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿ ಆಗಲಿರಲಿ ಎಂದು ಹೇಳುತ್ತಿದ್ದರೆ ಮತ್ತೊಂದು ಗುಂಪು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹೇಳುತ್ತಿದೆ, ಕೇವಲ ಬಿಹಾರ ಚುನಾವಣೆ ಅಷ್ಟೇ ಅಲ್ಲದೆ ತಮಿಳುನಾಡು, ಕೇರಳ, ಚಂಡಿಗಡ  ಚುನಾವಣೆಗಳು ಸಹ ಇವೆ ಈ ಚುನಾವಣೆಗಳಿಗೆ ಪೂರ್ಣ ಪ್ರಮಾಣದ ಆಶ್ವಾಸನೆ ಕೊಡುವ ಕೆಲಸವನ್ನ ಸಿದ್ದರಾಮಯ್ಯರವರು ಮಾಡುತ್ತಿದ್ದಾರೆ.

ಬಿಹಾರ ಚುನಾವಣೆ ಹಾದಿಯಾಗಿ ಮುಂದಿನ ಚುನಾವಣೆಗಳಿಗೆ ಕರ್ನಾಟಕ ಎಟಿಎಂ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.ದೇಶದ ಎರಡು ಮೂರು ರಾಜ್ಯಗಳಲ್ಲಿ ಬಿಟ್ಟರೆ ಎಲ್ಲಾ ರಾಜ್ಯಗಳಲ್ಲೂ ಸೋತು ಸುಣ್ಣವಾಗಿದ್ದಾರೆ… ಆದರೆ ಎಟಿಎಂ ಆಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಿನ ಎಲ್ಲಾ ಚುನಾವಣೆಗಳಿಗೆ  ಹಣವನ್ನ ಹಾಕಬೇಕು ಮುಂದಿನ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಬೇಕು ಎನ್ನುವ ಕಾರಣದಿಂದ ಸಿದ್ದರಾಮಯ್ಯರವರು ಪ್ರಾಮಾಣಿಕ ಪ್ರಯತ್ನ ಅನ್ನುವುದಕ್ಕಿಂತ ಆರನೇ ಗ್ಯಾರೆಂಟಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಶ್ರೀರಾಮುಲು ದೂರಿದರು. 


ನವಂಬರ್-20 ರೆಂದು ರಾಹುಲ್ ಗಾಂಧಿರವರು ರಾಜ್ಯಕ್ಕೆ ಬರಲಿದ್ದಾರೆ..  ಕಾಂಗ್ರೆಸ್ ಪಕ್ಷದ ಕಚೇರಿಯ ಉದ್ಘಾಟನೆ ಬರಲಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ.. ಆದರೆ ಬಹುಶಹ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು ತೆಗೆದುಕೊಂಡು ಸಿ.ಎಂ.ಬದಲಾವಣೆ ಮಾಡಬೇಕಾ.. ಇಲ್ಲ ಎನ್ನುವ ತೀರ್ಮಾನ ತೆಗೆದುಕೊಳ್ಳುವ ಉದ್ದೇಶದಿಂದ ಬರುತ್ತಿದ್ದಾರೆ.ಬಹುಶಹ ನನ್ನ ಅಭಿಪ್ರಾಯದ ಪ್ರಕಾರ ನವೆಂಬರ್ 15ರ ನಂತರ ದೊಡ್ಡ ಕ್ರಾಂತಿಯಾಗಲಿದೆ.. ರಾಹುಲ್ ಗಾಂಧಿ ಬಂದ ಹೋದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೋ ಅಥವಾ ಮುಖ್ಯಮಂತ್ರಿ ಬದಲಾವಣೆ ಮಾಡುತ್ತಾರೋ ಎಂಬುದು ಗೊತ್ತಾಗುತ್ತಿಲ್ಲ.ಹೊಸದಾಗಿ ಸಚಿವರಾಗಿಬೇಕೆನ್ನುವ ಶಾಸಕರುಗಳು ಶೂಟ್ ಕೇಸ್ ಇಟ್ಟುಕೊಂಡು ರೆಡಿಯಾಗಿದ್ದಾರೆ… ಯಾರು ಹಣ ಜಾಸ್ತಿ ಕೊಡುತ್ತಾರೆ ಅವರೇ ಮಂತ್ರಿ.. ಬಹಿರಂಗವಾಗಿ ಹರಾಜು ಹಾಕಿದಂತೆ.. ಯಾರು ಜಾಸ್ತಿ ಶೂಟ್ ಕೇಸ್ ಕೊಡುತ್ತಾರೆ ಅವರಿಗೆ ಮಂತ್ರಿ ಸ್ಥಾನ ಕೊಡಬೇಕೆನ್ನುವ ಹರಾಜಿಗೆ ನಿಂತಿದ್ದಾರೆ..


