ಚಿತ್ರದುರ್ಗ ಆ. ೦4
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಸೋಮವಾರ ನಗರದ ಬೆಸ್ಕಾಂ ಇಲಾಖೆಯ ಮುಖ್ಯ ಕಾರ್ಯಪಾಲಕ ಇಂಜಿನಿಯರ್‌ಯ ಮುಂದೆ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದವತಿಯಿಂದ ನಡೆಸಲಾಯಿತು.
ಚಿತ್ರದುರ್ಗ ತಾಲ್ಲೂಕು, ಕಸಬಾ ಹೋಬಳಿ ಗೋನೂರು ಈ೪ ಫೀಡರ್ ಹಂಪಯ್ಯನಮಾಳಿಗೆ, ಬೊಮ್ಮನಹಳ್ಳಿ, ಬಚ್ಚಬೋರನಹಟ್ಟಿ, ಸಾಸಲಹಟ್ಟಿ, ಕಲ್ಲೇನಹಳ್ಳಿ ಇನ್ನೂ ಸುಮಾರು ೧೦ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಫೀಡರ್‌ನಿಂದ ವಿದ್ಯುತ್ ಸರಬರಾಜು ಆಗುತ್ತದೆ. ಸರ್ಕಾರವು ಕೃಷಿ ಪಂಪ್‌ಸೆಟ್‌ಗಳಿಗೆ ೭ ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕೆಂದು ಆದೇಶಿಸಿರುತ್ತದೆ. ಆದರೆ ಈ ಫೀಡರ್‌ನಲ್ಲಿ ೪-೫ ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್‌ನ್ನು ಕೊಡುತ್ತಿಲ್ಲ. ಕರೆಂಟ್ ಬಂದ ೩ ಗಂಟೆ ಅವಧಿಯಲ್ಲಿ ಸುಮಾರು ೧೦-೧೨ ಸಾರಿ ಟ್ರಿಪ್ ಆಗುತ್ತದೆ. ಇದನ್ನು ಸೆಕ್ಷನ್ ಆಫೀಸರ್ ಗಮನಕ್ಕೆ ತಂದರೂ ಸಹ ಸರಿಪಡಿಸುತ್ತಿಲ್ಲ ರಾತ್ರಿಯ ವೇಳೆಯಲ್ಲಿ ವಿದ್ಯುತ್‌ನ್ನು ಪಂಪ್‌ಸೆಟ್‌ಗಳಿಗೆ ಕೊಡುವುದಿಲ್ಲ. ರೈತರು ತಮ್ಮ ಜಮೀನಿನಲ್ಲಿ ಹೂ, ಸೊಪ್ಪು, ತರಕಾರಿ, ಈರುಳ್ಳಿ ಹಾಕಿರುತ್ತಾರೆ. ಸಮರ್ಪಕವಾದ ವಿದ್ಯುತ್ ಕೊಡದ ಕಾರಣ ಬೆಳೆಗಳೆಲ್ಲ ಒಣಗುತ್ತಿವೆ. ಸರ್ಕಾರದ ಆದೇಶದಂತೆ ೭ ಗಂಟೆಗಳ ವಿದ್ಯುತ್‌ನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಈ ಫೀಡರ್‌ನಲ್ಲಿ ಲೈನ್ ಮ್ಯಾನ್‌ಗಳು ಕೇವಲ ಇಬ್ಬರಿದ್ದು, ಇವರು ವಿದ್ಯುತ್ ತಂತಿ ಕಟ್ಟಾದಾಗ ಟಿಸಿಯಲ್ಲಿ ಸಮಸ್ಯೆಯಾದಾಗ ನಾವು ಕಂಬ ಹತ್ತುವುದಿಲ್ಲ, ನಮಗೆ ಕಂಬ ಹತ್ತುವುದಕ್ಕೆ ಹೇಳಬೇಡಿ, ವಿದ್ಯುತ್ ಲೈನ್ ವಿನಾದರೂ ತೊಂದರೆಯಾದರೆ ನೀವೇ ಸರಿಪಡಿಸಿಕೊಳ್ಳಿ ಎಂದು ರೈತರಿಗೆ ಲೈನ್ ಮ್ಯಾನ್ ಹೇಳುತ್ತಾರೆ ಹಾಗೂ ಏನೇ ಲೈನ್‌ನಲ್ಲಿ ತೊಂದರೆಯಾದಾಗ ಲೈನ್ ಮ್ಯಾನ್‌ಗಳಿಗೆ ಫೋನ್ ಮಾಡಿದರೆ ಆಗ ಅವರು ಪೋನ್‌ನ್ನು ಸ್ವಿಚ್ ಆಫ್ ಮಾಡಿರುತ್ತಾರೆ ಇದರಿಂದ ಕೂಡಲೇ ಮೇಲಾಧಿಕಾರಿಗಳು ಲೈನ್ ಮ್ಯಾನ್‌ಗಳನ್ನು ಬದಲಿಸಿ ರೈತರಿಗೆ ಸ್ಪಂದಿಸುವರನ್ನು ನೇಮಿಸಬೇಕು ಹಾಗೂ ಗುಣಮಟ್ಟದ ವಿದ್ಯುತ್‌ನ್ನು ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಿಶ್ವನಾಥ್ ಶೆಟ್ಟಿ, ಕೃಷ್ಣಮೂರ್ತಿ, ಮಂಜುನಾಥ್ ರೆಡ್ಡಿ, ಲಕ್ಷ್ಮಣ್, ವೆಂಕಟೇಶ್, ಬಸವರಾಜು, ಚಿದಾನಂದ, ರಾಮಣ್ಣ, ಸಂಪತ್ತ್ ಕುಮಾರ್, ಉಮೇಶ್, ಮೊಡಲಗಿರಿಯಪ್ಪ, ಅಜ್ಜಪ್ಪ, ಪಾಂಡುರಂಗಪ್ಪ, ಶಂಕರಪ್ಪ, ಗೋವಿಂದಪ್ಪ, ಚಂದ್ರಪ್ಪ, ಈರಣ್ಣ ಪ್ರಹ್ಲಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 3