ಚಿತ್ರದುರ್ಗ ಆ. 16
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶನಿವಾರ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶಾಲೆಯಲ್ಲಿನ ಎಲ್.ಕೆ.ಜಿ. ಹಾಗೂ ಯು ಕೆ.ಜಿ. ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯವರ ವೇಷವನ್ನು ಹಾಕಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಭಾರತೀಯರು ಶ್ರೀಕೃಷ್ಣನ ಜನ್ಮದಿನವನ್ನು ಶ್ರೀಕೃಷ್ಣಜನ್ಮಾಷ್ಟಮಿ, ಸಾತಮ ಆಥಮ, ಗೋಕುಲಾಷ್ಟಮಿ, ಅಷ್ಟಮಿ ರೋಹಿಣಿ, ಶ್ರೀಕೃಷ್ಣ ಜಯಂತಿ ಎಂದು ಆಚರಿಸುತ್ತಾರೆ. ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀಕೃಷ್ಣನನ್ನು ಶೃಂಗಾರ ಮಾಡಿ, ತೊಟ್ಟಿಲಲ್ಲಿ ತೂಗಿ, ಮೃಷ್ಟಾನ್ನಗಳ ನೈವೇದ್ಯವನ್ನು ಅರ್ಪಣೆ ಮಾಡುತ್ತಾರೆ. ಜೀವನದಲ್ಲಿ ಸುಖ ಶಾಂತಿಗಾಗಿ ಅವನನ್ನು ಆಹ್ವಾನಿಸುತ್ತಾರೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ.
ಮಾರನೆಯ ದಿನ ಪುನ: ನಮ್ಮ ಜೀವನಯಾತ್ರೆ ಎಂದಿನಂತೆ ಪ್ರಾರಂಭವಾಗುತ್ತದೆ. ಸಡಗರ ಸಂಭ್ರಮದಿಂದ ಮಾಡಿದ ಆಚರಣೆ ಮುಂದಿನ ಹಬ್ಬ ಬರುವವರೆಗೆ ನಿಂತು ಹೋಗುತ್ತದೆ. ನಾವು ಮಾಡುವ ಹಬ್ಬಗಳ ಆಚರಣೆಯು ನಮಗೆ ಖುಷಿ, ಉಲ್ಲಾಸ, ಉತ್ಸಾಹ,ಧ್ಯೆರ್ಯ, ಸಾಹಸವನ್ನು ನೀಡುತ್ತದೆ. ವಿಶ್ವವು ಇಂದು ಕುರುಕ್ಷೇತ್ರವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಮಹಾಭಾರತ ಯುದ್ಧ ನಡೆಯುತ್ತ್ತಿದೆ. ನಾವೇ ಅರ್ಜುನರಾಗಿ ಶ್ರೇಷ್ಠ ಆಚರಣೆ ಯನ್ನು ಮತ್ತು ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಸಾಗರವನ್ನು ಪಾರುಮಾಡುವ ಅವಶ್ಯಕತೆ ಇದೆÀ ಎಂದರು.
ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಕೃಷ್ಣನ ಪಾತ್ರಧಾರಿಗಳಿಗೆ ಮಡಿಕೆ ಹೊಡೆಯು ಕಾರ್ಯವನ್ನು ಏರ್ಪಡಿಸ ಲಾಗಿತ್ತು, ಮಕ್ಕಳು ಬಹಳ ಶ್ರಮವನ್ನು ಪಟ್ಟು ಮಡಿಕೆಯನ್ನು ಹೊಡೆಯುವುದರ ಮೂಲಕ ಅದರಲ್ಲಿ ಇದ್ದ ಚಾಕಲೇಟುಗಳನ್ನು ಬಾಚಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಕøತ ಪಾಠ ಶಾಲೆಯ ಮುಖ್ಯ ಶಿಕ್ಷಕರಾದ ಗಣಪತಿ ಶಾಸ್ತ್ರಿ ಹಾಗೂ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು, ಭಾಗವಹಿಸಿದ್ದರು.
Views: 8