ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಸಹಾಯ ಹಸ್ತ.

ಚಿತ್ರದುರ್ಗ ಏ. 6 : ಯುಗಾದಿ ಹಬ್ಬದ ಸಮಯದಲ್ಲಿ ಮನೆಯೊಂದರಲ್ಲಿ ಸಿಲಿಂಡರ್‌ಗೆ ಬೆಂಕಿ ಹಂಚಿಕೊಂಡ ಹಿನ್ನಲೆ ಮನೆಯಲ್ಲಿದ್ದವರು ಹೊರಗಡೆ ಬಂದ ತಮ್ಮ ಪ್ರಾಣವನ್ನು ಉಳಿಸಿಕೊಂಡ ಘಟನೆ ಮೇದೇಹಳ್ಳಿ ಗ್ರಾಮದಲ್ಲಿ ನಡೆದಿದ್ದು ಇಂತಹವರ ಮನೆಗೆ ಭೋವಿ ಸಮಾಜದ ಗುರುಗಳಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಇಂದು ಬೇಟಿ ನೀಡಿ ಸಾಂತ್ವಾನ ಹೇಳಿ ಧನ ಹಾಗೂ ದಿನಸಿಯನ್ನುನೀಡುವುದರ ಮೂಲಕ ಸಹಾಯ ಹಸ್ತವನ್ನು ನೀಡಿದರು.

ಇಂದು ಮನೆಗೆ ಭೇಟಿ ನೀಡಿದ ಶ್ರೀಗಳು ಮನೆಯನ್ನು ಪೂರ್ಣ ಪ್ರಮಾಣದಲ್ಲಿ ವೀಕ್ಷಿಸಿ ಅನಾಹುತ ಆದ ಬಗ್ಗೆ ಮನೆಯವರಿಂದ
ವಿವರಣೆಯನ್ನು ಪಡೆದರು, ಈ ಸಮಯದಲ್ಲಿ ಗೋಪಿ ಘಟನೆ ನಡೆದ ಬಗ್ಗೆ ಶ್ರೀಗಳಿಗೆ ಪೂರ್ಣವಾದ ವಿವರವನ್ನು ನೀಡಿದರು ಈ
ಸಮಯದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಅವರ ತಾಯಿಯವರಿಂದಲೂ ಸಹಾ ಶ್ರೀಗಳು ಘಟನೆ ನಡೆದ ಬಗ್ಗೆ ಮಾಹಿತಿ ಪಡೆದರು.

ಗೋಪಿ ಅಭ್ಯಾಸವನ್ನು ಮಾಡುತ್ತಿದ್ದು ಅದಕ್ಕೂ ಸಹಾ ಶ್ರೀಮಠದಿಂದ ನೆರವನ್ನು ಮುಂದಿನ ದಿನದಲ್ಲಿ ನೀಡಲಾಗುವುದೆಂದು ತಿಳಿಸಿ ಈ ಸಮಯದಲ್ಲಿ ಶ್ರೀಮಠದವತಿಯಿಂದ ೨೫.೦೦೦ ರೂ, ಹಾಗೂ ಮನೆಯ ಬಳಕೆಗೆ ದಿನಸಿ ಸಾಮಾನುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ತಿಮ್ಮಣ್ಣ, ವೆಂಕಟೇಶ್, ಚಂದ್ರು ಸೇರಿದಂತೆ ಇತರರು
ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *