SSLC ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ: ಮೈಸೂರಿನ ಸುದೀಕ್ಷಾ ರಾಜ್ಯಕ್ಕೆ 2ನೇ ಸ್ಥಾನ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ತಿಂಗಳು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಿಸಿತ್ತು. ಈ ವೇಳೆ ತಮಗೆ ಕಡಿಮೆ ಅಂಕ ಬಂದಿದೆ ಎಂದು ಮೈಸೂರಿನ ಸುದೀಕ್ಷಾ ಮರು ಮೌಲ್ಯಮಾಪಾನಕ್ಕೆ ಅರ್ಜಿ ಹಾಕಿದ್ದರು. ಇದೀಗ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟವಾಗಿದೆ.

ಮೈಸೂರು, ಜೂನ್​ 05: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2024ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಮರು ಮೌಲ್ಯಮಾಪನ ಫಲಿತಾಂಶ (Revaluation Result) ಪ್ರಕಟಸಿದ್ದು, ಮೈಸೂರಿನ (Mysore) ದಿನೇಶ್ ಎಂಬುವರ ಅವರ ಪುತ್ರಿ, ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ರಾಜ್ಯಕ್ಕೆ ಎರಡನೇ ಟಾಪರ್​ ಆಗಿದ್ದಾರೆ. ಮರು ಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.

ಎಸ್​​ಎಸ್​ಎಲ್​ಸಿ ಫಲಿತಾಂಶ ಪ್ರಕಟದಾಗ ವಿದ್ಯಾರ್ಥಿನಿ ಸುದೀಕ್ಷಾ ಎಂ.ಡಿ ಅವರಿಗೆ 625ಕ್ಕೆ 620 ಅಂಕಗಳು ಬಂದಿದ್ದವು. ಐದು ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದ ಸುದೀಕ್ಷ ಎಂ.ಡಿ ಅವರಿಗೆ ಗಣಿತ ವಿಷಯದಲ್ಲಿ 95 ಅಂಕಳು ಬಂದಿದ್ದವು.

ಸಂಸ್ಕೃತ 125 ಇಂಗ್ಲಿಷ್ 100 ಕನ್ನಡ 100 ವಿಜ್ಞಾನ 100 ಸಮಾಜ 100 ಗಣಿತದಲ್ಲಿ 95 ಅಂಕ ಬಂದಿತ್ತು. ನಂತರ ಸುದೀಕ್ಷಾ ಗಣೀತ ವಿಷಯವನ್ನು ಮರು ಮೌಲ್ಯಮಾಪನಕ್ಕೆ‌ ಅರ್ಜಿ ಸಲ್ಲಿಸಿದರು. ಇಂದು (ಜೂ.05) ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದು, ಸುಧೀಕ್ಷಾ ಗಣಿತದಲ್ಲಿ 99 ಅಂಕ ಪಡೆದಿದ್ದಾರೆ. ಇದೀಗ 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್​ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಮರು ಮೌಲ್ಯಮಾಪನದಲ್ಲಿ 624 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನದ ಪಟ್ಟಿಯಲ್ಲಿ ಸುದೀಕ್ಷಾ 8ನೇ ಯವರಾಗಿದ್ದಾರೆ.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ

  • ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ)
  • ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ
  • ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ
  • ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ
  • ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ
  • ದರ್ಶನ್ (ಶಿರಸಿ) 625ಕ್ಕೆ 624 ಅಂಕ
  • ಚಿನ್ಮಯ್ (ಶಿರಸಿ) 625ಕ್ಕೆ 624 ಅಂಕ
  • ಶ್ರೀರಾಮ್ (ಶಿರಸಿ) 625ಕ್ಕೆ 624 ಅಂಕ
  • ಸುದೀಕ್ಷಾ (ಮೈಸೂರು) 625ಕ್ಕೆ 624 ಅಂಕ

Source : https://tv9kannada.com/karnataka/mysuru/sslc-revaluation-result-mysore-sudiksha-2nd-place-for-karnataka-in-kannada-news-vkbrr-845108.html

 

Leave a Reply

Your email address will not be published. Required fields are marked *