SRH vs RCB, IPL 2023: ಐಪಿಎಲ್​ನಲ್ಲಿಂದು ಆರ್​ಸಿಬಿ ಪಂದ್ಯ: ಹೈದರಾಬಾದ್ ವಿರುದ್ಧ ಗೆಲ್ಲಲೇ ಬೇಕಿದೆ ಫಾಫ್ ಪಡೆ

SRH vs RCB, IPL 2023: ಐಪಿಎಲ್​ನಲ್ಲಿಂದು ಆರ್​ಸಿಬಿ ಪಂದ್ಯ: ಹೈದರಾಬಾದ್ ವಿರುದ್ಧ ಗೆಲ್ಲಲೇ ಬೇಕಿದೆ ಫಾಫ್ ಪಡೆ
SRH vs RCB

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2023) ಮಹತ್ವದ ಪಂದ್ಯ ನಡೆಯಲಿದೆ. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿರುವ ಫಾಫ್ ಡುಪ್ಲೆಸಿಸ್ (Faf Duplessis) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸನ್​ರೈಸರ್ಸ್ ಹೈದರಾಬಾದ್ (SRH vs RCB) ತಂಡವನ್ನು ಎದುರಿಸಲಿದೆ. ಹೈದರಾಬಾದ್​ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಏರ್ಪಡಿಸಲಾಗಿದೆ. ಆರ್​ಸಿಬಿ ಸದ್ಯ 12 ಪಂದ್ಯಗಳಲ್ಲಿ ತಲಾ ಆರು ಗೆಲುವು-ಸೋಲು ಕಂಡು 12 ಅಂಕ ಸಂಪಾದಿಸಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್ ರೇಸ್​ನಲ್ಲಿ ಉಳಿಯಬೇಕಾದರೆ ಬೆಂಗಳೂರು ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ.

ಆರ್​ಸಿಬಿ:

ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆದ್ದು ಬೀಗಿತ್ತು. ಬೌಲಿಂಗ್​ನಲ್ಲಿ ಮಾರಕವಾಗಿದ್ದ ಫಾಫ್ ಪಡೆ ಆರ್​ಆರ್ ತಂಡವನ್ನು ಕೇವಲ 59 ರನ್​ಗಳಿಗೆ ಆಲೌಟ್ ಮಾಡಿತ್ತು. ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಮಹಿಪಾಲ್ ಲುಮ್ರೂರ್ ಮತ್ತೊಮ್ಮೆ ಅಬ್ಬರಿಸಬೇಕಿದೆ. ದಿನೇಶ್ ಕಾರ್ತಿಕ್, ಅನುಜ್ ರಾವತ್ ಕಡೆಯಿಂದ ಇನ್ನಷ್ಟು ರನ್ ಬರಬೇಕು.

ಕೇದರ್ ಜಾಧವ್ ಒಂದು ಬಾರಿ ಮಾತ್ರ ಕಣಕ್ಕಿಳಿದಿದ್ದರು. ಬೌಲಿಂಗ್​ನಲ್ಲಿ ಆರ್​ಸಿಬಿ ಲಯ ಕಂಡುಕೊಂಡಿದೆ. ಮೊಹಮ್ಮದ್ ಸಿರಾಜ್ ಮತ್ತು ವೇಯ್ನ್ ಪಾರ್ನೆಲ್ ತಂತ್ರದೊಂದಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಮಿಚೆಲ್ ಬ್ರೆಸ್​ವೆಲ್ ಕೂಡ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಹನಿಂದು ಹಸರಂಗ ಪ್ಲೇಯಿಂಗ್ ಇಲೆವೆನ್​ಗೆ ಕಮ್​ಬ್ಯಾಕ್ ಮಾಡ್ತಾರ ನೋಡಬೇಕು. ಕರ್ಣ್ ಶರ್ಮಾ ಮಾರಕವಾಗಿದ್ದಾರೆ.

IPL 2023: ಈ ಐಪಿಎಲ್​ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಐವರು ಬೌಲರ್​ಗಳಿವರು..!

ಹೈದರಾಬಾದ್​:

ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದ್ದು ಟೂರ್ನಿಯಿಂದ ಹೊರಬಿದ್ದಿದೆ. ತಂಡದಿಂದ ಸಂಘಟಿತ ಪ್ರದರ್ಶನ ಬರುತ್ತಿಲ್ಲ. ಅಭಿಷೇಕ್ ಶರ್ಮಾ, ಅನ್ಮೋಲ್​ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ನಾಯಕ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಪಿಲಿಪ್ಸ್ ಕೆಲ ಪಂದ್ಯ ಆಡಿದರೆ ಉಳಿದ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಬೌಲಿಂಗ್​ನಲ್ಲಿ ಹೈದರಬಾದ್ ಪರ ಭುವನೇಶ್ವರ್ ಕುಮಾರ್ ಬಿಟ್ಟರೆ ಮತ್ಯಾರು ಮಾರಕವಾಗಿ ಗೋಚರಿಸುತ್ತಿಲ್ಲ. ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಟಿ. ನಟರಾಜನ್ ಲಯಕಂಡುಕೊಳ್ಳಬೇಕಿದೆ. ಮಯಾಂಕ್ ಮಾರ್ಕಂಡೆ ಸ್ಪಿನ್ ಕೆಲಬಾರಿಯಷ್ಟೆ ಕೆಲಸ ಮಾಡಿದೆ.

ಆರ್​​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲುಮ್ರೂರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕೇದರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜ್ಲೆವುಡ್, ಹರ್ಷಲ್ ಪಟೇಲ್, ಸುಯಶ್ ಪ್ರಬ್ ಪಟೇಲ್ , ವಿಜಯ್‌ಕುಮಾರ್ ವೈಶಾಕ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ, ಮನೋಜ್ ಭಾಂಡಗೆ, ವೇಯ್ನ್ ಪಾರ್ನೆಲ್, ಸೋನು ಯಾದವ್, ಫಿನ್ ಅಲೆನ್, ಸಿದ್ದಾರ್ಥ್ ಕೌಲ್.

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಆ್ಯಡಂ ಮರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ವಿವ್ರಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ಮಯಾಂಕ್ ಡಾಗರ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಆದಿಲ್ ರಶೀದ್, ಕಾರ್ತಿಕ್ ತ್ಯಾಗಿ, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ನಿತೀಶ್ ರೆಡ್ಡಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-will-see-its-sixty-fifth-match-of-this-season-between-srh-and-royal-challengers-bangalore-vb-581223.html

Leave a Reply

Your email address will not be published. Required fields are marked *