SSLC Results 2024: SSLC ರಿಸಲ್ಟ್ ಚೆಕ್ ಮಾಡೋವಾಗ ಎರರ್‌ ಬರ್ತಿದ್ಯಾ? ಡೋಂಟ್‌ವರಿ, ಇಲ್ಲಿದೆ ಸಿಂಪಲ್ ಟಿಪ್ಸ್.

Karnataka SSLC Results 2024: ಬೆಂಗಳೂರು:  2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ನ್ನು ಮಾರ್ಚ್‌ 25 ರಿಂದ ಏಪ್ರಿಲ್ 6, 2024 ರವರೆಗೆ ನಡೆಸಿತ್ತು. ಇದೀಗ ಇಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದೆ.

ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ಯಾವುದೇ ಪರೀಕ್ಷೆಯ ಫಲಿತಾಂಶ ಚೆಕ್ ಮಾಡೋವಾಗ ಅನೇಕರು ಎಡವುತ್ತಾರೆ. ಎಷ್ಟೇ ಬಾರಿ ರಿಸಲ್ಟ್ ಚೆಕ್ ಮಾಡಿದರೂ ಎರರ್‌ ಬಂದು ಅತ್ತ ಫಲಿತಾಂಶವೂ ಸಿಗದೆ, ಇತ್ತ ಅದಕ್ಕೆ ಪರಿಹಾರವೂ ಸಿಗದೆ ಒದ್ದಾಡುತ್ತಾರೆ. ಅಂತವರಿಗೆಂದೇ ಈ ಸುದ್ದಿಯಲ್ಲಿ ಟಿಪ್ಸ್ ಕೊಡಲಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯದ ಹಂತವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆ ಮಾಡೊವಾಗ ಎರರ್ ಬಂದ್ರೆ ತಲೆಕೆಡಿಸಿಕೊಳ್ಳಬೇಡಿ ಇಷ್ಟು ಮಾಡಿ ಸಾಕು.

ಫಲಿತಾಂಶ ಪರಿಶೀಲಿಸುವಾಗ ಎರರ್ ಬಂದ್ರೆ ಏನು ಮಾಡಬೇಕು?

ನೀವು ಮೊದಲು ನಿಮ್ಮ ಮೊಬೈಲ್‌ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್‌ karresults.nic.in ಅಂತಾ ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್‌ ಮಾಡಿ. ನಂತರ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಹಾಕಿ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಸಾಮಾನ್ಯವಾಗಿ ಕಾಣಬೇಕು. ಆದರೆ ಕೆಲವೊಬ್ಬರಿಗೆ ರಿಸಲ್ಟ್ ಕಾಣದೇ ಎರರ್, ಮತ್ತೊಮ್ಮೆ ಪ್ರಯತ್ನಿಸಿ ಅಥವಾ ಇನ್ಯಾವುದಾದರೂ ಸಂದೇಶ ಕಾಣಿಸುತ್ತದೆ. ಆಗ ನೀವು ಧೃತಿಗೆಡಬಾರದು.

ಸಾಮಾನ್ಯವಾಗಿ ರಿಸಲ್ಟ್ ಚೆಕ್ ಮಾಡುವ ಆತುರದಿಂದ ತಪ್ಪಾದ ಸಂಖ್ಯೆಗಳು ಅಥವಾ ವಿವರಗಳನ್ನು ಹಾಕಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ನಿಮ್ಮ ರಿಜಿಸ್ಟರ್ ನಂಬರ್‌ ಅನ್ನು ಸರಿಯಾಗಿ ಹಾಕಿದ್ದೀರಾ ಎಂದು ಕ್ರಾಸ್ ಚೆಕ್ ಮಾಡಿ. ನಂತರ ನೀವು ನಿಮ್ಮ ಇತರ ವಿವರಗಳನ್ನು ಸರಿಯಾಗಿ ಹಾಕಿದ್ದೀರಾ ಎಂದು ಪರಿಶೀಲನೆ ಮಾಡಿ ಪುನಃ ಫಲಿತಾಂಶ ಚೆಕ್ ಮಾಡಿ. ಆಗಲೂ ನಿಮಗೆ ಇದೇ ರೀತಿ ಎರರ್‌ ಕಾಣಿಸಿಕೊಂಡರೆ ನೀವು ಹೊಸದಾಗಿ ಗೂಗಲ್ ಪುಟ ಓಪನ್ ಮಾಡಿ ಶುರುವಿನಿಂದ ಸರ್ಚ್ ಮಾಡಿ. ಆಗ ಖಂಡಿತವಾಗಿಯೂ ನಿಮಗೆ ಫಲಿತಾಂಶ ಕಾಣಸಿಗುತ್ತದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಟಿಪ್ಸ್

  • ನಿಮ್ಮ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಕ್ರೋಮ್ ಓಪನ್ ಮಾಡಿ.
  • ನಂತರ ಅಧಿಕೃತ ವೆಬ್ಸೈಟ್ https://karresults.nic.in/ ಗೆ ಭೇಟಿ ನೀಡಿ
  • ಮುಖಪುಟದಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ
  • ಹೊಸ ಲಾಗಿನ್ ಪುಟವು ತೆರೆಯುತ್ತದೆ
  • ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
  • ಆಗ ಫಲಿತಾಂಶ ಕಾಣಿಸಿಕೊಳ್ಳುತ್ತದೆ
  • ಅಲ್ಲಿ ಡೌನ್ಲೋಡ್ ಮಾಡುವ ಅವಕಾಶವಿದೆ
  • 11 ಗಂಟೆಯ ನಂತ್ರ ಅಧಿಕೃತ ಜಾಲತಾಣದಲ್ಲಿ ಫಲಿತಾಂಶ ನೋಡಬಹುದು

Source : https://kannada.news18.com/news/jobs/education-kseab-karnataka-sslc-10th-results-updates-10th-board-results-announced-how-to-check-scores-online-and-more-akd-1691986.html

Leave a Reply

Your email address will not be published. Required fields are marked *