
ಬಹುತೇಕ ಮಕ್ಕಳು (Children) ಶಾಲೆಯಿಂದ ಮನೆಗೆ ಬರುತ್ತಲೇ ಹಸಿವು ಎಂದು ಹೇಳುತ್ತವೆ. ಆದ್ರೆ ಮಕ್ಕಳು ಕೊಟ್ಟಿದ್ದ ಎಲ್ಲವನ್ನೂ ಖಂಡಿತ ತಿನ್ನಲ್ಲ. ಹಾಗಾಗಿ ಅಂತಹ ಮುದ್ದು ಮಕ್ಕಳಿಗೆ ಏನೇ ಮಾಡಿಕೊಡಬೇಕು ಅನ್ನೋ ಗೊಂದಲದಲ್ಲಿ ಅಮ್ಮಂದಿರು ಇರುತ್ತಾರೆ. ಇತ್ತ ಸಂಜೆ ಆಗುತ್ತಲೇ ಜನರಿಗೆ ಸ್ನಾಕ್ಸ್ (Snacks) ಬೇಕೆಂದು ಕೇಳುತ್ತಾರೆ. ಪ್ರತಿದಿನ ಬಜ್ಜಿ, ಬೋಂಡಾ, ಮಂಡಕ್ಕಿ ಅಂತ ಮಾಡಿ ಬೇಸರ ಆಗಿದ್ರೆ ಈ ರೆಸಿಪಿಯನ್ನು (New Recipe) ಟ್ರೈ ಮಾಡಬಹುದು. ಈ ರೆಸಿಪಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ರೆಸಿಪಿಯನ್ನು ಹೇಗೆ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಈ ಬ್ರೆಡ್ ರೆಸಿಪಿ ತುಂಬಾನೇ ಸರಳವಾಗಿದ್ದು, ಯಾರ ಬೇಕಾದ್ರೂ ಮಾಡಬಹುದು. ಇನ್ನು ಕೆಲವೇ ನಿಮಿಷಗಳಲ್ಲಿ ಇದು ಸಿದ್ಧವಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು
ಬ್ರೆಡ್: ನಾಲ್ಕು
ಮೊಸರು: 200 ಗ್ರಾಂ
ಪೆಪ್ಪರ್ ಪೌಡರ್: ಅರ್ಧ ಟೀ ಸ್ಪೂನ್
ಅಚ್ಚ ಖಾರದ ಪುಡಿ: ಅರ್ಧ ಟೀ ಟ್ಪೂನ್
ಅರಿಶಿನ: ಚಿಟಿಕೆ
ಸಾಸವೆ: ಒಂದು ಟೀ ಸ್ಪೂನ್
ಹಸಿ ಮೆಣಸಿನಕಾಯಿ: ಎರಡು
ಕರಿಬೇವಿನ ಎಲೆ: 7 ರಿಂದ 8
ತುಪ್ಪ: ಎರಡು ಟೀ ಸ್ಪೂನ್
ಕೋತಂಬರಿ ಸೊಪ್ಪು
ಉಪ್ಪು: ರುಚಿಗೆ ತಕ್ಕಷ್ಟು
ಬ್ರೆಡ್ ದಹೀ ಟೋಸ್ಟ್ ಮಾಡುವ ವಿಧಾನ
*ಮೊದಲಿಗೆ ಒಂದು ಬೌಲ್ಗೆ ಮೊಸರು ಹಾಕಿ ಕಡೆಗೋಲು ಬಳಸಿ ಚೆನ್ನಾಗಿ ಕಡೆದುಕೊಳ್ಳಿ. ನಂತರ ಇದಕ್ಕೆ ಪೆಪ್ಪರ್ ಪೌಡರ್, ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೋತಂಬರಿ ಸೊಪ್ಪು ಸೇರಿಸಿ ಮಾಡ್ಕೊಳ್ಳಿ.
*ತದನಂತರ ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಒಲೆ ಆನ್ ಮಾಡ್ಕೊಂಡು ಪಾತ್ರೆ ಇಟ್ಟುಕೊಳ್ಳಿ. ಇದಕ್ಕೆ ಒಂದು ಟೀ ಸ್ಪೂನ್ ತುಪ್ಪ ಹಾಕಿಕೊಳ್ಳಿ.
*ತುಪ್ಪ ಬಿಸಿ ಆಗುತ್ತಿದ್ದಂತೆ ಸಾಸವೆ, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಬೇಕು. ನಂತರ ಈ ಒಗ್ಗರಣೆಯನ್ನು ಕಡಿದುಕೊಂಡಿರುವ ಮೊಸರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
*ನಂತರ ಒಲೆ ಮೇಲೆ ಆನ್ ಮಾಡಿಕೊಂಡು ಅಗಲವಾದ ಪ್ಯಾನ್ ಇರಿಸಿಕೊಳ್ಳಿ. ಕಾವಲಿ ಬಿಸಿ ಆಗುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಬಿಸಿಯಾದ ಕಾವಲಿ ಅಥವಾ ಪ್ಯಾನ್ಗೆ ತುಪ್ಪ ಹಾಕಿ ಸವರಿಕೊಳ್ಳಿ.
*ತದನಂತರ ಸಿದ್ಧವಾಗಿರೋ ಮೊಸರಿನ ಮಿಕ್ಸ್ಗೆ ಬ್ರೆಡ್ಗಳನ್ನು ಹಾಕಿ ಎರಡೂ ಕಡೆ ಡಿಪ್ ಮಾಡಿಕೊಳ್ಳಬೇಕು. ಡಿಪ್ ಮಾಡಿದ ಬ್ರೆಡ್ಗಳನ್ನು ಕಾವಲಿಗೆ ಮೇಲೆ ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಫ್ರೈ ಮಾಡಿಕೊಳ್ಳಬೇಕು.
*ಎರಡೂ ಕಡೆ ಟೋಸ್ಟ್ ಆಗಿರೋ ಬ್ರೆಡ್ ಸರ್ವಿಂಗ್ ಪ್ಲೇಟ್ ನಲ್ಲಿರಿಸಿ ಈರುಳ್ಳಿ ಜೊತೆ ಸವಿದ್ರೆ ಇದರ ರುಚಿ ಹೆಚ್ಚಾಗುತ್ತದೆ.
Source : https://kannada.news18.com/news/lifestyle/dahi-bread-toast-recipe-in-kannada-mrq-1474872.html
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1