ಚಿತ್ರದುರ್ಗ ಬಿಜೆಪಿ ನಗರ ಮಂಡಲದಿಂದ ವಿಶೇಷ ತರಬೇತಿ ಅಭಿಯಾನ.

ಚಿತ್ರದುರ್ಗ ಏ. 10 
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬಿಜೆಪಿ ಚಿತ್ರದುರ್ಗ ನಗರ ಮಂಡಲದವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನದ ಪ್ರಯುಕ್ತ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮವನ್ನು ನಗರದ ಮುರುಘರಾಜೇಂದ್ರ ಮಠದ ಅಲ್ಲಮ ಪ್ರಭು ಸಭಾಭವನದಲ್ಲಿ ದಿನಾಂಕ 11/4/26 ಶನಿವಾರ ಬೆಳಗ್ಗೆ 9:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

ಚಿತ್ರದುರ್ಗ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ, ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಮಾಜಿ ಶಾಸಕರಾದ ಎಸ್.ಕೆ ಬಸವರಾಜನ್, ವಿಭಾಗ ಸಹ ಪ್ರಭಾರಿಗಳಾದ ಎ.ಮುರುಳಿ, ಪ್ರಶಿಕ್ಷಣ ಅಭಿಯಾ ನದ ಜಿಲ್ಲಾ ಸಂಯೋಜಕರಾದ ಜಿ.ಎಚ್ ಮೋಹನ್‍ಕುಮಾರ್, ನಗರಾಧ್ಯಕ್ಷರಾದ ಹೆಚ್.ಎನ್ ಲೋಕೇಶ್ ಕುಮಾರ್, ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ಬಿಎಲ್‍ಎ 2 ಭೂತ ಅಧ್ಯಕ್ಷರು, ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published. Required fields are marked *