ಚಿತ್ರದುರ್ಗ ಡಿ. 6
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಆಗ್ನೇಯ ಪದವೀಧರ ಕ್ಷೇತ್ರದ ಆಕಾಂಕ್ಷಿಯಾದ ವಸಂತ್ ಕುಮಾರ್ ಇಂದು ಚಿತ್ರದುರ್ಗದ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಜಿಲ್ಲಾಧ್ಯಕ್ಷರ ಜೊತೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ನೋಂದಣಿ ಸಂಬಂಧ ಪಟ್ಟಂತೆ ಚರ್ಚಿಸಿ ನೋಂದಣಿ ಸಂಬಂಧ ಪಟ್ಟಂತೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ನೊಂದಣಿ ಸಂಚಾಲಕರಾದ ಚಲವಾದಿ ತಿಪ್ಪೇಸ್ವಾಮಿಯವರನ್ನು ಭೇಟಿ ಮಾಡಿ ನಮೂನೆ 18 ಫಾರಂಗಳನ್ನು ಡಿಸ್ಟ್ರಿಬ್ಯೂಟ್ ಮಾಡಲಾಯಿತು.
ಚಿತ್ರದುರ್ಗ ನಗರ ನೋಂದಣಿ ಸಂಚಾಲಕರಾದ ಬಸವೇಶ್ ಮತ್ತು ಗ್ರಾಮಾಂತರ ಸಂಚಾಲಕರಾದ ಸಿದ್ದೇಶ್ ಯಾದವ್ ರವರನ್ನು ಭೇಟಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪದವಿದರರನ್ನು ನೋಂದಣಿ ಮಾಡುವಂತೆ ವಿನಂತಿ ಮಾಡಲಾಯಿತು.
ನಾಯಕನಹಟ್ಟಿ ತಿಪ್ಪೇಸ್ವಾಮಿ ದರ್ಶನ ಪಡೆದು ಮಂಡಲ ಅಧ್ಯಕ್ಷರಾದ ಮಲ್ಲೇಶ್ ರವರನ್ನು ಭೇಟಿ ಮಾಡಿ ನೊಂದಣಿ ಸಂಬಂಧಪಟ್ಟಂತೆ ಚರ್ಚಿಸಲಾಯಿತು ಮತ್ತು ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾದ ಶ್ರೀರಾಮ್ ರೆಡ್ಡಿ ಅವರನ್ನು ಭೇಟಿ ಮಾಡಿ ಮೊಳಕಾಲ್ಮೂರು ತಾಲೂಕಿನ ಚುನಾವಣಾ ಸಂಬಂಧಿಸಿದ ಚರ್ಚೆ ನಡೆಸಲಾಯಿತು ನಿಕಟ ಪೂರ್ವ ಮೊಣಕಾಲ್ಮೂರು ಬಿಜೆಪಿ ಅಧ್ಯಕ್ಷರಾದ ಡಾಕ್ಟರ್ ಮಂಜುನಾಥ್ ಭೇಟಿ ಮಾಡಲಾಯಿತು.
ಚಳ್ಳಕೆರೆಗೆ ಭೇಟಿಕೊಟ್ಟು ವಕೀಲರುಗಳು ಪಧವೀದರನ್ನು ಭೇಟಿ ಮಾಡಿ ಚುನಾವಣೆಗೆ ಸಹಕರಿಸುವಂತೆ ವಿನಂತಿಸಲಾಯಿತು ನನ್ನ ಜೊತೆಯಲ್ಲಿ ಜಿಲ್ಲಾ ಬಿಜೆಪಿ ನೋಂದಣಿ ಸಂಚಾಲಕರಾದ ತಿಪ್ಪೇಸ್ವಾಮಿ ಬಿಜೆಪಿ ಯುವ ಮುಖಂಡರಾದ ಸೋನಾ ದರ್ಶನ್ ಉಪಸ್ಥಿತರಿದ್ದರು.