Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್​ಗೆ ಬಾಲಿವುಡ್ ಹೀರೋ ಫೈನಲ್? ಐಶ್ವರ್ಯಾ ರಜನಿಕಾಂತ್ ನಿರ್ದೇಶನ

Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್​ಗೆ ಬಾಲಿವುಡ್ ಹೀರೋ ಫೈನಲ್? ಐಶ್ವರ್ಯಾ ರಜನಿಕಾಂತ್ ನಿರ್ದೇಶನ

ಇತ್ತೀಚೆಗೆ ಬಯೋಪಿಕ್ ಟ್ರೆಂಡ್ ಜೋರಾಗಿದೆ. ಹಲವು ವ್ಯಕ್ತಿಗಳ ಕುರಿತು ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಪೈಕಿ ಅನೇಕ ಸಿನಿಮಾಗಳು ಹಿಟ್ ಆಗಿವೆ. ಈಗ ಭಾರತ ಕಂಡ ಅಪ್ರತಿಮ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ (Sourav Ganguly) ಬಗ್ಗೆ ಬಯೋಪಿಕ್ ಸಿದ್ಧವಾಗುತ್ತಿದೆ. ಟೀಂ ಇಂಡಿಯಾ ನಾಯಕನಾಗಿ, ಬಿಸಿಸಿಐನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಅವರ ಬಯೋಪಿಕ್ ಮಾಡಲು ಸಿದ್ಧತೆ ನಡೆದಿದೆ. ಸದ್ಯ ಪ್ರೀಪ್ರೊಡಕ್ಷನ್ ಹಂತದಲ್ಲಿ ಈ ಸಿನಿಮಾ ಇದ್ದು, ಶೀಘ್ರವೇ ಸೆಟ್ಟೇರಲಿದೆ. ಸೌರವ್ ಗಂಗೂಲಿ ಪಾತ್ರಕ್ಕೆ ಆಯುಷ್ಮಾನ್ ಖುರಾನ (Ayushmann Khurrana) ಅವರು ನಾಯಕನಾಗಿ ನಟಿಸುತ್ತಿದ್ದಾರೆ ಎಂದು ವರದಿ ಆಗಿದೆ.

ಆಯುಷ್ಮಾನ್ ಖುರಾನ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರ ಚಿತ್ರಕ್ಕೆ ಬಂಡವಾಳ ಹೂಡಿದರೆ ಮಿನಿಮಮ್ ಬಿಸ್ನೆಸ್ ಆಗುತ್ತದೆ ಅನ್ನೋದು ನಿರ್ಮಾಪಕರ ನಂಬಿಕೆ. ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಆಯುಷ್ಮಾನ್​ ಈಗ ದಾದಾ ಬಯೋಪಿಕ್​ನಲ್ಲಿ ಮಿಂಚಲು ರೆಡಿ ಆಗಿದ್ದಾರೆ.

ಆಯುಷ್ಮಾನ್ ಖುರಾನಾ ಜೊತೆ ನಿರ್ಮಾಪಕರು ಈಗಾಗಲೇ ಕೆಲವು ಹಂತದ ಮಾತುಕತೆ ನಡೆಸಿದ್ದಾರೆ. ಕಳೆದ ಕೆಲ ತಿಂಗಳಿಂದ ಚರ್ಚೆ ನಡೆಯುತ್ತಿದೆ. ಆಯುಷ್ಮಾನ್ ಅವರು ಹಲವು ರೀತಿಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಅವರು ಸೌರವ್ ಗಂಗೂಲಿ ಪಾತ್ರಕ್ಕೆ ಹೊಂದಿಕೆ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಐಶ್ವರ್ಯಾ ರಜನಿಕಾಂತ್​ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿ ಇಬ್ಬರ ಬಂಧನ

ಈ ಚಿತ್ರಕ್ಕೆ ರಜನಿಕಾಂತ್ ಮಗಳು ಐಶ್ವರ್ಯಾ ನಿರ್ದೇಶನ ಮಾಡುತ್ತಾರೆ ಎನ್ನುವ ಮಾತಿದೆ. ಐಶ್ವರ್ಯಾ ರಜನಿಕಾಂತ್ ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಭೇಷ್ ಎನಿಸಿಕೊಂಡಿದ್ದಾರೆ. ಈಗ ಅವರ ಕೈಗೆ ಬಯೋಪಿಕ್ ನೀಡಲಾಗುತ್ತಿದೆ. ವಿಕ್ರಮಾದಿತ್ಯ ಮೋಟ್ವಾನೆ ಅವರು ಸೌರವ್ ಗಂಗೂಲಿ ಬಯೋಪಿಕ್ ನಿರ್ದೇಶನಕ್ಕೆ ಮೊದಲ ಆಯ್ಕೆ ಆಗಿತ್ತು. ಆದರೆ, ಅವರು ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದ ಕಾರಣ ಈ ಬಯೋಪಿಕ್ ಐಶ್ವರ್ಯಾ ಅವರ ಕೈ ಸೇರಿದೆ.

ಈ ಮೊದಲು ತೆರೆಗೆ ಬಂದಿದ್ದ ‘83’ ಸಿನಿಮಾ ಸಾಧಾರಣ ಗಳಿಕೆ ಮಾಡಿತ್ತು. 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ಈ ಚಿತ್ರ ಸಿದ್ಧಗೊಂಡಿತ್ತು. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

source https://tv9kannada.com/entertainment/bollywood/ayushmann-khurrana-to-act-as-sourav-ganguly-in-his-boipic-aishwarya-rajinikanth-to-helm-the-project-rmd-590759.html

Leave a Reply

Your email address will not be published. Required fields are marked *