SRH vs LSG: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಕುತೂಹಲ ಕೆರಳಿಸಿದ ಎಸ್​ಆರ್​ಹೆಚ್-ಲಖನೌ ಕದನ

SRH vs LSG: ಐಪಿಎಲ್​ನಲ್ಲಿಂದು ಡಬಲ್ ಧಮಾಕ: ಕುತೂಹಲ ಕೆರಳಿಸಿದ ಎಸ್​ಆರ್​ಹೆಚ್-ಲಖನೌ ಕದನ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಹೈದರಾಬಾದ್​ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೇಂಟ್ಸ್ (SRH vs LSG) ತಂಡ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಎಲ್​ಎಸ್​​ಜಿ ಸೋತರೆ ಆರ್​ಸಿಬಿ ತಂಡಕ್ಕೆ ಸಹಕಾರಿ ಆಗಲಿದೆ. ಮತ್ತೊಂದು ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಶಿಖರ್ ಧವನ್ ಅವರ ಪಂಜಾಬ್ ಕಿಂಗ್ಸ್ (DC vs PBKS) ಅನ್ನು ಎದುರಿಸಲಿದೆ. ಅಂತಿಮ ಘಟ್ಟದತ್ತ ಟೂರ್ನಿ ಸಾಗುತ್ತಿರುವ ಕಾರಣ ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಎಸ್​ಆರ್​ಹೆಚ್-ಲಖನೌ:

ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಟೂರ್ನಿ ರೋಚಕತೆಯತ್ತ ತಲುಪುತ್ತಿರುವ ಕಾರಣ ಎಸ್​ಆರ್​ಹೆಚ್​ಗೆ ಗೆಲುವು ಅನಿವಾರ್ಯ. ಆದರೆ, ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ 215 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ್ದು ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ. ಅಭಿಷೇಕ್ ಶರ್ಮಾ ಹಾಗೂ ಅನ್ಮೋಲ್​ಪ್ರೀತ್ ಸಿಂಗ್ ಭರ್ಜರಿ ಆಗಿ ಬ್ಯಾಟ್ ಬೀಸುತ್ತಿದ್ದಾರೆ. ರಾಹುಲ್ ತ್ರಿಪಾಠಿ, ನಾಯಕ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಪಿಲಿಪ್ಸ್ ಕೂಡುಗೆ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಹೈದರಬಾದ್ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ ಮತ್ಯಾರು ಮಾರಕವಾಗಿ ಗೋಚರಿಸುತ್ತಿಲ್ಲ. ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್ ಲಯಕಂಡುಕೊಳ್ಳಬೇಕಿದೆ. ಮಯಾಂಕ್ ಮಾರ್ಕಂಡೆ ಸ್ಪಿನ್ ಕೆಲಬಾರಿಯಷ್ಟೆ ಕೆಲಸ ಮಾಡುತ್ತಿದೆ.

ಇತ್ತ ಲಖನೌ ತಂಡ ಕೂಡ ಅತ್ಯಂತ ಬಲಿಷ್ಠವಾಗಿದೆ. ತಂಡದ ನಾಯಕ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿರುವುದು ಬೇಸರದ ಸಂಗತಿ. ಎಲ್​ಎಸ್​ಜಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಖೈಲ್ ಮೇಯರ್ಸ್ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಆಯುಷ್ ಬದೋನಿ, ಮಾರ್ಕಸ್ ಸ್ಟಾಯಿನಿಸ್ ಹಾಗೂ ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಬಲವಾಗಿದ್ದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ. ದೀಪಕ್ ಹೂಡ ಕಡೆಯಿಂದ ಇನ್ನಷ್ಟು ಉತ್ತಮ ಆಟ ಬರಬೇಕಿದೆ. ನಾಯಕ ಕ್ರುನಾಲ್ ಪಾಂಡ್ಯ ಕೂಡ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ. ಬೌಲಿಂಗ್​ನಲ್ಲಿ ನವೀನ್ ಉಲ್ ಹಖ್, ಆವೇಶ್ ಖಾನ್, ರವಿ ಬಿಷ್ಟೋಯಿ ಹಾಗೂ ಅಮಿತ್ ಮಿಶ್ರಾ ಉತ್ತಮ ಫಾರ್ಮ್​ನಲ್ಲಿದ್ದಾರೆ.

IPL 2023: ಐಪಿಎಲ್​ನಲ್ಲಿ ಹೊಸ ತಂಡದ ಖರೀದಿಗೆ ನಟ ರಾಮ್ ಚರಣ್ ಪ್ಲ್ಯಾನ್..?

ಡೆಲ್ಲಿ-ಪಂಜಾಬ್:

ಡೆಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿತ್ತು. ಮುಂದಿನ ಸುತ್ತಿಗೆ ತೇರ್ಗಡೆ ಆಗಬೇಕಾದರೆ ಉಳಿದಿರುವ ಎಲ್ಲ ಪಂದ್ಯಗಳನ್ನು ದೊಡ್ಡ ಮೊತ್ತದ ಅಂರೆದಿಂದ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಆರಂಭದಲ್ಲಿ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿರಲಿಲ್ಲ. ಆದರೀಗ ವಾರ್ನರ್ ಕೂಡ ಬೇಗನೆ ಔಟಾಗುತ್ತಿದ್ದಾರೆ. ಪೃಥ್ವಿ ಶಾ ಬದಲಿಗೆ ಜಾಗ ಪಡೆದುಕೊಂಡ ಪಿಲಿಪ್ ಸಾಲ್ಟ್ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಮಿಚೆಲ್ ಮಾರ್ಶ್ ಹಾಗೂ ರಿಲೀ ರುಸ್ಸೋ ನೆರವಾಗುತ್ತಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲಿ ಡೆಲ್ಲಿ ಮಾರಕವಾಗಿಲ್ಲ. ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕು.

ಪಂಜಾಬ್ ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಿತ್ತು. ನಾಯಕ ಶಿಖರ್ ಧವನ್ ಕಡೆಯಿಂದ ಮಾತ್ರ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬರುತ್ತಿದೆ. ಪ್ರಭುಸಿಮ್ರಾನ್ ಸಿಂಗ್ ಅವರು ಧವನ್ ಜೊತೆ ಉತ್ತಮ ಆರಂಭ ಒದಗಿಸಬೇಕಿದೆ. ಲಿಯಾಮ್ ಲಿವಿಂಗ್​ಸ್ಟೋನ್, ಭನುಕಾ ರಾಜಪಕ್ಷ ಸ್ಫೋಟಕ ಬ್ಯಾಟಿಂಗ್ ನಡೆಸಬೇಕಿದೆ. ಜಿತೇಶ್ ಶರ್ಮಾ ಸಾಥ್ ನೀಡುತ್ತಿದ್ದಾರೆ. ಸ್ಯಾಮ್ ಕುರ್ರರನ್ ಕಡೆಯಿಂದ ಆಲ್ರೌಂಡ್ ಆಡ ಬರಬೇಕು. ಬೌಲಿಂಗ್​ನಲ್ಲಿ ಪಂಜಾಬ್ ದುರ್ಬಲವಾಗಿದೆ. ಹಿಂದಿನ ಪಂದ್ಯದಲ್ಲಿ ಅರ್ಶ್​ದೀಪ್ ಸಿಂಗ್, ನೇಥನ್ ಎಲಿಸ್, ರಾಹುಲ್ ಚಹರ್, ಹರ್ಪ್ರೀತ್ ಬ್ರರ್ ಇದ್ದರೂ ಮಾರಕವಾಗುತ್ತಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/todays-ipl-2023-match-sunrisers-hyderabad-vs-lucknow-super-giants-and-delhi-capitals-vs-punjab-kings-vb-576998.html

Leave a Reply

Your email address will not be published. Required fields are marked *