ದ್ದರಾಮಯ್ಯ ಅವರು ಈ ಬಾರಿ ಪೂರ್ಣಾವಧಿ ಸಿಎಂ ನಾನೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಾಗ ಮಾತನಾಡಿದ್ದ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ. ಮುಂದೆ ನನ್ನ ನಂತರ ಯತೀಂದ್ರ ಹಾಗೂ ಮೊಮ್ಮಗ ಧವನ್ ರಾಕೇಶ್ ಇದ್ದಾರೆ ಎಂದು ವಂಶ ರಾಜಕಾರಣದ ಸುಳಿವು ನೀಡಿದ್ದರು.
ಹೀಗಾಗಿ ಮುಂದಿನ ಚುನಾವಣೆ ವೇಳೆ ಧವನ್ ಅವರ ರಾಜಕೀಯ ಪ್ರವೇಶ ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಚಾರ ಮುನ್ನೆಲೆಗೆ ಬಂದಿದೆ. ಯಾವ ಕ್ಷೇತ್ರದಿಂದ ಧವನ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ರಾಜಕೀಯಕ್ಕೆ ಎಂಟ್ರಿ ನೀಡುವ ಹೊತ್ತಿನಲ್ಲೇ ನಿಧನರಾಗಿದ್ದರು. ಬಳಿಕ ಯತೀಂದ್ರ ಅವರನ್ನು ರಾಜಕೀಯಕ್ಕೆ ಕರೆತರಲಾಯಿತು.
ಇನ್ನು ಸಿದ್ದರಾಮಯ್ಯ ಅವರು ಈ ಅವಧಿಗೆ ಮಾತ್ರವೇ ಚುನಾವಣಾ ರಾಜಕೀಯದಲ್ಲಿರುವುದಾಗಿ ಸೂಚನೆ ನೀಡಿದ್ದಾರೆ. ಮುಂದೆ ತಮ್ಮ ಮೊಮ್ಮಗನಾದ ರಾಕೇಶ್ ಅವರ ಪುತ್ರ ಧವನ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಸಜ್ಜಾಗಿದ್ದಾರೆ.
ಮೈಸೂರಿನ ವರುಣ ಕ್ಷೇತ್ರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರನ್ನು ಕಾಂಗ್ರೆಸ್ ಮುಖಂಡರು ಸ್ಮರಿಸಿದ್ದಾರೆ. ಇದೇ ವೇಳೆ ರಾಕೇಶ್ ಅವರ ಪುತ್ರ ಧವನ್ ಅವರಿಗೆ ರಾಜಕೀಯಕ್ಕೆ ಎಂಟ್ರಿ ಕೊಡುವಂತೆ ಗ್ರಾಮದ ಮುಖಂಡರು ವೇದಿಕೆಯಲ್ಲೇ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ರಾಕೇಶ್ ಅವರು ಅಪಾರ ಕೊಡುಗೆಗಳನ್ನ ನೀಡಿದ್ದು, ಧವನ್ ಮುಂದೆ ಶಾಸಕರಾಗಬೇಕು ಎಂದು ಕೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಅವರ ಪುತ್ರ ರಾಕೇಶ್ ಅವರ ಕೊಡುಗೆಯನ್ನು ಕ್ಷೇತ್ರದ ಜನತೆ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಧವನ್ ಅವರು ಶಾಸಕರಾಗುವ ಮೂಲಕ ರಾಜಕೀಯ ಪ್ರವೇಶಿಸಬೇಕು ಎಂದು ಜೈಕಾರ ಕೂಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ನಮ್ಮ ಗ್ರಾಮ ಹೇಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಅಂತಹ ಪರಿಸ್ಥಿಯಲ್ಲಿಯೂ ಗ್ರಾಮದ ಜನ ಸಿದ್ದರಾಮಯ್ಯ ಅವರನ್ನು ಕೈಬಿಡಲಿಲ್ಲ. ಧವನ್ ಅವರು ರಾಜಕೀಯಕ್ಕೆ ಬರಲೇಬೇಕು ಎಂದು ಆಸೆ ಬಿಚ್ಚಿಟ್ಟಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ವರುಣ ಕ್ಷೇತ್ರದ ಉಪ ಚುನಾವಣೆ ವೇಳೆ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಮುನ್ನ ಭವಿಷ್ಯದ ನಾಯಕ ಧವನ್ ರಾಕೇಶ್ ಎಂದು ಘೋಷಿಸಿ ಗಮನ ಸೆಳೆದಿದ್ದರು. ಆ ಮೂಲಕ ಧವನ್ ಮುಂದಿನ ಉತ್ತರಾಧಿಕಾರಿ ಎಂಬ ಸಂದೇಶ ಸಾರಿದ್ದರು. ವರುಣ ಕ್ಷೇತ್ರದ ಭವಿಷ್ಯದ ನಾಯಕ ಎಂದರೆ ಅದು ನನ್ನ ಮೊಮ್ಮಗ ಧವನ್ ರಾಕೇಶ್. ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಾಗಿ ಮುಂದಿನ ದಿನಗಳಲ್ಲಿ ಯತೀಂದ್ರ ಹಾಗೂ ನಂತರ ಮೊಮ್ಮಗ ಧವನ್ ರಾಜಕೀಯಕ್ಕೆ ಬರುತ್ತಾರೆ. ಈಗ ಅವನು ವಿದ್ಯಾಭ್ಯಾಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರ್ತಾನೆ, ಜನ ಅವನನ್ನು ಸ್ವೀಕರಿಸಬೇಕು ಸಿದ್ದರಾಮಯ್ಯ ಮನವಿ ಮಾಡಿದ್ದರು. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ವರುಣಾ ಕ್ಷೇತ್ರದಿಂದಲೇ ಧವನ್ ಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ.
Views: 50