ಬೆಂಗಳೂರು, ಮಾರ್ಚ್ 25: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಇಂದಿನಿಂದ ಆರಂಭಗೊಂಡಿದ್ದು, ಪ್ರಥಮ ಭಾಷೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್ಸಿಇಆರ್ಟಿ), ಸಂಸ್ಕೃತ (ಪ್ರಥಮ ಭಾಷೆ) ಪರೀಕ್ಷೆ ಇಂದು ನಡೆದಿದೆ.

ಬೆಳಗ್ಗೆ 10:15ಕ್ಕೆ ಆರಂಭವಾದ ಪರೀಕ್ಷೆ ಮಧ್ಯಾಹ್ನ 1:30ರವರೆಗೆ ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿಯ ಪ್ರಥಮ ಪರೀಕ್ಷೆ ಮಧ್ಯಮವಾಗಿತ್ತು ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೇಳಿದ್ದಾರೆ. ಇಂದು ನಡೆದ ಪರೀಕ್ಷೆಯ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಲಿದೆ.
ವಿದ್ಯಾರ್ಥಿಗಳು ಮಾದರಿ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ. ಕೆಎಸ್‌ಇಎಬಿ (KSEAB) ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ ಪ್ರಶ್ನೆ ಪತ್ರಿಕೆಯೊಂದಿಗೆ ಉತ್ತರ ಕೀ 2024 ಬಿಡುಗಡೆಯಾಗಲಿದೆ. ಬಳಿಕ ವಿದ್ಯಾರ್ಥಿಗಳು ಈ ಉತ್ತರ ಪತ್ರಿಕೆಯನ್ನು ಡೌನ್‌ಲೋಡ್ ಮಾಡಬಹುದು. ಇಂದಿನಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ವಿಷಯವಾರು ಉತ್ತರ ಕೀಯನ್ನು ಪಡೆಯಬಹುದಾಗಿದೆ.
ಉತ್ತರ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ..?
ಹಂತ 1: ಇಲಾಖೆಯ ಅಧಿಕೃತ ವೆಬ್‌ಸೈಟ್ kseab.karnataka.gov.in ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ನಿಮಗೆ ಮಾದರಿ ಉತ್ತರಗಳಿಗಾಗಿ ಮತ್ತು ಆಕ್ಷೇಪಣೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಕಾಣಸಿಗಲಿದೆ. ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಎಸ್‌ಎಸ್‌ಎಲ್‌ಸಿ 2024 ಮಾದರಿ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅಂತ ಕಾಣಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 4: ಆಗ ಕರ್ನಾಟಕ ಎಸ್‌ಎಸ್‌ಎಲ್‌ಸಿ ಮಾದರಿ ಉತ್ತರ 2024 ಪುಟ ತೆರೆಯುತ್ತದೆ.
ಹಂತ 5: ನಂತರ ನೀವು ವಿಷಯವಾರು ಮಾದರಿ ಉತ್ತರಗಳನ್ನು ತಿಳಿದುಕೊಳ್ಳಬಹುದು
ಹಂತ 6: ಬಳಿಕ ಮಾದರಿ ಉತ್ತರಗಳ ಪಿಡಿಎಫ್ ಅನ್ನು ಕೂಡ ಡೌನ್‌ಲೋಡ್ ಮಾಡಿಕೊಳ್ಳಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1