IPL 2023: RCB ಆಟಗಾರರಿಗೆ ವಿಶೇಷ ಪಾರ್ಟಿ ಆಯೋಜಿಸಿದ ಸಿರಾಜ್

IPL 2023: ಐಪಿಎಲ್​ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಈಗಾಗಲೇ ಆರ್​ಸಿಬಿ ತಂಡ ಬಂದಿಳಿದಿದೆ.ವಿಶೇಷ ಎಂದರೆ ಹೈದರಾಬಾದ್ ಸ್ಟೇಡಿಯಂ ಮೊಹಮ್ಮದ್ ಸಿರಾಜ್ ಅವರ ತವರು ಮೈದಾನ. ಹೀಗಾಗಿಯೇ ತವರಿಗೆ ಆಗಮಿಸುತ್ತಿದ್ದಂತೆ ಆರ್​ಸಿಬಿ ಆಟಗಾರರನ್ನು ಸಿರಾಜ್ ತಮ್ಮ ಹೊಸ ಮನೆಗೆ ಆಹ್ವಾನಿಸಿದ್ದರು.ಅದರಂತೆ ಹೈದರಾಬಾದ್​ನ ಫಿಲಂ ನಗರದಲ್ಲಿರುವ ಹೊಸ ಮನೆಯಲ್ಲಿ ಆರ್​ಸಿಬಿ ಆಟಗಾರರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ಈ ವೇಳೆ ಆರ್​ಸಿಬಿ ತಂಡದ ಕೋಚ್ ಸಂಜಯ್ ಬಂಗಾರ್, ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ಕಾಣಿಸಿಕೊಂಡಿದ್ದರು.ಅದರಂತೆ ಹೈದರಾಬಾದ್​ನ ಫಿಲಂ ನಗರದಲ್ಲಿರುವ ಹೊಸ ಮನೆಯಲ್ಲಿ ಆರ್​ಸಿಬಿ ಆಟಗಾರರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ಈ ವೇಳೆ ಆರ್​ಸಿಬಿ ತಂಡದ ಕೋಚ್ ಸಂಜಯ್ ಬಂಗಾರ್, ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ಕಾಣಿಸಿಕೊಂಡಿದ್ದರು.ಇದೀಗ ಮೊಹಮ್ಮದ್ ಸಿರಾಜ್ ಅವರ ಮನೆಯಲ್ಲಿನ ವಿಶೇಷ ಪಾರ್ಟಿಯ ಫೋಟೋಗಳನ್ನು ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.ಸದ್ಯ ಆರ್​ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಸಿರಾಜ್ 12 ಪಂದ್ಯಗಳಿಂದ 16 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ರೇಸ್​ನಲ್ಲಿದ್ದಾರೆ. ಇದೀಗ ತವರು ಮೈದಾನದಲ್ಲಿ ಕಣಕ್ಕಿಳಿಯುತ್ತಿರುವ ಕಾರಣ ಎಸ್​ಆರ್​ಹೆಚ್ ವಿರುದ್ದ ಸಿರಾಜ್ ಅವರಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.ಸಿರಾಜ್​ ಮನೆಯಲ್ಲಿ ಆರ್​ಸಿಬಿ ಆಟಗಾರರು

source https://tv9kannada.com/photo-gallery/cricket-photos/rcb-teammates-meet-sirajs-family-in-hyderabad-kannada-news-zp-580197.html

Views: 0

Leave a Reply

Your email address will not be published. Required fields are marked *