
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 31ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ್ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಭಾರತೀಯ ದಲಿತ ಸಂಘರ್ಷ
ಸಮಿತಿ (ರಿ.) ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು.
ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು
ನಡೆಸಿದ ಭಾರತೀಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ದಾರಿಯುದ್ದಕ್ಕೂ ಅಮಿತಾ ಷಾ ರವರ ವಿರುದ್ದ
ಘೋಷಣೆಗಳನ್ನು ಕೂಗಿ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಯನ್ನು
ಸಲ್ಲಿಸಲಾಯಿತು.
ಭಾರತೀಯ ದಲಿತ ಸಂಘರ್ಷ ರಾಜ್ಯ ಸಮಿತಿ ರಾಜ್ಯಾಧ್ಯಕ್ಷರಾದ ಡಾ. ಹೆಚ್.ಪ್ರಕಾಶ್ ಬೀರಾವರ್ ರವರ ಮಾತನಾಡಿ, ಡಾ.
ಬಾಬಾಸಾಹೇಬ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ. ಅದೊಂದು ಶಕ್ತಿ. ಶಾಲೆಯ ಹೊರಗೆ ಕುಳಿತು ಕಲಿತ ಒಬ್ಬ ವಿಶ್ವಜ್ಞಾನಿಯಾಗಿ
ಬೆಳೆದುಬಂದ ಪರಿಯೇ ಅಚ್ಚರಿ ಮೂಡಿಸುವಂಥದ್ದು. ಸಾಮಾಜಿಕ ಸಮಾನತೆಯ ಹರಿಕಾರರಾಗಿ. ಆರ್ಥಿಕ ತಜ್ಞರಾಗಿ, ಕಾರ್ಮಿಕ
ನಾಯಕರಾಗಿ, ಮಹಿಳಾ ವಿಮೋಚಕರಾಗಿ, ದೇಶದ ಸಮಸ್ತ ಶೋಷಿತ ವರ್ಗಗಳ ವಿಮೋಚಕರಾಗಿ ಬಂದ
ಡಾ.ಬಿ.ಆರ್.ಅಂಬೇಡ್ಕರವರು ಮಾರ್ಟಿನ್ ಲೂಥರ್‍ಕಿಂಗ್ ನಂತರದಲ್ಲಿ ವಿಶ್ವದ ಬಹು ದೊಡ್ಡ ಮಾನವ ಹಕ್ಕುಗಳ ಹೋರಾಟಗಾರರಾಗಿ
ಗುರುತಿಸಲ್ಪಡುತ್ತಾರೆ ಎಂದರು.
ಪ್ರಜಾಪ್ರಭುತ್ವದ ಪ್ರತಿಪಾದಕರಾಗಿ, ಹಲವು ಧರ್ಮಗಳ, ಹಲವು ಭಾಷೆಗಳ ಹಲವು ಸಂಸ್ಕೃತಿಗಳ, ಸಾವಿರಾರು ಜಾತಿಗಳ,
ಸಂಪ್ರದಾಯಗಳನ್ನು ಒಳಗೊಂಡ ಭಾರತದಂತಹ ಬಹುದೊಡ್ಡ ದೇಶವನ್ನು ಸಂವಿಧಾನದ ಮೂಲಕ ‘ವಿವಿಧತೆಯಲ್ಲಿ ಏಕತೆ’
ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಕೇವಲ ದಲಿತರಿಗೆ ಮಾತ್ರ
ನಾಯಕರಲ್ಲ. ಬದಲಾಗಿ ಧ್ವನಿ ಕಳೆದುಕೊಂಡಿದ್ದ ಭಾರತದ ಎಲ್ಲಾ ಶೋಷಿತರ, ಭಾರತೀಯರ ಬದುಕಿನ ಘನತೆಯನ್ನು ಕಚ್ಚಿಸಲು
ತಮ್ಮ ಬದುಕನ್ನೇ ಪಣಕ್ಕಿಟ್ಟವರು ಮಹಾ ಮಾನವತವಾಧಿ ಬಿ.ಆರ್.ಅಂಬೇಡ್ಕರ್ ರವರು. ಆದರೆ, ಈಗ ಪ್ರಜಾಪ್ರಭುತ್ವದ
ದೇಗುಲದಲ್ಲಿಯೇ ನಿಂತುಕೊಂಡು, ಕೇಂದ್ರ ಸರ್ಕಾರದ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಗೃಹಮಂತ್ರಿ ಅಮಿತ್ ಶಾ ಅವರು
ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ವ್ಯಂಗ್ಯ ಮತ್ತು ಕಾವ್ಯದ ರೂಪದಲ್ಲಿ ಅವಮಾನಿಸಿದ್ದಾರೆ. ಯಾವ ಸಂವಿಧಾನದ ಮೂಲಕ
ಉನ್ನತ ಹುದ್ದೆಯಲ್ಲಿರುವ ಅಮಿತ್ ಶಾ, ಅದೇ ಸಂವಿಧಾನ ನಿರ್ಮಾತ್ಯ ಸಂವಿಧಾನ ಶಿಲ್ಪ ಬಾಬಾಸಾಹೇಬರನ್ನು ಅವಹೇಳನ
ಮಾಡಿದ್ದಾರೆ. ತಮ್ಮ ಹುದ್ದೆಯ ಜನತೆಯನ್ನೂ ಮೀರಿದ ಅಮಿತ್ ಶಾ ಸ್ವಚ್ಛಾಪೂರ್ವಕವಾಗಿ ಆಡಿದ ಮಾತು. ಅವರನ್ನು
ಮುನ್ನಡೆಸುತ್ತಿರುವ ಎ.ಎಸ್.ಎಸ್. ಮತ್ತು ಬಿಜೆಪಿಯ ಮನಸ್ಥಿತಿ, ಎದೆಯಲ್ಲಿ ಅದುಮಿಟ್ಟುಕೊಂಡ ಅಂತರಾಳದ ಮಾತಿದು
ಬಾಬಾಸಾಹೇಬರು ಮತ್ತು ಸಂವಿಧಾನದ ಮೇಲಿನ ಅಕ್ರಮಾವಿದು. ಇದರಿಂದಾಗಿ ಬಾಬಾಸಾಹೇಬರನ್ನು ತಮ್ಮ ಹೃದಯದಲ್ಲಿ
ಇಟ್ಟುಕೊಂಡು ಆರಾಧಿಸುತ್ತಿರುವ ಅನುಸರಿಸುತ್ತಿರುವ ಕೋಟ್ಯಾಂತರ ಭಾರತೀಯರಿಗೆ ನೋವುಂಟಾಗಿದೆ ಎಂದರು.
ಗೃಹಮಂತ್ರಿ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಭಾರತೀಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾಧ್ಯಂತ ಉಗ್ರವಾದ
ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲವಾದಲ್ಲ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ
ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಮನವಿ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಘಂಟೆಯನ್ನು ನೀಡಲಾಗುತ್ತಿದೆ
ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಹೆಚ್.ಪ್ರಕಾಶ್‍ಬೀರಾವರ ರವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷರಾದ ಕೆ.ತಿಮ್ಮರಾಜು, ರಾಜ್ಯ ಉಪಾಧ್ಯಕ್ಷರಾದ ಚಂದ್ರವ್ವಘಾಟ್, ಜಿಲ್ಲಾಧ್ಯಕ್ಷ
ಪಾಂಡುರಂಗಪ್ಪ.ಎನ್ ಚಿಕ್ಕಲಘಟ್ಟ, ಗೌರವ ಅಧ್ಯಕ್ಷರಾದ ಲೋಕೇಶ್.ಜೆ ಸಿದ್ದಾಮರ ಜಿಲ್ಲಾ ಉಪಾಧ್ಯಕ್ಷ ಆರ್.ಮಂಜುನಾಥ್, ಜಿಲ್ಲಾ
ಪ್ರದಾನ ಕಾರ್ಯದರ್ಶಿ ಕರಿಯಪ್ಪ.ಎಸ್ ನೆಲ್ಲಿಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಹಾಲೇಶ.ಆರ್ ಗೊಡಬನಾಳ್, ಆರ್.ಮಂಜುನಾಥ
ಮಾರಘಟ್ಟ, ಜಿಲ್ಲಾ ಕಾರ್ಯದರ್ಶಿ ಡಿ.ಸುರೇಶ ಗೊಡಬನಹಾಳ್ ಸೇರಿದಂತೆ ಇತರರು ಭಾಗವಹಿಸಿದ್ದರು.