2024-2025ರ ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇ.66ರಷ್ಟು ಫಲಿತಾಂಶ ಬಂದಿದೆ.

Education: 2024-25ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ-1ರ ಫಲಿತಾಂಶ ಪ್ರಕಟಗೊಂಡಿದೆ. ಬಾಲಕಿಯರೇ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ ಸರ್ಕಾರಿ ಮತ್ತು ಖಾಸಗಿ ಶಾಲೆಯ ಒಟ್ಟು 8,42,173 ವಿದ್ಯಾರ್ಥಿಗಳ ಪೈಕಿ 5,24,984 ಮಂದಿ ತೇರ್ಗಡೆಯಾಗಿದ್ದು, . ಶೇ.62.34ರಷ್ಟು ಫಲಿತಾಂಶ ದಾಖಲಾಗಿದೆ.
ಶೇ.91.12 ರಷ್ಟು ಫಲಿತಾಂಶ ಪಡೆದ ದಕ್ಷಿಣ ಕನ್ನಡದ ಮೊದಲ ಸ್ಥಾನದಲ್ಲಿದ್ದರೆ, ಶೇ.42.43ರಷ್ಟು ಫಲಿತಾಂಶ ಪಡೆಯುವ ಮೂಲಕ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ಉತ್ತಮ ಫಲಿತಾಂಶ ಬಯಸುವ ಹಾಗೂ ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆಯನ್ನ ಮೇ.26ರಿಂದ ಜೂ.2ರವರೆಗೆ ನಡೆಯಲಿದೆ. ಪರೀಕ್ಷೆ-3 ಜೂ.23 ರಿಂದ 30ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ಧಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿವರ ನೀಡಿದ ಸಚಿವರು, ಕಳೆದ ಬಾರಿ ಶೈಕ್ಷಣಿಕ ಸಾಲಿನಲ್ಲಿ ಶೇ.53ರಷ್ಟು ಫಲಿತಾಂಶ ಹೊರಹೊಮ್ಮಿತ್ತು. ಪರೀಕ್ಷಾ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ರಾಜ್ಯದಲ್ಲಿ 13 ಸಾವಿರ ಶಿಕ್ಷಕರನ್ನ ನೇಮಿಸಿ ವಿಶೇಷ ತರಗತಿಗಳನ್ನ ನಡೆಸಿದ್ದರ ಫಲವಾಗಿ ಈ ಬಾರಿ ಒಟ್ಟಾರೆ ಶೇ. 62.34ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು, ಪುನಾರವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ವಿಧಿಸಲಾಗಿದೆ. ಆದರೆ ಮೊದಲ ಬಾರಿಗೆ ಪರೀಕ್ಷೆ ಬರೆದು ತೇರ್ಗಡೆಯಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದರು.
625 ಅಂಕ ಪಡೆದವರು 22 ವಿದ್ಯಾರ್ಥಿಗಳು: ಕಳೆದ ಬಾರಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಗರಿಷ್ಠ ಅಂಕ ಪಡೆದಿದ್ದರು. ಈ ಸಲ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 620 ರಿಂದ 625ರವರೆಗೆ 970 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ 152 ವಿದ್ಯಾರ್ಥಿಗಳು ಇಷ್ಟು ಅಂಕ ಪಡೆದಿದ್ದರು. ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ಶೇ.75ರಷ್ಟು ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 5936 ಸರ್ಕಾರಿ ಶಾಲೆಗಳು ಶೇ.62.7, 3583 ಅನುದಾನಿತ ಶಾಲೆಗಳು ಶೇ.58.97 ಹಾಗೂ 6364 ಅನುದಾನರಹಿತ ಶಾಲೆಗಳ ಫಲಿತಾಂಶ ಶೇ.75.59ರಷ್ಟಿದೆ ಎಂದು ಸಚಿವರು ವಿವರಿಸಿದರು.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ: ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಪೈಕಿ 329 ಶಾಲೆಗಳು ಶೇ.100ರಷ್ಟು ಫಲಿತಾಂಶ ಬಂದರೆ 6 ಶಾಲೆಗಳಿಂದ ಶೂನ್ಯ ಫಲಿತಾಂಶ ಬಂದಿದೆ. ಅದೇ ರೀತಿ 53 ಅನುದಾನಿತ ಶಾಲೆಗಳು ಗರಿಷ್ಠ ಹಾಗೂ 30 ಶಾಲೆಗಳು ಕನಿಷ್ಠ ಫಲಿತಾಂಶಕ್ಕೆ ಕಾರಣವಾಗಿದೆ. 539 ಅನುದಾನಿತ ಶಾಲೆಗಳು ಶೇ.100ರಷ್ಟು ರಿಸಲ್ಟ್ ಪಡೆದರೆ, 108 ಶಾಲೆಗಳು ಸೊನ್ನೆಗೆ ತೃಪ್ತಿಪಟ್ಟುಕೊಂಡಿವೆ. ಒಟ್ಟಾರೆ 921 ಶಾಲೆಗಳು ಗರಿಷ್ಠ ಅಂಕ ಸಾಧಿಸಿದರೆ, 144 ಶಾಲೆಗಳು ಝೀರೊ ಪ್ರಗತಿ ಸಾಧಿಸಿವೆ. ಇನ್ನೂ 3,90,311 ವಿದ್ಯಾರ್ಥಿಗಳ ಪೈಕಿ 2,26,637 ವಿದ್ಯಾರ್ಥಿಗಳು ಪಾಸ್ ಆಗಿದ್ಧಾರೆ. ಅದೇ ರೀತಿ 400579 ವಿದ್ಯಾರ್ಥಿನಿಯರ ಪೈಕಿ 2,96,438 ಮಂದಿ ತೇರ್ಗಡೆಯಾಗಿದ್ದಾರೆ. ಶೇ.74ರಷ್ಟು ಬಾಲಕಿಯರು ಹಾಗೂ ಶೇ.58.07ರಷ್ಟು ಬಾಲಕರು ಉತ್ತೀರ್ಣರಾಗಿದ್ಧಾರೆ.
ವಿಷಯವಾರು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ:
ಕನ್ನಡ – 9573 ವಿದ್ಯಾರ್ಥಿಗಳು
ದ್ವಿತೀಯ ಭಾಷೆ – 7057
ತೃತೀಯ ಭಾಷೆ – 17,909
ಗಣಿತ – 3262
ವಿಜ್ಞಾನ – 2451
ಸಮಾಜ – 7974
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1