ಐಪಿಎಲ್ ಕ್ರಿಕೆಟ್‍ನ ಹರಾಜಿನ ರೀತಿಯಲ್ಲಿ.. ಶಾಸಕರುಗಳು ಸಚಿವರಾಗಲು ಶೂಟ್ ಕೇಸ್ ಇಟ್ಟುಕೊಂಡು ನಿಂತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿ ಇಲ್ಲ ಅಭಿವೃದ್ಧಿ ಇಲ್ಲ ಯಾವುದೇ ಬದಲಾವಣೆ ಆಗಿಲ್ಲ… ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಹೊಸ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಿಲ್ಲ. ಒಂದು ಕಡೆ ಡಿ.ಕೆ ಶಿವಕುಮಾರ್ ಬಣ ಇನ್ನೊಂದು ಕಡೆ ಸಿದ್ದರಾಮಯ್ಯರವರ ಬಣ ಎನ್ನುವ ರೀತಿಯಲ್ಲಿ ಕೂಸು ಬಡವಾಗಿದೆ ಎನ್ನುವ ಸ್ಥಿತಿಯಲ್ಲಿದೆ.ಕಾಂಗ್ರೆಸ್ ಪಕ್ಷದ ವಿರುದ್ದವಾಗಿ ಮಾತಾಡಿದರೆ ಎಲ್ಲರಿಗೂ ನೋಟಿಸ್ ನೀಡುತ್ತಿದ್ದಾರೆ ಆದರೆ ಯತಿಂದ್ರ ರವರಿಗೆ ಏಕೆ ನೋಟೀಸ್ ನೀಡಿಲ್ಲ.ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಇವರಿಬ್ಬರ ಜಗಳದಲ್ಲಿ ಸರ್ಕಾರ ಬೀಳಲಿದೆ.. ಮಧ್ಯಾಂತರ ಚುನಾವಣೆ ಬಂದರೂ ಬರಬಹುದು.ಯತೀಂದ್ರ ರವರು ತಮ್ಮ ತಂದೆ ಸಿದ್ದರಾಮಯ್ಯರವರು ಮಾತನಾಡಿದ ಮಾತನ್ನೇ  ಮಾತನಾಡಿದ್ದಾರೆ.ಸತೀಶ್ ಜಾರಕಿಹೊಳಿ ರವರಿಗೆ ಆ ಜವಾಬ್ದಾರಿ ಸಿಗುತ್ತದೆ ಎಂದರೆ ಹಿಂದುಳಿದ ಸಮುದಾಯಕ್ಕೆ ಸಿಕ್ಕ ಅವಕಾಶ.

ಸಿದ್ದರಾಮಯ್ಯರವರು ಅಧಿಕಾರ ಬಿಟ್ಟು ಕೊಡುವ ಕಾಲ ಹತ್ತಿರಕ್ಕೆ ಬಂದಿರುವುದರಿಂದ ಅವರು ಎಲ್ಲರನ್ನ ಗೊಂದಲಕ್ಕೆ ಈಡು ಮಾಡಬೇಕೆನ್ನುವ ಉದ್ದೇಶದಿಂದ ಈ ರೀತಿ ಹೇಳಿಸಿರಬಹುದು..


ಸಿದ್ದರಾಮಯ್ಯರವರು ನನ್ನ ಪ್ರಕಾರ ಅಧಿಕಾರ ಬಿಟ್ಟುಕೊಡಲ್ಲ ಅನ್ಸುತ್ತೆ ಆದರೆ ಒಂದು ಪಕ್ಷ ಬಿಟ್ಟುಕೊಟ್ಟರೆ ಡಿ.ಕೆ ಶಿವಕುಮಾರ್ ರವರಿಗೆ ಬಿಟ್ಟು ಕೊಡುವುದಿಲ್ಲ.ಬದಲಾವಣೆ ಏನು ಆಗುತ್ತೋ ಗೊತ್ತಿಲ್ಲ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆದರೂ ಆಗಬಹುದು.. ಅವರು ಧರ್ಮಸಿಂಗ್ ರವರ ಕಾಲದಿಂದಲೂ ಕಾಯುತ್ತಿದ್ದಾರೆ.. ಟ್ರಂಪ್ ಕಾರ್ಡ್ ಹೇಗೆ ಬದಲಾವಣೆ ಆಗುತ್ತೆ ನೋಡಬೇಕಾಗಿದೆ.2018 ರ ಚುನಾವಣೆಯ ಸಂದರ್ಭದಲ್ಲಿ  ಕೇಂದ್ರ ಸಚಿವರಾದ ಅಮಿತ್ ಶಾ ರವರು ಚಳ್ಳಕೆರೆಗೆ ಭೇಟಿ ನೀಡಿ ಸಂದರ್ಭದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ಮಾಡುವುದಾಗಿ ಹೇಳಿದ್ದರು.. ಅದಕ್ಕೂ ನಾವು ಈಗಲೂ ಬದ್ಧರಾಗಿದ್ದೇವೆ.2028ರ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು ಆ ಸಂದರ್ಭದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ಹಾಗೂ ಮದಕರಿ ನಾಯಕ ಜಯಂತಿಯನ್ನು ಸರ್ಕಾರದ ವತಿಯಿಂದ ನಡೆಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.


ಗೋಷ್ಟಿಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷರಾದ ಎ.ಮುರಳಿ, ಎಸ್.ಟಿ. ಮೋರ್ಚಾದ ಪಾಪೇಶ್ ನಾಯಕ, ಚಿತ್ರದುಗ್ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆ. ನಾಗರಾಜ್, ಸೋಮೇಂದ್ರ, ಬಾಳೆಕಾಯಿ ರಾಮದಾಸ್, ಪಾಲಯ್ಯ, ಮಲ್ಲೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 20

Leave a Reply

Your email address will not be published. Required fields are marked *