
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 09: ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿ.ವಿ.ಗುಂಡಪ್ಪ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ. ಮಾನನಷ್ಠ ಮೊಕದ್ದಮೆ, ನಾಯ್ಯಾಲಯ ನಿಂದನೆ ಇವೆರಡು ಪತ್ರಕರ್ತರ ಮುಂದಿರುವ ಸವಾಲುಗಳು, ದೌರ್ಜನ್ಯ, ದಬ್ಬಾಳಿಕೆ, ಕಿರುಕುಳದಿಂದ ಸಾರ್ವಜನಿಕರು ಹೇಗೆ ಕಾನೂನು ಮೂಲಕ ರಕ್ಷಣೆ ಪಡೆದುಕೊಳ್ಳಬಹುದೆಂಬುದನ್ನು ಮಾಧ್ಯಮಗಳು ಬರವಣಿಗೆ ಮೂಲಕ ಅರಿವು ಮೂಡಿಸಬೇಕಿದೆ ಎಂದರು.

ಸ್ವಾಸ್ಥ್ಯ ಸಮಾಜ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ತುಂಬಾ ಮುಖ್ಯ. ನ್ಯಾಯಾಲಯ ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೊಡುವ ಅಂಗ. ಅದೇ ರೀತಿ ಪತ್ರಿಕಾರಂಗ ಸಂವಿಧಾನದ ನಾಲ್ಕನೆ ಅಂಗ. ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಪತ್ರಕರ್ತನಾದವನು ದೇಶದ ಗಡಿ ಕಾಯುವ ಸೈನಿಕನಿದ್ದಂತೆ. ಇತಿಮಿತಿಯಲ್ಲಿ
ಕೆಲಸ ಮಾಡಬೇಕು. ಯಾವುದೇ ಒಂದು ಸುದ್ದಿಯನ್ನು ಪ್ರಕಟಿಸುವ ಮುನ್ನ ಸಾಕ್ಷಿ, ಮತ್ತು ಸಂಗತಿಯನ್ನು ಗ್ರಹಿಸಬೇಕು. ಸತ್ಯ, ನಿಖರತೆ, ವಸ್ತುನಿಷ್ಟತೆಯನ್ನು ಪತ್ರಕರ್ತ ಮೈಗೂಡಿಸಿಕೊಂಡರೆ ಎಂತಹ ಸಂದರ್ಭದಲ್ಲಾದರೂ ಸಮಸ್ಯೆಗೆ ಒಳಗಾಗುವುದಿಲ್ಲ ಎಂದು ತಿಳಿಸಿದರು.
ವಕೀಲರು, ಪತ್ರಕರ್ತರು, ಚಿತ್ರನಟರಾದ ಎಂ.ವಿ.ರೇವಣಸಿದ್ದಯ್ಯರವರು “ಮಾನನಷ್ಟ ಮೊಕದ್ದಮೆ ಹಾಗೂ ನ್ಯಾಯಾಂಗ ನಿಂದನೆಯ ಬಗ್ಗೆ
ಉಪನ್ಯಾಸ ನೀಡುತ್ತಾ, ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ನಾಲಕ್ನೇ ಅಂಗವಾಗಿ ವಾಚ್ ಡಾಗ್ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ.
ಪತ್ರಿಕಾರಂಗ ಪ್ರಬಲವಾಗ ಮಾಧ್ಯಮವಾಗಿದೆ. ಪತ್ರಿಕೆಯನ್ನು ಓದುವುದರಿಂದ ಮನಸ್ಸಿಗೆ ಸಂತೋಷವನ್ನು ನಿಡುತ್ತದೆ. ದೃಶ್ಯ
ಮಾಧ್ಯಮಗಳು ಪತ್ರಿಕೆಗಳು ನೀಡಿದಂತೆ ಸರಿಯಾದ ರೀತಿಯಲ್ಲಿ ಜನತೆ ಸುದ್ದಿಯನ್ನು ನೀಡುತ್ತಿಲ್ಲ, ಯಾವಾಗಲೂ ತಮ್ಮ ಟಿಆರ್‍ಪಿಯ ಕಡೆ
ಗಮನ ನೀಡುತ್ತಾರೆ. ನೋಡುಗರಿಗೆ ಬೇಕಾದ ಮಾಹಿತಿಯಾಗಲಿ ಸುದ್ದಿಯನ್ನಾಗಲೀ ನೀಡುವುದಿಲ್ಲ, ದೃಶ್ಯ ಮಾಧ್ಯಮಗಳು ಬಂದ ಮೇಲೆ
ಪತ್ರಿಕೆಗಳು ಕಡಿಮೆಯಾಗುತ್ತವೆ ಎಂದು ಬಹಳಷ್ಟು ಜನತೆ ಹೇಳುತ್ತಿದ್ದರು ಆದರೆ ಯಾವ ಪತ್ರಿಕೆಗಳು ಕಡಿಮೆಯಾಗಿಲ್ಲ ಇನ್ನೂ ಹೆಚ್ಚಿನ
ರೀತಿಯಲ್ಲಿ ಹೊಸ ಹೊಸ ಪತ್ರಿಕೆಗಳು ಬರುತ್ತಿವೆ ಎಂದರು.
ಪತ್ರಿಕೆಗಳಲ್ಲಿ ಮಾನಹಾನಿಗೆ ಸಂಬಂಧಪಟ್ಟಂತೆ ಸುದ್ದಿ ಪ್ರಕಟವಾದರೆ ಅದಕ್ಕೆ ಸಂಬಂಧಪಟ್ಟಂತೆ ಶೇ. 10 ರಿಂದ 20 ರಷ್ಟು ಜನ ಮಾತ್ರ
ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದರಲ್ಲಿ ಶೇ. 10ರಷ್ಟು ಜನ ಮಾತ್ರ ಮುಂದುವರೆಯುತ್ತಾರೆ ಇದರಲ್ಲಿಯೂ ಸಹಾ ಶೇ.5 ರಷ್ಟು
ಜನ ಮಾತ್ರ ನ್ಯಾಯಾ ಸಿಗುವವರೆಗೂ ಹೋರಾಟವನ್ನು ಮಾಡುತ್ತಾರೆ. ಪತ್ರಕರ್ತರಾದವರು ನ್ಯಾಯಾಲಯದ ತೀರ್ಪಿನ ಬಗ್ಗೆಯೂ ಸಹಾ
ತಮ್ಮ ಪತ್ರಕೆಗಳಲ್ಲಿ ಬರೆಯಬಹುದಾಗಿದೆ ಆದರೆ ಅದಕ್ಕೆ ತಕ್ಕ ಸಾಕ್ಷಿ, ಪುರಾವೆಗಳನ್ನು ಇಟ್ಟುಕೊಳ್ಳಬೇಕಿದೆ. ನ್ಯಾಯಾಲಯದ ಸುದ್ದಿಗಳನ್ನು
ಪ್ರಕಟ ಮಾಡಿದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ, ನ್ಯಾಯಾಲದ ವಿರುದ್ದ ಏನಾದರೂ ಸುದ್ದಿ ಪ್ರಕಟವಾದರೆ ಮಾತ್ರ ನ್ಯಾಯಾಂಗ
ನಿಂದನೆಯಾಗುತ್ತದೆ, ತಮ್ಮ ಪತ್ರಿಕೆಗಳಲ್ಲಿ ನ್ಯಾಯಾಲಯದ ಬಗ್ಗೆಯಾಗಲೀ ನ್ಯಾಯಾಧೀಶರ ಬಗ್ಗೆ ಬರೆಯುವಾಗ ಸರಿಯಾದ
ಸಾಕ್ಷಿಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಪತ್ರಕರ್ತರ ಅಹೋಬಲಪತಿ ಮಾತನಾಡಿ ಪತ್ರಕರ್ತನಾದವನು ಎಲ್ಲವನ್ನು ಬಲ್ಲೆ ಎಂಬ
ಭ್ರಮೆಯಲ್ಲಿರಬಾರದು. ವಿದ್ಯಾರ್ಹತೆ, ವೃತ್ತಿಯ ಜೊತೆಯಲ್ಲಿ ಕಾನೂನು ಅರಿವು ಮುಖ್ಯ. ಸುದ್ದಿಯನ್ನು ಪ್ರಕಟಿಸುವ ತವಕದಲ್ಲಿ ಕೆಲವೊಮ್ಮೆ
ಮಾನ ನಷ್ಟಕ್ಕೊಳಗಾಗಬೇಕಾಗುತ್ತದೆ. ನ್ಯಾಯಾಂಗ ನಿಂದನೆಯಾಗದಂತೆಯೂ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುವ ಚಾಣಾಕ್ಷತನ
ಪತ್ರಕರ್ತನಿಗಿರಬೇಕು. ಅದಕ್ಕಾಗಿ ಪತ್ರಕರ್ತ ಇಂತಹ ಉಪನ್ಯಾಸಗಳ ಮೂಲಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು
ಅರಿತುಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್‍ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ, ಎಸ್.ಜೆ.ಎಂ.ಕಾನೂನು ಕಾಲೇಜು ಪ್ರಾಧ್ಯಾಪಕರಾದ ಸುಮನ ಅಂಗಡಿ
ವೇದಿಕೆಯಲ್ಲಿದ್ದರು. ನಿಹಾರಿಕ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ನಾಕಿಕೆರೆ ತಿಪ್ಪೇಸ್ವಾಮಿ ನಿರೂಪಿಸಿದರು.