ಚಿತ್ರದುರ್ಗ ಸೆ. 23 ಆಗಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರವೇ ಕೈಗೆಟುಕುವ ಸ್ಥಿತಿಯಲ್ಲಿಲ್ಲದಿರುವಾಗ ಹೊಟ್ಟೆಗೆ ಹಿಟ್ಟು, ನೆತ್ತಿಗೆ ಜ್ಞಾನ ನೀಡಿದ ಕೋಣನ ವಂಶಸ್ಥರ ಅನ್ನ ಮತ್ತು ಜ್ಞಾನ ದಾಸೋಹದಿಂದ ಇಂದು ಉತ್ತಮ ಸ್ಥಿತಿಯಲ್ಲಿದ್ದೇವೆ. ಆ ಶಾಲೆ ಅಂದು ಇಲ್ಲದಿದ್ದು ನಮ್ಮ ಇಂದಿನ ಸ್ಥಿತಿ ಊಹಿಸಲ ಸಾಧ್ಯ! ಅನ್ನ-ಅಕ್ಷರ ನೀಡಿ ನಮ್ಮ ಇಡೀ ಕುಟುಂಬವೇ ಉತ್ತಮ ಸ್ಥಿತಿಯಲ್ಲಿರಲು ಕಾರಣವಾದ ನಾ- ಕಲಿತ ಶಾಲೆಯ ಋಣ ತೀರಿಸುವ ಅವಕಾಶ ನಿಮ್ಮಿಂದಾಗಿ ಒದಗಿ ಬಂದಿದೆ ಎಂದು ಮುಷ್ಪಲಗುಮ್ಮಿಯ ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳ
ಸಂಘದ ಅಧ್ಯಕ್ಷರಾದ ಸಿ.ಬೋರಯ್ಯ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ-ವಿಜಯನಗರ ಮತ್ತು ದಾವಣಗೆರೆ ಈ ಮೂರೂ ಜಿಲ್ಲೆಗಳ ಗಡಿಭಾಗಕ್ಕೆ ಹೊಂದಿಕೊಂಡ ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶವಾದ ಈ ಭಾಗದಲ್ಲಿ ಶೇ. 95ರಷ್ಟು ಎಸ್ಸಿ/ಎಸ್‍ಟಿ/ಹಿಂದುಳಿದ ಅನಕ್ಷರಸ್ಥ ಬಡ ಕುಟುಂಬಗಳು ವಾಸಿಸುವಂತಹ ಕುಗ್ರಾಮದಲ್ಲಿ 1963-64ನೇ ಸಾಲಿನಲ್ಲಿ ವಿದ್ಯೆ ಮತ್ತು ಅಕ್ಷರ ಕನಸಿನ ಮಾತಾಗಿದ್ದ ಸಂದರ್ಭದಲ್ಲಿ ಇಲ್ಲಿನ ಕೋಣನ ವಂಶಸ್ಥರ ಮುಂದಾಲೋಚನೆ ಮತ್ತು ಅಕ್ಷರ ದಾಸೋಹದ ಕೈಂಕರ್ಯದಿಂದಾಗಿ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಸ್ಥಾಪಿತವಾದ ಫಲದಿಂದಾಗಿ ಈ ಭಾಗದ ಕಡು ಬಡತನದ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡು ಸಮಾಜದ ಉನ್ನತ ಸ್ವರಗಳಲ್ಲಿ ಗುರುತಿಸಿಕೊಂಡು ತಮ್ಮ ಅಕ್ಷರ ನೀಡಿದ ಅಕ್ಕರೆಯ ಶಾಲೆಯನ್ನು ಕೃತಜ್ಞತೆಯಿಂದ ಸ್ಮರಿಸಲು ಕಾರಣವಾಗಿದೆ ಎಂದರು.
1965 ರಿಂದ ಎಸ್.ಎಸ್.ಎಲ್.ಸಿ. ಪಾಸಾಗಿ ಹೊರ ಹೋದ ಹಳೆಯ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲೆಯ ಸಿಬ್ಬಂದಿ ತ್ವರಿತಗತಿಯಲ್ಲಿ
ಸಿದ್ಧಪಡಿಸಿಕೊಟ್ಟಿತು. ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳ ಸಂಘ (ರಿ.) ಖಜಾಂಚಿಗಳಾದ ಹೊಸೂರಿನ ಹೆಚ್.ಸಿ.
ಶಿವಶಂಕರಮೂರ್ತಿಯವರು ಹಳೆಯ ವಿದ್ಯಾರ್ಥಿಗಳ ನೆಲೆ ಪತ್ತೆ ಹಚ್ಚಿ, ಸಂಪರ್ಕವನ್ನು ಸಾಧಿಸಿ ಒಂದು ಪಟ್ಟಿಯನ್ನು ತಯಾರಿಸಿಕೊಟ್ಟರು.
