Smriti Mandhana: ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ಮಂಧಾನ! ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟರ್.

ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 102 ಎಸೆತಗಳಲ್ಲಿ 91 ರನ್‌ಗಳ ಇನಿಂಗ್ಸ್‌ ಕೇವಲ 9 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳಿದ್ದವು. ಸ್ಮೃತಿ ಈ ಪಂದ್ಯದಲ್ಲಿ ಶತಕ ವಂಚಿತರಾದರೂ, ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 211ರನ್​ಗಳ ಬೃಹತ್ ಅಂತರದಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬರೋಬ್ಬರಿ 314 ರನ್​ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ಕೇವಲ 103ರನ್​ಗಳಿಗೆ ಆಲೌಟ್ ಆಗುವ ಮೂಲಕ 211ರನ್​ಗಳಿಂದ ಸೋಲು ಕಂಡಿತು.

ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 102 ಎಸೆತಗಳಲ್ಲಿ 91 ರನ್‌ಗಳ ಇನಿಂಗ್ಸ್‌ ಕೇವಲ 9 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳಿದ್ದವು. ಸ್ಮೃತಿ ಈ ಪಂದ್ಯದಲ್ಲಿ ಶತಕ ವಂಚಿತರಾದರೂ, ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಈ ವರ್ಷ ರನ್​ಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಪ್ರತಿ ಮಾದರಿಯಲ್ಲೂ ಒಂದಲ್ಲ ಒಂದು ದಾಖಲೆ ಮಾಡುತ್ತಿದ್ದಾರೆ. ಇತ್ತೀಚೆಗೆ, ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಮೃತಿ T20 ಇಂಟರ್ನ್ಯಾಷನಲ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದರು.

ಇದೀಗ ವರ್ಷಾಂತ್ಯದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲೂ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ವಿಂಡೀಸ್ ವಿರುದ್ಧ ಮೊದಲ ಏಕದಿನದ ಪಂದ್ಯದಲ್ಲಿ 91 ರನ್​ ಗಳಿಸುವ ಮೂಲಕ ಈ ವರ್ಷ 1602 ರನ್​ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ವಿಶ್ವದಾಖಲೆ ನಿರ್ಮಿಸಿದರು.

ಈ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ ಹೆಸರಿನಲ್ಲಿತ್ತು. ಅವರೂ ಕೂಡ ಈ ವರ್ಷವೇ ಈ ದಾಖಲೆ ಮಾಡಿದ್ದರು. 2024ರಲ್ಲಿ ಅವರ ವೋಲ್ವಾರ್ಡ್ 1593 ರನ್‌ಗಳಿಸಿದ್ದಾರೆ. ಇನ್ನೂ 2 ಪಂದ್ಯಗಳಿರುವಂತೆ ಮಂಧಾನ 1600 ಗಡಿ ದಾಟಿದ್ದಾರೆ. ಮಹಿಳಾ ಕ್ರಿಕೆಟ್​ನಲ್ಲಿ 1600ರ ಗಡಿ ದಾಟಿ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಇದೊಂದೇ ಅಲ್ಲ, ಮಂಧಾನ ಈ ವರ್ಷ 4 ಶತಕ ಬಾರಿಸಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ 4 ಶತಕ ಸಿಡಿಸಿದ ಮೊದಲ ಮಹಿಳಾ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಒಂದು ವರ್ಷದಲ್ಲಿ 5 ODI ಶತಕಗಳನ್ನು ಗಳಿಸಿದ ಮೊದಲ ಮಹಿಳಾ ಬ್ಯಾಟ್ಸ್‌ಮನ್ ಆಗುವುದನ್ನು ಅವರು ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡರು. ಅವರು 2024 ರಲ್ಲಿ 11 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 65 ರ ಸರಾಸರಿ ಮತ್ತು 95.96 ರ ಸ್ಟ್ರೈಕ್ ರೇಟ್‌ನಲ್ಲಿ 690 ರನ್ ಗಳಿಸಿದ್ದಾರೆ. 136 ರನ್‌ ಅವರ ಗರಿಷ್ಠ ಸ್ಕೋರ್‌ ಆಗಿದೆ.

2013 ರಲ್ಲಿ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮಂಧಾನಾ ತಮ್ಮ ODI ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿಯವರೆಗೆ, ಅವರು 92 ಪಂದ್ಯಗಳ ಅನೇಕ ಇನ್ನಿಂಗ್ಸ್‌ಗಳಲ್ಲಿ ಸುಮಾರು 45 ರ ಸರಾಸರಿಯಲ್ಲಿ 3,903 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 9 ಶತಕಗಳನ್ನು ಸಿಡಿಸಿದ್ದಾರೆ. 136 ರನ್‌ಗಳ ಗರಿಷ್ಠ ಸ್ಕೋರ್‌. ಜೊತೆಗೆ 28 ​​ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಮಿಥಾಲಿ ರಾಜ್ ನಂತರ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಮಹಿಳಾ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *