ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಮಾಡುತ್ತಿರುವುದು ಸಾಧನಾ ಸಮಾವೇಶ ಅಲ್ಲ.ಲೂಟಿಕೋರರ ಸಮಾವೇಶ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 19 ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಮಾಡುತ್ತಿರುವುದು ಸಾಧನಾ ಸಮಾವೇಶ ಅಲ್ಲ.ಲೂಟಿಕೋರರ ಸಮಾವೇಶ. ಈ ಸಮಾವೇಶ ಲೂಟಿಕೋರರ ಸಂತೆ.ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಸಲುವಾಗಿ ಈ ಸಮಾವೇಶ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದವ ಅವರುನಮ್ಮ
ಸರ್ಕಾರವನ್ನು 40% ಸರ್ಕಾರ ಎಂದು ಗೂಬೆ ಕೂರಿಸಿದರು.ಇದರ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಿದರು ಆ ಸಮಿತಿ ತನಿಖೆ ನಡೆಸಿ ಆ ಆರೋಪದಲ್ಲಿ ಉರುಳಿಲ್ಲ ಎಂದು ವರದಿ ನೀಡಿದೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ.ಶಾಸಕರುಗಳು
ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.. ಶಾಸಕರು ಲೂಟಿ ಹೊಡೆಯುತ್ತಿದ್ದಾರೆ.ಶಾಸಕರು ಯಾವುದೇ ಕೆಲಸವನ್ನು ಸಾರ್ವಜನಿಕರಿಗೆ
ತೋರಿಸುತ್ತಿಲ್ಲ ಅಧಿಕಾರಿಗಳನ್ನು ಹೆದರಿಸಿಕೊಂಡು ಲೂಟಿ ಹೊಡೆಯುತ್ತಿದ್ದಾರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು
ಸೇರಿದಂತೆ ಐದು ಜನ ಕಾಂಗ್ರೆಸ್ ಶಾಸಕರಿದ್ದಾರೆ ಜಿಲ್ಲೆಗೆ ಒಂದು ರೂ ತಂದು ಭೂಮಿ ಪೂಜೆ ಮಾಡಿದ್ದಾರೆ ತೋರಿಸಲಿ ಎಂದು
ಸವಾಲ್ ಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎರಡು ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಸಾರ್ವಜನಿಕರಿಗೆ
ಸ್ಪಂದಿಸದೇ ಗ್ಯಾರಂಟಿ ಲೆಕ್ಕದಲ್ಲಿ ಅಧಿಕಾರ ನಡೆಸುತ್ತಿದ್ದಾರೆ.ರಾಜ್ಯ ಸರ್ಕಾರ ಸ್ಟಾಂಪ್ ಡ್ಯೂಟಿಯನ್ನು ಹೆಚ್ಚಳ ಮಾಡಿದೆ ಅಷ್ಟೇ ಅಲ್ಲದೇ ಅಬಕಾರಿ ಶುಲ್ಕವನ್ನು 15 ಬಾರಿ ಹೆಚ್ಚಳ ಮಾಡಿದ್ದಾರೆ.ತೆರಿಗೆ ಸಂಗ್ರಹ ಹೇಗಿರಬೇಕೆಂದರೆ ಜೇನು ನೋಣ ಮಕರಂಧ ಹಿರುವ ಹಾಗೆ ಇರಬೇಕೆಂದು ಚಾಣುಕ್ಯ ಹೇಳಿದ್ದಾರೆ.ಆದರೆ ರಾಜ್ಯ ಸರ್ಕಾರದ ತೆರಿಗೆ ವ್ಯವಸ್ಥೆ ಸಾರ್ವಜನಿಕರು ಬದುಕಿಸದೇ ಇರುವಂತಹ ಪರಿಸ್ಥಿತಿ ಇದೆ. ಇಂತಹ ಅಸಹ್ಯಕರ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ.ಸಿದ್ದರಾಮಯ್ಯರವರಿಗೆ ತಾವು ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ನಾಟಕ ಆಡಬೇಕು ಎನ್ನುವುದು ಗೊತ್ತಿದೆ ಸಿದ್ದರಾಮಯ್ಯರವರು ಏನು ಕೆಲಸ ಮಾಡುತ್ತೇವೆ ಅನ್ನುವುದು ಗೊತ್ತಾಗುವುದಿಲ್ಲ ಎಂದರು.

ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಮಾನ್ಯ ಯಡಿಯೂರಪ್ಪರವರ ಸರ್ಕಾರದ ಅವಧಿಯಲ್ಲಿ 8000 ಕೋಟಿ ರೂ ನೀಡಿದ್ದೇವೆ..
ಈಗ ಅದರ ವೆಚ್ಚ 24,000 ಕೋಟಿ ರೂ ಆಗಿದೆ ಆದರೂ ಶೇ 25 % ರಷ್ಟು ಕಾಮಗಾರಿ ಸಹ ನಡೆದಿಲ್ಲ.. ಅಲ್ಲಿಯೂ ಸಹ ಲೂಟಿ
ಮಾಡಿದ್ದಾರೆ.ರಾಜ್ಯ ಸರ್ಕಾರ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸನು ಸಹ ಕೊಟ್ಟಿಲ್ಲ.. ನಾವು ಅಪ್ಪರ್ ಭದ್ರಾ
ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಹೇಳಿಲ್ಲ ಆದರೆ ಇವರು ಶಿಫಾರಸ್ಸು ಮಾಡಿ ಕಳುಹಿಸಿದರು ಎಂದು ಚಂದ್ರಪ್ಪ ತಿಳಿಸಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *