
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 19 ಬಿಜೆಪಿಯವರು ಮಾಡುತ್ತಿರುವ ವಿವಿಧ ರೀತಿಯ ಆರೋಪಗಳಿಗೆ ಮೇ. 20 ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ಸಿದ್ದರಾಮಯ್ಯರವರು ಉತ್ತರವನ್ನು ನೀಡಲಿದ್ದಾರೆ ಇದ್ದಲ್ಲದೆ ತಾಂಡಾ ಮತ್ತು ಗೊಲ್ಲರಹಟ್ಟಿಗಳಲ್ಲಿರುವವರಿಗೆ ಒಂದು ಲಕ್ಷ ಹಕ್ಕುಪತ್ರಗಳನ್ನು ಸಂಭ್ರಮಾಚರಣೆಯಲ್ಲಿ ವಿತರಿಸಲಾಗುವುದೆಂದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳಾದ ಜಿ.ಬಿ.ಬಾಲಕೃಷ್ಣ ಸ್ವಾಮಿ ಯಾದವ್ ತಿಳಿಸಿದರು.
ಚಿತ್ರದುರ್ಗ ನಗರದ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನಾ ಮತದಾರರಿಗೆ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವ ಬಗ್ಗೆ ಅಶ್ವಾಸನೆಯನ್ನು ನೀಡಿತ್ತು ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮತದಾರರಿಗೆ ಮಾತು ಕೊಟ್ಟಂತೆ ಐದು ಗ್ಯಾರೆಂಟಿಗಳನ್ನು ಜಾರಿ ಮಾಡುವುದರ ಮೂಲಕ ನುಡಿದಂತೆ ನಡೆದ ಸರ್ಕಾರವಾಗಿದೆ. ಬಿಜೆಪಿ ಪಕ್ಷದವರು ಸರ್ಕಾರ ನೀಡುವ ಗ್ಯಾರೆಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದರು ಆದರೆ ಇದರ ಬಗ್ಗೆ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳದೆ ಕೊಟ್ಟ ಮಾತಿನಂತೆ ಮತದಾರರಿಗೆ ಐದು ಗ್ಯಾರೆಂಟಿಗಳನ್ನು ನೀಡಿದ ಕೀರ್ತಿ ಅವರಿಗೆ ಸಲುತ್ತದೆ ಎಂದರು.
ಸರ್ಕಾರ ನೀಡಿದ ಪಂಚ ಗ್ಯಾರೆಂಟಿಗಳಿಂದ ಜನರ ಜೀವನ ಉತ್ತಮವಾಗಿದೆ. ಆರ್ಥಿಕವಾಗಿ ಸಂಕಷ್ಠದಲ್ಲಿ ಇದ್ದವರಿಗೆ ಗೃಹ ಲಕ್ಷ್ಮೀ
ಸಹಾಯವಾಗಿದೆ, ಊರುಗಳಿಂದ ಬೇರೆ ಕಡೆಗೆ ಓಡಾಡುವವರಿಗೆ ಸಿದ್ದರಾಮಯ್ಯ ರವರು ನೀಡಿದ ಉಚಿತವಾದ ಸಾರಿಗೆಯಿಂದ
ಜನತೆಗೆ ನೆರವಾಗಿದೆ, ಗೃಹ ಜ್ಯೋತಿಯಿಂದ ಮನೆಯ ಕರೆಂಟ್ ಬಿಲ್ಲು ಕಟ್ಟುವುದು ತಪ್ಪಿದೆ ಸುಮಾರು 200 ಯೂನಿಟ್‍ಗಳನ್ನು
ಉಚಿತವಾಗಿ ನೀಡುವುದರ ಮೂಲಕ ಬಡವರ ಮನೆ ಬೆಳಗವಂತೆ ಮಾಡಿದ್ದಾರೆ. ಯಾರು ಸಹಾ ಹಸಿವಿನಿಂದ ಇರಬಾರದೆಂದು
ಉಚಿತವಾಗಿ ಅಕ್ಕಿಯನ್ನು ನೀಡುತ್ತಿದೆ, ಇದ್ದಲ್ಲದೆ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3,000 ಹಾಗೂ ಡಿಪೆÇಮಾ ವ್ಯಾಸಂಗ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ ಮಾಸಿಕ ರೂ.1,500 ನಿರುದ್ಯೋಗ ಭತ್ಯೆ ಸಿಗಲಿದೆ ಚಿತ್ರದುರ್ಗ ಜಿಲ್ಲೆಯಲ್ಲಿ 5,312 ಪದವೀಧರರು ಹಾಗೂ 103 ಡಿಪ್ಲೋಮೊ ಪದವೀಧರರು ಸೇರಿದಂತೆ ಒಟ್ಟು 5,415 ನಿರುದ್ಯೋಗಿಗಳು ಯುವನಿಧಿಯ ಸೌಲಭ್ಯ ಪಡೆದಿದ್ದಾರೆ. 2024ರ ಜನವರಿ ಮಾಹೆಯಿಂದ ಈವರೆಗೆ ರೂ.10.05 ಕೋಟಿಗಳನ್ನು ಯುವನಿಧಿ ಯೋಜನೆಯ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪಾವತಿ ಮಾಡಲಾಗಿದೆ ಇದ್ದೆಲ್ಲ ಸರ್ಕಾರದ ಸಾಧನೆಯಾಗಿದೆ ಇದನ್ನು ಸಹಿಸದ ಬಿಜೆಪಿ ಸರ್ಕಾರದ ಮೇಲೆ ಆರೋಪಗಳನ್ನು ಮಾಡುತ್ತಾ ಗ್ಯಾರೆಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ ಎನ್ನುತ್ತಿದ್ದಾರೆ ಈ ರೀತಿಯಾದರೆ ನಮ್ಮ ರಾಜ್ಯದ ಅರ್ಥಿಕ ಜಿಡಿಪಿ ಯಾಕೇ ಏರುತ್ತಿತ್ತು ಎಂದು ಪ್ರಶ್ನಿಸಿದರು.
ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿವಿಧ ತಾಂಡಾಗಳಲ್ಲಿ ವಾಸಿಸುವ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ
ನೀಡಲು ಸಜ್ಜಾಗಿದೆ. ಹಟ್ಟಿ, ಹಾಡಿ, ತಾಂಡಾ, ಪಾಳ್ಯ, ಮಜುರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿ
ವಾಸಿಸುತ್ತಿರುವ ಅಷ್ಟೂ ಮಂದಿಗೆ ಕಂಪ್ಯೂಟರೈಸ್ಟ್ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಯುವ ಸಮಾವೇಶವನ್ನಾಗಿ ಮಾಡಲು
ಶ್ರಮ ನೋಂದಾಯಿತ ದಾಖಲೆಗಳನ್ನು ನೀಡಲಿದ್ದಾರೆ. ಜನವಸತಿಗಳಿಂದ ಬರುವ ಈ ಫಲಾನುಭವಿಗಳ ಜೊತೆಗೆ ಆಯ್ದ ಕೆಲವರಿಗೆ
ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಹಕ್ಕು ಪತ್ರ ವಿತರಿಸಲಿದ್ದಾರೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರತಿ
ಬಜೆಟ್‍ನಲ್ಲೂ 52 ಸಾವಿರ ಕೋಟಿ ರೂ. ಮೀಸಲಿಟ್ಟು ಅನುಷ್ಠಾನಗೊಳಿಸಿದ್ದರ ಪರಿಣಾಮ ಒಂದು ಕೋಟಿ ಜನರು ಬಡತನ
ರೇಖೆಗಿಂತ ಮೇಲೆ ಬಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು
ಕೈಗೆತ್ತಿಕೊಳ್ಳುವ ಮೂಲಕ ಪ್ರಗತಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಇತ್ತಿಚೆಗೆ ನಡೆದ ಬಂಡವಾಳ ಹೊಡಿಕೆದಾರರ ಸಮಾವೇಶದಲ್ಲಿ ಸಾವಿರಾರು ಕೋಟಿ ರೂ.ಗಳ ಹಣವನ್ನು ಹೂಡಲು ಬೇರೆ ದೇಶಗಳಿಂದ ಬಂಡವಾಳದಾರರು ಮುಂದೆ ಬಂದಿದ್ದಾರೆ ಇದರ ಪರಿಣಾಮವಾಗಿ ನಮ್ಮ ರಾಜ್ಯದ ಯುವ ಜನತೆಗೆ ಉದ್ಯೋಗ ಸೃಷ್ಟಿಯಾಗುವುದರ ಮೂಲಕ ನಿರುದ್ಯೋಗ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ದೊರಕಲಿದೆ ಎಂದು ಬಾಲಕೃಷ್ಣ ಸ್ವಾಮಿ ಯಾದವ್ ತಿಳಿಸಿದರು.
2018 ರಲ್ಲಿ ಕಾಂಗ್ರೆಸ್ ಮತ್ತು ಇತರೆ ಪಕ್ಷದ ಶಾಸಕರುಗಳನ್ನು ಖರೀಧಿಸಿ ರಾಜ್ಯದಲ್ಲಿ ಬಿಜೆಪಿ. ಅಧಿಕಾರಕ್ಕೆ ಬಂದಿದ್ದನ್ನು ಬಿಟ್ಟರೆ ಯಾವ ಅಭಿವೃದ್ದಿಯನ್ನು ಮಾಡಿಲ್ಲ. ರಾಜ್ಯದಿಂದ ತೆರಿಗೆ ಹಣ ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಅನುದಾನ ಕೊಡುತ್ತಿಲ್ಲ. ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ.ಗೆ ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಜನ ಬಿರುದು ಕೊಟ್ಟಿದ್ದರು. ಅಂತಹ ಯಾವ ಕಳಂಕವು ರಾಜ್ಯದ ಮುಖ್ಯಮಂತ್ರಿ ಮೇಲೆ ಇಲ್ಲ ಎಂದು ವಿರೋಧಿಗಳಿಗೆ ಬಿ.ಬಾಲಕೃಷ್ಣಸ್ವಾಮಿ ಎಚ್ಚರಿಸಿದರು.
ಹೊಸಪೇಟೆಯಲ್ಲಿ ನಡೆಯುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಹಾಡಿ, ಲಂಬಾಣಿತಾಂಡ, ಗೊಲ್ಲರಹಟ್ಟಿಗಳಲ್ಲಿ
ವಾಸಿಸುತ್ತಿರುವವರಿಗೆ 1,11,111 ಹಕ್ಕುಪತ್ರಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದರು.
ಅದರಂತೆ ವಿತರಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ 2560 ಹಕ್ಕುಪತ್ರಗಳು ಬಾಕಿಯಿದ್ದು, 2150 ಹಕ್ಕುಪತ್ರಗಳನ್ನು
ನೀಡಲಾಗುವುದು. ಈ ಸಮಾರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸಂಸದರು, ಸಚಿವರು, ಶಾಸಕರುಗಳು ಭಾಗವಹಿಸಲಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ. ತಾಜ್‍ಪೀರ್, ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ, ಡಿಸಿಸಿ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಂಪತ್‍ಕುಮಾರ್ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಕೆ.ಪಾಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1