Snake Viral Video : 49 ವರ್ಷದ ವ್ಯಕ್ತಿಯೊಬ್ಬರು ಹಾವನ್ನು ಗುರುತಿಸಿದ್ದಾರೆ. ಅವರ ಮನೆಯಿಂದ ಅನತಿ ದೂರದಲ್ಲಿರುವ ಕೆರೆಯಲ್ಲಿ ಈ ಹಾವು ಸಿಕ್ಕಿದೆ ಎಂದು ಹೇಳಿದ್ದಾರೆ.

Snake Viral Video : ಹಸಿರು ಬಣ್ಣದ ಪೂರ್ತಿ ಪಾಚಿಯಂತಹ ರೋಮಗಳಿಂದ ಕೂಡಿರುವ ವಿಚಿತ್ರವಾಗಿ ಕಾಣುವ ಹಾವೊಂದು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ. ಇಂತಹ ಹಾವುಗಳಿವೆಯೇ ಎಂದು ನೆಟಿಜನ್‌ಗಳು ಆಶ್ಚರ್ಯ ಪಡುತ್ತಿದ್ದಾರೆ. ಥಾಯ್ಲೆಂಡ್‌ನ ಸಖೋನ್ ನಖೋನ್ ಪ್ರಾಂತ್ಯದಲ್ಲಿ ಹಾವು ಕಾಣಿಸಿಕೊಂಡಿದೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಸಖೋನ್ ನಖೋನ್ ಪ್ರಾಂತ್ಯದ 49 ವರ್ಷದ ವ್ಯಕ್ತಿಯೊಬ್ಬರು ಹಾವನ್ನು ಗುರುತಿಸಿದ್ದಾರೆ. ಅವರ ಮನೆಯಿಂದ ಅನತಿ ದೂರದಲ್ಲಿರುವ ಕೆರೆಯಲ್ಲಿ ಸಿಕ್ಕಿದೆ ಎಂದು ಹೇಳಿದರು. ಈ ವ್ಯಕ್ತಿ ಹಾವನ್ನು ಜಾಡಿಯಲ್ಲಿಟ್ಟು ಮನೆಗೆ ತಂದರು. ಹಾವನ್ನು ಕಂಡು ಅವರ ಕುಟುಂಬಸ್ಥರು ಬೆಚ್ಚಿಬಿದ್ದರು. ಅದನ್ನು ಜಾಡಿಯಿಂದ ಹೊರತೆಗೆದು ನೀರು ತುಂಬಿದ ಪಾತ್ರೆಯಲ್ಲಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆದ ಬಳಿಕ ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಹಾವುಗಳ ದೇಹದಲ್ಲಿ ಒಂದೇ ಒಂದು ಕೂದಲು ಇರುವುದಿಲ್ಲ. ಆದರೆ ಈ ಹಾವಿನ ಮೈತುಂಬಾ ಪಾಚಿಯಂತಹ ರೋಮಗಳಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಬಹುಶಃ ಆ ಹಾವು ನೀರಿನ ಪೈಪ್‌ನಲ್ಲಿ ದೀರ್ಘಕಾಲ ಸಿಲುಕಿಕೊಂಡಿರಬಹುದು. ಹಾಗಾಗಿಯೇ ಅದರ ಮೈಮೇಲೆ ಪಾಚಿ ಬೆಳೆದಿದೆ. ಇದರಿಂದ ಸಾಕಷ್ಟು ತೊಂದರೆ ಆಗಬಹುದು’ ಎಂದು ಹೇಳಿದರು. ಕೆಲವು ನೆಟ್ಟಿಗರು ಇದನ್ನು ಡ್ರ್ಯಾಗನ್ ಸ್ನೇಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Source : https://zeenews.india.com/kannada/india/a-video-of-a-strange-snake-with-moss-has-gone-viral-148561