ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 30 ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ಆದೇಶ ಹೊರಡಿಸಿದನ್ನು ಪ್ರತಿಭಟಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದವತಿಯಿಂದ ಇಂದು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯದಲ್ಲಿರುವ ಬಡವರ
ಬಗ್ಗೆ ಕನಿಷ್ಟ ಕಾಳಜಿಯಿಲ್ಲದ ಹಾಗೂ ಸಂವೇದನಾಶೀಲವಲ್ಲದ ಸರ್ಕಾರವೊಂದು ತಗೆದುಕೊಳ್ಳಬಹುದಾದ ಮೂರ್ಖತನದ ನಿರ್ಧಾರ ಇದಾಗಿದೆ. ದೇಶದ ಜನರಿಗೆ ಅದರಲ್ಲೂ ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ೨೦೦೮ರಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆಯಡಿ ದೇಶಾದ್ಯಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಿದೆ.
ಇದರನ್ವಯ ಈಗಾಗಲೇ ದೇಶಾದ್ಯಂತ ೧೬೨೯೦ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ, ಕರ್ನಾಟಕ ರಾಜ್ಯದಲ್ಲಿ ೧೪೫೯ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಜನೌಷಧಿ ಕೇಂದ್ರಗಳ ಮೂಲಕ ಸುಮಾರು ೨೦೪೭ ಬಗೆಯ ಔಷಧಿಗಳು ಹಾಗೂ ೩೦೦ ಕ್ಕೂ ಹೆಚ್ಚು ಸರ್ಜಿಕಲ್ ಐಟಂಗಳು ರೋಗಿಗಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ ಎಂದರು.
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು
ಶಾಶ್ವತವಾಗಿ ಮುಚ್ಚಲು ಆದೇಶವನ್ನು ಹೊರಡಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ರಾಜ್ಯದ ಬಡವರ, ದೀನದಲಿತರ ಬಗ್ಗೆ
ಕಾಳಜಿಯಿದ್ದಿದ್ದೇ ಆದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಲಿ. ಎಂದು ಅಗ್ರಹಿಸಿದ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ
ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಪೂರೈಸುತ್ತೇವೆ, ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳಲ್ಲಿ ರೋಗಿಗಳು
ದುಡ್ಡುಕೊಟ್ಟು ಔಷಧಿಗಳನ್ನು ಕೊಂಡುಕೊಳ್ಳುವುದು ಬೇಡ ಎಂಬ ಸಮಜಾಯಿಷಿಯನ್ನು ಆರೋಗ್ಯ ಸಚಿವರು ನೀಡಿದ್ದಾರೆ, ಎಷ್ಟು
ಆಸ್ಪತ್ರೆಗಳಲ್ಲಿ ಔಷಧಿಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂಬುದನ್ನು ಮೊದಲು ಆರೋಗ್ಯ ಸಚಿವರು ಖಚಿತಪಡಿಸಿಕೊಳ್ಳಲಿ, ಈ ರಾಜ್ಯದ ಲಕ್ಷಾಂತರ ಜನರಿಗೆ ವರದಾನವಾಗಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಕೈಬಿಡಲಿ ಎಂದು
ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬಿಜೆಪಿಯ ಖಂಜಾಚಿಯಾದ ಮಾಧುರಿ ಗೀರೀಶ್ ಮಾತನಾಡಿ, ಆಸ್ಪತ್ರೆಗಳ ಆವರಣಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ
ಸುಮಾರು ೪೦೦ ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಮುಚ್ಚುವುದರ ಜೊತೆಗೆ ಹೊಸದಾಗಿ ಪ್ರಾರಂಭ ಮಾಡಲು ಸಲ್ಲಿಸಿರುವ
ಸುಮಾರು ೩೧ ಕ್ಕೂ ಹೆಚ್ಚು ಪ್ರಸ್ಥಾವನೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸುವ ನಿರ್ಧಾರ ಮಾಡಿದೆ. ಇದು ಈ ರಾಜ್ಯದ ಜನರಿಗೆ
ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ಕಳೆದ ೧೦ ವರ್ಷಗಳಲ್ಲಿ ಈ ದೇಶದ ಬಡಜನರಿಗೆ ಅಂದಾಜು ೩೦ ಸಾವಿರ
ಕೋಟಿಯಷ್ಟು ಹಣ ಔಷಧಿ ಖರೀದಿಯಿಂದ ಉಳಿತಾಯವಾದಂತಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ
ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಕೂಡಲೇ ಹಿಂಪಡೆಯಲಿ ಎಂದು ಒತ್ತಾಯಿಸಿದರು.
ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಗೆ
ದೊರೆಯುತ್ತಿರುವ, ಬಡ ರೋಗಿಗಳಿಗೆ ಸಹಾಯ ವಾಗುತ್ತಿರುವ ರಾಜ್ಯದಲ್ಲಿನ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು
ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ, ಖಾಸಗಿ ಔಷಧಿ ಸಂಸ್ಥೆಗಳ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಸರ್ಕಾರ ಜನೌಷಧಿ
ಕೇಂದ್ರಗಳನ್ನು ಮುಚ್ಚುವ ಮೂಲಕ ಬಡವರಿಗೆ ಅನ್ಯಾಯ ಮಾಡಲು ಹೊರಟಿದೆ. ರಾಜಕೀಯ ದುರುದ್ದೇಶದ ಸರ್ಕಾರದ ಈ
ತೀರ್ಮಾನ ರಾಜ್ಯದ ಬಡ ರೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಮಾರಕವಾಗಿದೆ. ಇರುವ ಜನೌಷಧಿ ಕೇಂದ್ರಗಳನ್ನು
ಮುಚ್ಚದೆ, ಮತ್ತಷ್ಟು ಕೇಂದ್ರಗಳನ್ನು ತೆರೆಯಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚಿರುವ ಸರ್ಕಾರ ಬಡವರಿಗೆ
ಅನ್ಯಾಯ ಮಾಡಿದೆ. ಪ್ರಸ್ತುತ ಆರೋಗ್ಯ ಸೇವೆಯ ವೆಚ್ಚ, ಔಷಧಿ ಬೆಲೆ ದುಬಾರಿಯಾಗಿ ಜನ ಸಂಕಷ್ಟ ಅನುಭವಿಸುತ್ತಿರುವ
ಸಂದರ್ಭದಲ್ಲಿ ಬಡಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಔಷಧಿ ಹಾಗೂ ಸರ್ಜಿಕಲ್ ಐಟಂಗಳು ದೊರೆಯಬೇಕು
ಆಶಯದಿಂದ ಕೇಂದ್ರ ಸರ್ಕಾರ ಜನೋಪಯೋಗಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಆದರೆ ರಾಜ್ಯ
ಸರ್ಕಾರ ಇಂತಹ ಔಷಧಿ ಕೇಂದ್ರಗಳನ್ನು ಮುಚ್ಚುವ ಮೂಲಕ ತಳಸಮುದಾಯ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೋವು
ಉಂಟಾಗುತ್ತದೆ. ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟರೆ ಸರ್ಕಾರದ ವಿರುದ್ಧ ಬಿಜೆಪಿ ಉಗ್ರ ಹೋರಾಟ ಮಾಡಲಾಗುತ್ತದೆ
ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಶೈಲಜ ರೆಡ್ಡಿ, ಜಿಲ್ಲಾ ವಕ್ತಾರವ ನಾಗರಾಜ್ ಬೇದ್ರೆ, ಮಾಧ್ಯಮ ಸಹ ಸಂಚಾಲಕ ತಿಪ್ಪೇಸ್ವಾಮಿ ಛಲವಾದಿ, ನಗರ ಮಾಜಿ ಅಧ್ಯಕ್ಷರಾದ ನವೀನ್ ಚಾಲುಕ್ಯ, ಕಾರ್ಯಕರ್ತರಾದ ಬಸಮ್ಮ, ಶಾಂತಮ್ಮ, ಮಂಜುಳಮ್ಮ, ವೀಣಾ ಕಿರಣ್, ಶುಂಭು, ಓಬಿಸಿ ಮೋರ್ಚಾದ ನಾಗರಾಜ್, ಭರತ್, ಯುವ ಮೋರ್ಚಾದ ವಿರೂಪಾಕ್ಷಪ್ಪ, ಬಸವರಾಜಪ್ಪ ಹುಲ್ಲೂರು, ಸುಮಾ,ಅರುಣಾ, ಗಾಯತ್ರಿ ದೇವಿ ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1