ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲ್ಲಿ ಶ್ರೀಕೃಷ್ಣ ಗೋಕುಲಾಷ್ಟಮಿ ಸಂಭ್ರಮ.

ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲ್ಲಿ ಶ್ರೀಕೃಷ್ಣ ಗೋಕುಲಾಷ್ಟಮಿ ಸಂಭ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ  ಪೂರ್ವಪ್ರಾಥಮಿಕ ವಿಭಾಗದ ಪ್ಲೇ ಹೋಮ್, ಎಲ್ ಕೆ ಜಿ ಯುಕೆಜಿ ಯ ಮುದ್ದು ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು, ಶಾಲೆಯ ಎಲ್ಲಾ ಮುದ್ದು ಪುಟಾಣಿಗಳು ಶ್ರೀ ಕೃಷ್ಣ ರಾಧೆಯ ವೇಷಭೂಷಣಗಳನ್ನು ಹಾಕಿಕೊಂಡು ಸಂಭ್ರಮಿಸಿದರು.

ವಿಶೇಷವಾಗಿ  ತಾಯಂದಿರು ಯಶೋದೆಯರಾಗಿ ಬಂದು ತಮ್ಮ ಮಕ್ಕಳೊಂದಿಗೆ ನೃತ್ಯಮಾಡಿ ಖುಷಿ ಪಟ್ಟರು.   ಹಗ್ಗ ಜಾಗ್ಗಟ ಸ್ಫರ್ಧೆ, ಬೆಣ್ಣೆ ತಯಾರಿಸುವ ಸ್ಫರ್ಧೆ, ಮೊಸರಿನ ಮಡಿಕೆ ಒಡೆಯುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಶಾಲಾ ಆಡಳಿತ ಮಂಡಳಿಯ ಸುನಿತ ಭಾಸ್ಕರ್, ಶಿವಮ್ಮ ಸೋಮಶೇಖರ್, ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್ , ಹೆಡ್ ಕೋರ್ಡಿನೇಟರ್ ಬಸವರಾಜ್.ಕೆ  ಮತ್ತು ಶಿಕ್ಷಕ ವರ್ಗವದವರು, ಶಿಕ್ಷಕೇತರ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *