
ಪ್ರಸ್ತುತ 2025ರ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಇದೇ 23ನೇ ಮಾರ್ಚ್ 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ.
ಚಿತ್ರದುರ್ಗ ತಾಲೂಕಿನ ಯಳಗೋಡು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಮಹೇಶ್ ಸಿಎನ್ ರವರು ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಿಸ್ವಾರ್ಥವಾಗಿ ಹಳ್ಳಿಗಾಡಿನ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣ ಅಭಿವೃದ್ಧಿಗೆ 23 ವರ್ಷಗಳಿಂದ ಪರಿಶ್ರಮಿಸುತ್ತಿರುವ ಜೊತೆಗೆ 1987ರಲ್ಲಿ ಸ್ಕೌಟ್ಸ್ ಚಳುವಳಿಗೆ ಸೇರಿ ಸತತವಾಗಿ 37 ವರ್ಷಗಳಲ್ಲಿ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದು ಸ್ಥಳೀಯ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗಿನ ತರಬೇತಿ ಶಿಬಿರ ಜಾಂಬೂರಿಗಳಲ್ಲಿ ಮಕ್ಕಳನ್ನು ತೊಡಗಿಸಿ, ಶಿಬಿರದ ನಾಯಕರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ. ದಿ ಭಾರತ್ ಸ್ಕೌಟ್ಸ್ ಗೈಡ್ಸ್ ನಲ್ಲಿ ಉನ್ನತವಾದ ಲೀಡರ್ ಟ್ರೈನರ್ ತರಬೇತಿಯನ್ನು ಪಡೆದು ರಾಜ್ಯದಲ್ಲಿ ಹಿರಿಯ ಸ್ಕೌಟ್ ತರಬೇತಿದಾರರಾಗಿರುತ್ತಾರೆ.
ಅಲ್ಲದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು ಇದರ ಚಿತ್ರದುರ್ಗ ಜಿಲ್ಲಾ ಘಟಕದಲ್ಲಿ ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ಟ್ರಸ್ಟ್ ಸದಸ್ಯರಾಗಿ ಜನಸಾಮಾನ್ಯರಿಗೆ ಅನೇಕ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮಕ್ಕಳಿಗೆ ಸ್ಕೌಟ್ ಶಿಕ್ಷಣವನ್ನು ನೀಡಿ ಸುಮಾರು ಮಕ್ಕಳಿಗೆ ರಾಷ್ಟ್ರಪತಿ ಮತ್ತು ರಾಜ್ಯ ಪುರಸ್ಕಾರ ಸ್ಕೌಟ್ಸ್. ತರಬೇತಿ ನೀಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುವಂತೆ ಶ್ರಮಿಸಿರುತ್ತಾರೆ. ಪ್ರಸ್ತುತ ಇವರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕದ ರಾಜ್ಯ ಪರಿಷತ್ ಸದಸ್ಯರಾಗಿರುತ್ತಾರೆ.
ಶ್ರೀಯುತರಿಗೆ 2025ರ ಮಾರ್ಚ್ 23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಕನ್ನಡ ಫಿಲಂ ಚೇಂಬರ್ ನ ಅಧ್ಯಕ್ಷರಾದ ಶ್ರೀ ಎಂ ಎಸ್ ರವೀಂದ್ರ ರವರು ತಿಳಿಸಿರುತ್ತಾರೆ.
Source: samagrasuddi.co.in