
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ ಎಸ್ ಎಲ್ ಸಿ- 2025ರ ರಾಜ್ಯಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಯು ಫೆ. 25 ರಿಂದ ಮಾ. 4ರವರೆಗೆ ನಡೆಯಲಿದೆ
ಫೆ. 25- ಕನ್ನಡ ಅಥವಾ ಪ್ರಥಮ ಭಾಷೆ, ಫೆ. 27- ಗಣಿತ ,ಫೆ. 28 -ದ್ವಿತೀಯ ಭಾಷೆ (ಇಂಗ್ಲಿಷ್ ಅಥವಾ ಕನ್ನಡ) ,ಮಾ. 1- ಹಿಂದಿ ಅಥವಾ ತೃತೀಯ ಭಾಷೆ, ಮಾ. 3 -ವಿಜ್ಞಾನ ,ಮಾ. 4- ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ ಪ್ರಥಮ ಭಾಷೆ ಮತ್ತು ಕೋರ್ ಸಬ್ಜೆಕ್ಟ್ ಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ಮಧ್ಯಾಹ್ನ 1: 15 ರವರೆಗೆ ನಡೆಯಲಿವೆ. ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಪರೀಕ್ಷೆಗಳು ಮಧ್ಯಾಹ್ನ 1:00 ನಡೆಯಲಿದೆ.
ಪ್ರಥಮ ಭಾಷೆಯ ಪರೀಕ್ಷೆ 100 ಅಂಕಕ್ಕೆ ನಡೆದರೆ ಉಳಿದ ವಿಷಯಗಳ ಪರೀಕ್ಷೆ 80 ಅಂಕಗಳಿಗೆ ನಡೆಯಲಿದೆ.