ಪದವಿ ಪೂರ್ವ ಉಪನ್ಯಾಸಕರ ಹೋರಾಟ ತೀವ್ರವಾಗುತ್ತಾ? ಚಿತ್ರದುರ್ಗ ದಲ್ಲಿ ಇಂದು ಮೌನ ಪ್ರತಿಭಟನೆ.

ವಿವಿಧ ಬೇಡಿಕೆ ಈಡೇರಿಕೆಗಾಗಿ ಪಿಯು ಉಪನ್ಯಾಸಕರ ಮೌನ ಮೆರೆವಣಿಗೆ-* ಬಿ.ಆರ್.ಮಲ್ಲೇಶ್,ಜಿಲ್ಲಾಧ್ಯಕ್ಷರು,

ಚಿತ್ರದುರ್ಗ ನ. 7

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ದಿನಾಂಕ:02/11/2025 ರಂದು ಬೆಂಗಳೂರಿನ ಶಾಸಕರ ಭವನ ಸಭಾಂಗಣದಲ್ಲಿ ನಡೆದ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಎರಡು ಹಂತದಲ್ಲಿ ಹೋರಾಟ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಈ ಸಂಬಂಧ ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಜಿಲ್ಲಾ ಮಟ್ಟದಲ್ಲಿ ನವೆಂಬರ್ 7 ನೇ ತಾರೀಖು ಸಂಜೆ 4 ಗಂಟೆಗೆ ಭಾರತ ರತ್ನ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್. ಮಲ್ಲೇಶ್ ತಿಳಿಸಿದರು.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಉಪನ್ಯಾಸಕರು ಯಾವುದೇ ಕಾರಣಗಳನ್ನು ನೀಡದೆ ಈ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಇಲಾಖೆಯ ಅಸ್ಮಿತೆ ಹಾಗೂ ನಮ್ಮಗಳ ಉಳಿವಿಗಾಗಿ ಈ ಪ್ರತಿಭಟನಾ ಮೆರವಣಿಗೆ ಅತಿ ಮುಖ್ಯವಾಗಿದೆ.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು 11&12 ನೇ ತರಗತಿಗಳು ಸಹಿತ ಪ್ರೌಢಶಾಲಾ ಹಂತದ 9&10 ನೇ ತರಗತಿಗಳಿಗೆ ಪಾಠ ಮಾಡಬೇಕೆಂಬ ಇಲಾಖೆಯ ನಿಯಮಾವಳಿ ತಿದ್ದುಪಡಿ ಮಾಡಿದ ಕಡತವನ್ನು ಮಾನ್ಯ ಶಿಕ್ಷಣ ಸಚಿವರ ಮುಂದೆ ಇಡಲಾಗಿದೆ.ಅವರ ಅಂಕಿತ ಬಿದ್ದು ಅಂಗೀಕಾರವಾಗುವ ಸಮಯ ದೂರವಿಲ್ಲ. ಹೀಗಾಗಿ ನಾವುಗಳು ಈ ಸಮಯದಲ್ಲಿ ಒಗ್ಗೂಡಿ ಹೋರಾಟದಲ್ಲಿ ಭಾಗಿಯಾಗದಿದ್ದರೆ ಪ್ರೌಢಶಾಲೆಯ ಭಾಗವಾಗುವುದು ನಿಶ್ಚಿತವಾಗಿದೆ.ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಯಲ್ಲಿ ಪರೀಕ್ಷಾ ವಿಭಾಗವನ್ನು ಸೇರ್ಪಡೆ ಮಾಡಲಾಗಿದೆ.ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಸ್ಥಿತಿಗತಿಗಳ ಪರೀಶಿಲನೆಗಾಗಿ ಡಯಟ್ ಉಪನ್ಯಾಸಕರನ್ನು ನಿಯೋಜಿಸಿ ಸುತ್ತೋಲೆ ಹೊರಡಿಸಲಾಗಿದೆ.ನಾವುಗಳು ನಿರ್ಲಕ್ಷ್ಯ ವಹಿಸಿದರೆ ಈಗ ಇರುವ ಬ್ರಾಕೇಟ್ ಒಳಗಿನ “ಪದವಿ ಪೂರ್ವ” ಎಂಬ ಪದ ಕೆಲವೇ ದಿನಗಳಲ್ಲಿ ಮಾಯವಾಗಬಹುದು.ಹೀಗಾಗಿ ಎಲ್ಲಾ ಪಿಯು ನೌಕರರು ಹೋರಾಟದಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಮನವೊಲಿಸಬೇಕಿದೆ ಎಂದರು.

ಪ್ರಾಂಶುಪಾಲರ ಸಂಘದ ಆದ್ಯಕ್ಷರಾದ ಪಿ ಎಂ.ಜಿ.ರಾಜೇಶ್ ಮಾತನಾಡಿ ನಮ್ಮ ನ್ಯಾಯಯುತ ಹೋರಾಟಕ್ಕೆ ಸರ್ಕಾರ ಮಣಿಯದಿದ್ದರೆ ಎರಡನೇ ಹಂತದಲ್ಲಿ ಮುಂದಿನ 20 ದಿನಗಳೊಳಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ಎಲ್ಲಾ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಸೇರಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವ ತೀರ್ಮಾನವನ್ನು ರಾಜ್ಯ ಸಂಘ ಕೈಗೊಂಡಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಎ.ಕಾಂತರಾಜು,ಖಜಾಂಚಿ ಎನ್.ಕೆಂಚವೀರಪ್ಪ, ಪ್ರಾಂಶುಪಾಲರ ಸಂಘದ ಕೋಶಾಧ್ಯಕ್ಷ ಡಾ.ಎಸ್.ಎ.ಖಾನ್,ಪ್ರಾಂಶುಪಾಲರಾದ ಆರ್.ಮುಸ್ತಫ,ಸಣ್ಣಪಾಲಯ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ,ಉಪನ್ಯಾಸಕರಾದ ಎಂ.ಜೈಶ್ರೀನಿವಾಸ್,ಟಿ.ಎಲ್ ನಾರಾಯಣನಾಯ್ಕ, ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ ಮುಂತಾದವರು ಭಾಗವಹಿಸಿದ್ದರು.

Views: 36

Leave a Reply

Your email address will not be published. Required fields are marked *