ಸೊಲ್ಲಾಪುರ|ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಗ್ರಾ. ಪಂ. ಅಧ್ಯಕ್ಷೆ ಮಂಜುಳಾ ಸ್ವಾಮಿ ಚಾಲನೆ ; ಉತ್ತಮ ಆರೋಗ್ಯ, ನೆಮ್ಮದಿ ಬದುಕಿಗೆ ದಾರಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 22 : ಉತ್ತಮ ಆರೋಗ್ಯ ಒಂದಿದ್ದರೆ, ಕಂಡ ಕನಸುಗಳನ್ನೆಲ್ಲ ಈಡೇರಿಸಿಕೊಳ್ಳಬಹುದು ಹಾಗೂ ನೆಮ್ಮದಿಯ ಬದುಕಿನ ದಾರಿಯನ್ನು ಹಸನಾಗಿಸಿಕೊಳ್ಳಬಹುದು ಎಂದು ಜಾನುಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಸ್ವಾಮಿ ತಿಳಿಸಿದರು.

ತಾಲೂಕಿನ ಸೋಲಾಪುರ ಗ್ರಾಮದಲ್ಲಿ ಮಂಗಳವಾರ ಭಾರತೀಯ ರೆಡ್ ಕ್ರಾಸ್ ಘಟಕ, ಅಭಯ ಸಾಮಾಜಿಕ ಸಂಸ್ಥೆ, ಮಡಿಲು
ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮತ್ತು ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಜೀವನವನ್ನು ನಡೆಸಬೇಕಾದರೆ, ಉತ್ತಮ ಆಹಾರ ಶೈಲಿಯೂ ಕೂಡ ಅಷ್ಟೇ ಮುಖ್ಯ ಹಾಗಾಗಿ ಪ್ರಸ್ತುತ ದಿನಮಾನಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಸಮಯವನ್ನು ಕೊಡಬೇಕಾಗಿದೆ ಸಣ್ಣಪುಟ್ಟ ರೋಗಗಳು ಬಂದಾಗ ನಿರ್ಲಕ್ಷ ಮಾಡದಿರಿ ಅವುಗಳು ಜೀವಕ್ಕೆ ಕುತ್ತು ತರಬಹುದು, ಹಾಗಾಗಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಆರೋಗ್ಯದ ಕಾಳಜಿಯನ್ನು ವಹಿಸಬೇಕಿದೆ ಗ್ರಾಮಗಳ ಮನೆ
ಬಾಗಿಲಿಗೆ ಬಂದ ಆರೋಗ್ಯ ತಪಾಸಣ ಶಿಬಿರಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಆರೋಗ್ಯದ ಮಾಹಿತಿಯನ್ನು
ತಿಳಿದುಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಉಪಸಭಾಪತಿ ಅರುಣ್ ಕುಮಾರ್ ಮಾತನಾಡಿ ವರ್ಷದ ಮುಂಗಾರು ಆರಂಭಕ್ಕೂ ಮೊದಲು ಈ ಎರಡು ತಿಂಗಳಿಂದಲೇ ಪ್ರಾರಂಭವಾಗಿದ್ದು ಆರೋಗ್ಯದ ಬಗ್ಗೆ ಹೆಚ್ಚಿನದಾಗಿ ಕಾಳಜಿಯನ್ನು ವಹಿಸಬೇಕಾಗಿದೆ, ಮಳೆಗಾಲದ ಸಂದರ್ಭದಲ್ಲಿ ಮನೆಯ ಅಕ್ಕಪಕ್ಕ ಸಂಕ್ರಾಮಿಕ ರೋಗಗಳು ಹರಡುವಂತಹ ವಾತಾವರಣ ಸೃಷ್ಟಿಯಾಗಿದ್ದು ಮನೆಯ ಹಿಂದೆ-ಮುಂದೆ ಹಾಗೂ ಚರಂಡಿಗಳನ್ನು ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ತಿಳಿದು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು ಸಾಕಷ್ಟು ಸಾವು ನೋವುಗಳನ್ನು ಪತ್ರಿಕೆ- ಟಿವಿಗಳಲ್ಲಿ
ಗಮನಿಸಿದ್ದೇವೆ ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕಾಗಿದೆ, ಬೈಕ್
ಚಲಾಯಿಸುವಾಗ ಕಡ್ಡಾಯವಾಗಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಬೈಕ್‍ನ್ನು ಚಲಾಯಿಸಿ ಎಂದು ತಿಳಿಸಿದರು.

ಅಭಯ ಸಾಮಾಜಿಕ ಸಂಸ್ಥೆ ಕಾರ್ಯದರ್ಶಿ ಕಾವೇರಿ ಮಂಜಮ್ಮನವರ್ ಮಾತನಾಡಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಸಣ್ಣ ರೋಗ ದೊಡ್ಡ ರೋಗವಾಗಿ ಪರಿಣಮಿಸಬಹುದು ಹಾಗಾಗಿ ವೈದ್ಯರ ಬಳಿ ಹೋಗಿ ಆರೋಗ್ಯಕ್ಕೆ ತಕ್ಕ ಪರಿಹಾರವನ್ನು ಪಡೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದರು.

ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕುಮಾರಸ್ವಾಮಿ ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು
ಉತ್ತಮ ರೀತಿಯಲ್ಲಿ ಗ್ರಾಮೀಣ ಪ್ರದೇಶದವರು ಬಳಕೆ ಮಾಡಿಕೊಳ್ಳಲಿ ಎಂದರು,

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 200 ಹೆಚ್ಚು ಸಾರ್ವಜನಿಕರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು
ಔಷಧಿಗಳನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಕಾರ್ಯದರ್ಶಿ ಮಜಹರ್ ಉಲ್ಲಾ, ನಿರ್ದೇಶಕರಾದ ಡಾ. ಮಧುಸೂದನ್ ರೆಡ್ಡಿ,
ಗುರುಮೂರ್ತಿ, ಸುರೇಶ, ಶಿಕ್ಷಕ ರುದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ನಿಜಲಿಂಗಪ್ಪ, ಕೃಷಿ ಸಹಕಾರಿ ಪತ್ತಿನ ಸದಸ್ಯ ವೀರೇಶ್,
ಮತ್ತು ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಆನಂದ್, ಮಹಾಂತೇಶ್, ಅಭಯ ಸಾಮಾಜಿಕ ಸಂಸ್ಥೆ
ಸದಸ್ಯರಾದ ಮಂಜುನಾಥ್ ನೇತ್ರಾವತಿ, ನಾಗರಾಜ್, ಲೋಹಿತ್, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಲೊಕೇಶ, ಗ್ರಾಮದ
ಮುಖಂಡರಾದ, ರವಿ ಒಡೆಯರ್, ನಾಗಪ್ಪ, ಸ್ವಾಮಿ, ಕುಮಾರ್, ಷಣ್ಮುಖ, ಓಬಣ್ಣ ಹಾಗೂ ಇತರರು ಇದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *