SIIMA 2023 Nominations: ಕಾಂತಾರಾ V/S KGF-2; ಪ್ರಶಸ್ತಿ ರೇಸ್‌ನಲ್ಲಿ ಭಾರೀ ಪೈಪೋಟಿ..!‌

SIIMA Awards 2023 Nomination : ದೇಶದ ಅತ್ಯಂತ ಜನಪ್ರಿಯ ಪ್ರಶಸ್ತಿಗಳಲ್ಲಿ ಒಂದಾದ ದೇಶದ ಅತ್ಯಂತ ಜನಪ್ರಿಯ ಪ್ರಶಸ್ತಿಗಳಲಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ನ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ ‘KGF ಚಾಪ್ಟರ್- 2’, ‘ಕಾಂತಾರ’, ಸಿನಿಮಾಗಳು ನಾಮೆನೇಟ್‌ ಆಗಿವೆ.   

SIIMA Awards 2023 : ಪ್ರತಿ ವರ್ಷವೂ ಕನ್ನಡ, ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ SIIMA ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಹಿಂದಿನ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಈ ವರ್ಷ ನೀಡಾಲುಗ ಪ್ರಶಸ್ತಿ ಇದು. ಈಗಾಗಲೇ ನಾಮಿಮೇಷನ್‌ ಪಟ್ಟಿಯೂ ಬಿಡುಗಡೆಯಾಗಿದೆ. 

ದುಬೈನ ದಿ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 15 ಮತ್ತು 16ರಂದು ಸೈಮಾ 2023 ಈವೆಂಟ್ ನಡೆಯಲಿದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಭರ್ಜರಿಯಾಗಿ ಸೈಮಾ ಈವೆಂಟ್‌ ನಡೆದಿತ್ತು. ಇದೀಗ ಮುಂದಿನ ಅಂದರೇ 11ನೇ ಸೈಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. 

ಇನ್ನು ನಾಮೀನೇಷನ್‌ ಪಟ್ಟಿಯ ಬಗ್ಗೆ ಹೇಳುವುದಾದರೇ ಕನ್ನಡದ KGF ಚಾಪ್ಟರ್- 2, ಕಾಂತಾರ, ತೆಲುಗಿನ RRR, ಮತ್ತು ಸೀತಾ ರಾಮಂ, ತಮಿಳಿನ ಪೊನ್ನಿಯಿನ್ ಸೆಲ್ವನ್-1, ಮಲಯಾಳಂನ ಭೀಷ್ಮ ಪರ್ವಂ, ‘ಹೃದಯಂ’ ಸಿನಿಮಾಗಳು ಅವಾರ್ಡ್‌ ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿವೆ.

ಸದ್ಯ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ  KGF-2, ಲವ್‌ ಮಾಕ್ಟೇಲ್‌-2, ವಿಕ್ರಾಂತ್‌ ರೋಣ, ಚಾರ್ಲಿ777, ಚಿತ್ರಗಳು ನಅಮೇನೇಟ್‌ ಆಗಿದ್ದು, ಯಾವ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಗುತ್ತದೆ ಎನ್ನುವ ಕೂತುಹಲ ಹೆಚ್ಚಾಗುತ್ತಿದೆ. ಆಯಾ ಭಾಷೆಯ ಸಿನಿಮಾಗಳ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ. 

ಇನ್ನೊಂದು ಖುಷಿಯ ಸಂಗತಿಯೆಂದರೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ‘ಕಾಂತಾರ’ ಹಾಗೂ ‘KGF ಚಾಪ್ಟರ್- 2’ ತಲಾ 11 ವಿಭಾಗಗಳಲ್ಲಿ ಪ್ರಶಸ್ತಿ ನಾಮಿನೇಟ್ ಆಗಿದ್ದು, ಪ್ರಶಸ್ತಿಯ ರೇಸ್‌ನಲ್ಲಿ ಭಾರೀ ಪೈಪೋಟಿ ಇರಲಿದೆ. ಜೊತೆಗೆ ಬೇರೆ ಬೇರೆ ವಿಭಾಗಗಳಲ್ಲಿ ಯಾವ ಯಾವ ಸಿನಿಮಾ ನಾಮಿನೇಟ್ ಆಗಿವೆ ಎನ್ನುವುದರ ಪಟ್ಟಿ ರಿಲೀಸ್ ಆಗಿದೆ. ಇದರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳು ಇವೆ. 

Source : https://zeenews.india.com/kannada/entertainment/siima-2023-nominations-kantara-v/s-kgf-2-heavy-competition-in-the-award-race-149686

Leave a Reply

Your email address will not be published. Required fields are marked *