ಈ ಜೋಡಿ ತಯಾರಿಸಿಕೊಟ್ಟ ಪಟ್ಟಿಯ ಜಾಡನ್ನು ಹಿಡಿದು, ಸುಮಾರು 18 ಸಾವಿರ ಕಿಲೋಮೀಟರ್ ಓಡಾಡಿ ಸುಮಾರು 450ಕ್ಕೂ ಹೆಚ್ಚು
ಹಳೆಯ ವಿದ್ಯಾರ್ಥಿಗಳನ್ನು ಮುಖತಃ ಭೇಟಿಯಾಗಿ, ನಮ್ಮ ಹಳೆಯ ಮಿತ್ರರಿಗೆ ಸಂಘದ ದ್ವೇಯೋದ್ದೇಶಗಳನ್ನು ವಿವರಿಸಿ, ನಮ್ಮ ಶಾಲೆಯ
ಸ್ಥಿತಿ-ಗತಿ, ಅಗತ್ಯವಾದ ಶೈಕ್ಷಣಿಕ ಪೂರಕವಾದ ನೆರವು, ತರಗತಿ ಕೊಠಡಿಗಳ ಅನಿವಾರ್ಯತೆ, ಗ್ರಾಮೀಣ ಪ್ರದೇಶದಲ್ಲಿ ಹಾಲಿ ವ್ಯಾಸಂಗ
ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನ್ಯವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದರ ಮೂಲಕ ಸಂಘದ
ಕಾರ್ಯಚಟುವಟಿಕೆ ನಿರಂತರವಾಗಿ ನಡೆಯುವ ಯೋಜನೆ ಕುರಿತು ಮನವರಿಕೆ ಮಾಡಿಕೊಟ್ಟಾಗ ನಿರಾಕರಿಸಿದವರು ವಿರಳ, ನಮ್ಮ ಬೆನ್ನು
ತಟ್ಟಿ ಮುನ್ನುಗ್ಗುವಂತೆ ಆರ್ಥಿ ಆಸರೆ ನೀಡಿದವರು 450ಕ್ಕೂ ಬಹಳ ವಿದ್ಯಾರ್ಥಿಗಳು,
ನಮ್ಮೊಂದಿಗೆ ಆರ್ಥಿಕವನ ನೈತಿಕವಾಗಿ, ನಂಬಿಕಾರ್ಹವಾಗಿ ಕೈಜೋಡಿಸಿದ ಫಲದಿಂದಾಗಿ ಇಂದು ಸುಮಾರು 30 ಲಕ್ಷ ರೂಪಾಯಿಗಳ
ಅಂದಾಜು ವೆಚ್ಚದ ಎರಡು ತರಗತಿ ಕೊಠಡಿಗಳು, ಸುವ್ಯವಸ್ಥಿತವಾದ ಒಂದು ಸಂಘದ ಕೊಠಡಿ ಇಂದು ಕಣ್ಮುಂದಿವೆ. ಇದಿನ್ನೂ ಆರಂಭ,
ಸಾಧಿಸುವುದು ಇನ್ನೂ ಸಾಕಷ್ಟಿದೆ. ಸಂಘದ ವತಿಯಿಂದ ಈಗಾಗಲೇ ನಮ್ಮ ಶಾಲೆಯಲ್ಲಿ ವಾ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ
ಸುಮಾರು 30 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗಾಗಿ
ವಾಹನ ಸೌಕರ್ಯಕ್ಕೆ ಸಂಘ ಶಾಲೆಯೊಂದಿಗೆ ಕೈಜೋಡಿಸಿದೆ ಸೆ.28 ರಂದು ಎರಡು ತರಗತಿ ಕೊಠಡಿಗಳು ಶಾಲೆಗೆ/ವಿದ್ಯಾ ಸಂಸ್ಥೆಗೆ
ಹಸ್ತಾಂತರವಾಗಲಿವೆ ಸಂಘದ ಸದಸ್ಯರಿಗಾಗಿಯೇ ಒಂದು ಸುವ್ಯವಸ್ಥಿತವಾದ ಕಛೇರಿ ಉದ್ಘಾಟನೆಯಾಗಲಿದೆ. ಮುಂದಿನ ದಿನಗಳಲ್ಲಿ
ವಿದ್ಯಾರ್ಥಿಗಳ ಪ್ರಗತಿಗಾಗಿ, ಸ್ಮಾರ್ಟ್ ಕ್ಲಾಸ್ ಅನುಷ್ಠಾನಕ್ಕೆ ತರುವ ಯೋಜನೆ ಪ್ರಗತಿಯಲ್ಲಿದೆ ಎಂದರು.
ಗೋಷ್ಟಿಯಲ್ಲಿ ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಬಿ.ಎಂ.ತಿಪ್ಪೇರುದ್ರಸ್ವಾಮಿ,
ಉಪಾಧ್ಯಕ್ಷರಾದ ಪಿ.ವಿಶ್ವನಾಥ್, ಕಾರ್ಯದರ್ಶಿ ಕೊಲಂನಳ್ಳಿ ಪೀತಾಂಬರ್, ಖಂಜಾಚಿ ಹೆಚ್.ಸಿ.ಶಿವಶಂಕರ್ ಮೂರ್ತಿ, ಸಮನ್ವಯ ಸಮಿತಿ
ಅಧ್ಯಕ್ಷರಾದ ಎನ್,ಸತೀಶ್ ಉಪಸ್ಥಿತರಿದ್ದರು.