ಸಿದ್ದರಾಮಯ್ಯನವರು ಸಮಗ್ರವಾಗಿ ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸುವುದು ಕಾಣಿಸುತ್ತದೆ: ವಿಜಯಣ್ಣ ಆರೋಪ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 10 ಬಜೆಟ್‍ನಲ್ಲಿ ವಿವಿಧ ಇಲಾಖೆಯ ಯೋಜನೆಗಳಿಗೆ ಘೋಷಣೆ ಮಾಡಿದ ಅನುದಾನ ಸಂಪೂರ್ಣ ವೆಚ್ಚ ಮಾಡದೇ ಹಾಗೆ ಇರುತ್ತಿದ್ದು ಹಾಗೂ ವಾಸ್ತವಿಕ ವೆಚ್ಚವನ್ನು ಜನರ ಮುಂದೆ ಇಡದೇ ಹೊಸ ಹೊಸ ಘೋಷಣೆಯ ಆಯವ್ಯಯ ಮಂಡಿಸಿರುವುದು ಜನರನ್ನು
ಮರಳು ಮಾಡುವ ಆಯವ್ಯಯವಾಗಿದೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಗಳೂರೊಂದೇ ಕೇಂದ್ರವಾಗಿರಿಸಿ
ಘೋಷಣೆ ಘೋಷಿಸಿರುವುದು ರಾಜಕೀಯ ತಂತ್ರವಲ್ಲದೆ ಮತ್ತೇನು ಅಲ್ಲ ಎಂದು ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಜಿಲ್ಲಾ
ಸಂಚಾಲಕರಾದ ವಿಜಯಣ್ಣ ಆರೋಪಿಸಿದ್ದಾರೆ.

ಇತ್ತೀಚೆಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮಂಡಿಸಿದ ರಾಜ್ಯದ ಅಯವ್ಯಯದ ಬಗ್ಗೆ ಪ್ರತಿಕ್ರಿಯೇ ನೀಡಿದ ಅವರು,
ಕೇಂದ್ರದ ತೆರಿಗೆ ಹಂಚಿಕೆ ಬಗ್ಗೆ ನಿರಾಧಾರ ಆರೋಪ ಮಾಡುವ ಸಿದ್ದರಾಮಯ್ಯನವರು ಸಮಗ್ರವಾಗಿ ರಾಜ್ಯದ ಅಭಿವೃದ್ಧಿಯನ್ನು
ನಿರ್ಲಕ್ಷಿಸುವುದು ಕಾಣಿಸುತ್ತದೆ. ಪಶ್ಚಿಮ ಘಟ್ಟ ಮತ್ತು ಕರಾವಳಿ ಪ್ರದೇಶದ ಜನರಿಗೆ ಯಾವುದೇ ದೀರ್ಘವಾದ ಯೋಜನೆಗಳನ್ನು
ನೀಡದೇ ಇರುವುದು ವಿಷಾದದ ಸಂಗತಿ.

ಮುಸ್ಲಿಮರಿಗೆ ಕೈಗಾರಿಕಾ ಪ್ರದೇಶ ಭೂಮಿಯ ಹಂಚಿಕೆಯಲ್ಲೂ ಮತ್ತು ಗುತ್ತಿಗೆ ನೀಡುವಲ್ಲೂ ಸಹ ಅವರಿಗೆ ಮೀಸಲಾತಿ ನೀಡಿರುವದು
ಓಲೈಕೆ ರಾಜಕಾರಣವಾಗಿದೆ ಈ ಆಯವ್ಯಯದಲ್ಲಿ ಯಾವುದೇ ಸಮಗ್ರ ಅಭಿವೃದ್ಧಿ ಇಲ್ಲದೇ ತುಷ್ಟಿಕರಣ ರಾಜನೀತಿ
ಮಾಡುತ್ತಿರುವದು ಖಂಡನೀಯ. ಒಟ್ಟಿನಲ್ಲಿ ಈ ಆಯವ್ಯಯ ಅಂಕೆ-ಸಂಖ್ಯೆ ಆಟ ಆಗಿದೆ ಅಷ್ಟೇ ಎಂದು ಬಿಜೆಪಿ ಜಿಲ್ಲಾ ಆರ್ಥಿಕ
ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ವಿಜಯಣ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *