
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 20 : ಜಿಲ್ಲಾಸ್ಪತ್ರೆಗೆ ಸಂಸದ ಗೋವಿಂದ ಕಾರಜೋಳ ಇಂದು ಧೀಢರನೆ ಭೇಟಿ ನೀಡಿ ಜಿಲ್ಲಾಸ್ಪತ್ರೆ ರೌಂಡ್ಸ್ ಹೊಡೆದರು. ಜಿಲ್ಲಾಸ್ಪತ್ರೆಯ ಪುರುಷ ಮತ್ತು ಮಹಿಳಾ ವಾರ್ಡ್, ಔಷದಿ ದಾಸ್ತಾನು, ರಕ್ತ ಪರೀಕ್ಷೆ ಲ್ಯಾಬ್, ಆಪರೇಷನ್ ಥಿಯೇಟರ್ ಹಾಗೂ ಶೌಚಾಲಯ ಸೇರಿದಂತೆ ವಿವಿಧ ಕಡೆ ವೀಕ್ಷಣೆ ಮಾಡಿದ ಸಂಸದ ಗೋವಿಂದ ಕಾರಜೋಳ ಅವರು ಪರಿಶೀಲನೆ ನಡೆಸಿದ್ದು ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡುವಂತೆ ಸಲಹೆ ನೀಡಿದರು.

ಅಷ್ಟೇ ಅಲ್ಲದೆ ರೋಗಿಗಳ ಜೊತೆ ಮಾತನಾಡಿದ ಶಾಸಕರು ವೈಧ್ಯರು ಚಿಕಿತ್ಸೆ ನೀಡುವ ಕುರಿತು ಮಾಹಿತಿ ಪಡೆದಿದ್ದು ವೈಧ್ಯರು ಸರಿಯಾದ
ಚಿಕಿತ್ಸೆ ನೀಡುತ್ತಾರೋ ಇಲ್ಲವೋ ಎಂದು ಮಾಹಿತಿ ಪಡೆದರು. ಅಷ್ಟೇ ಅಲ್ಲದೆ ಜಿಲ್ಲಾಸ್ಪತ್ರೆಗೆ ಅತೀ ಹೆಚ್ಚು ಬಡವರು ಬರುತ್ತಾರೆ. ನಾನಾ
ಬಾಗದಿಂದ ಸಾವಿರಾರು ಮಂದಿ ನಿತ್ಯ ವಿವಿಧ ಬಗೆಯ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದು ಹೋಗಿ ಮಾಡುತ್ತಿದ್ದು ವೈಧ್ಯರು ಸಿಬ್ಬಂದಿಗಳು
ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮವಾದ ಸೇವೆಯನ್ನು ರೋಗಿಗಳಿಗೆ ನೀಡಲಾಗುತ್ತಿದೆ, ಸಾಧ್ಯವಾದಷ್ಟು ಔಷಧಿಗಳನ್ನು ಆಸ್ಪತ್ರೆಯಿಂದಲೇ
ನೀಡುವ ಕಾರ್ಯವನ್ನು ಮಾಡಿ ನಿಮ್ಮಲ್ಲಿ ಸಿಬ್ಬಂದಿಯ ಕೊರತೆ ಇದೆ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಮಾಡಲು ಸರ್ಕಾರಕ್ಕೆ ಪತ್ರವನ್ನು
ಬರೆಯಿರಿ ಅದನ್ನು ನಾನು ಫಾಲೋ ಮಾಡುತ್ತೇನೆ ಚಿತ್ರದುರ್ಗ ಜಿಲ್ಲೆ ಬಡ ಜಿಲ್ಲೆಯಾಗಿದೆ ಇಲ್ಲಿ ಬಡವರು ಹೆಚ್ಚಾಗಿದ್ದಾರೆ, ತಮ್ಮ ರೋಗಗಳಿಗೆ
ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸುತ್ತಾರೆ ಅಲ್ಲೆ ಇಲ್ಲಿ ಎರಡು ರಾಷ್ಟ್ರೀಯ ಹೆದ್ಧಾರಿಗಳು ಹಾದು ಹೋಗುವುದರಿಂದ ಅಘಫಾತವಾದಾಗ
ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಇಲ್ಲಿ 450 ಬೆಡ್‍ಗಳಿದ್ದರು ರೋಗಿಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆ. ಇಷ್ಟಾದರೂ ಸಹಾ ಆಸ್ಪತ್ರೆಯವರು
ಎಲ್ಲವನ್ನು ನೋಡುತ್ತಾ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ನಮ್ಮಲ್ಲಿ ಹೆಚ್ಚಿನ ವೈದ್ಯರು ಇಲ್ಲದ ಕಾರಣ ಇರುವ ವೈದ್ಯರಲ್ಲಿಯೇ ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ ಈ ಮಧ್ಯೆ ಪಿಜಿಯನ್ನು
ಮಾಡುವ ವೈದ್ಯರುಗಳು ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ ಎಲ್ಲವನ್ನು ವೈದ್ಯರೇ ಮಾಡುವ ಪ್ರಸಂಗ ಬಂದಿದೆ ಇದಲ್ಲದೆ
ಪಿಜಿಯನ್ನು ಮಾಡುವ ಹುಡುಗರು ಇಲ್ಲಿನ ವೈದ್ಯರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಸಂಸದರ ಬಳಿ ಜಿಲ್ಲಾ ಅಸ್ಪತ್ರೆಯ
ವ್ಯದ್ಯರುಗಳು ದೂರನ್ನು ನೀಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಅವರ ಬಗ್ಗೆ ಕ್ರಮವನು ತೆಗೆದುಕೊಳ್ಳಿ ಒಂದಿಬ್ಬರಿಗೆ ನೋಟಿಸ್
ನೀಡಿ ಬಗ್ಗದಿದ್ದರೆ ಪೋಲಿಸ್ ದೂರನ್ನು ನೀಡಿ ಅವರ ಪ್ರಮಾಣ ಪತ್ರ ಸಿಗದಂತೆ ಮಾಡಿ ಆಗ ಅವರಿಗೆ ಬುದ್ದಿ ಬರುತ್ತದೆ ಎಂದು ತಿಳಿಸಿದರು.
ಇನ್ನೂ ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಮಾಧುರಿ ಗೀರಿಶ್, ವಕ್ತಾರ ನಾಗರಾಜ್ ಬೇದ್ರೇ, ಜಿಲ್ಲಾಸ್ಪತ್ರೆ ಹಿರಿಯ
ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.