ಚಿತ್ರದುರ್ಗ: ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಸರ್ ಸಿ ವಿ ರಾಮನ್ ಅವಿಷ್ಕಾರವನ್ನು ಪ್ರಕಟಿಸಿದ ದಿನವಾದ ಇಂದು ವಿಜ್ಞಾನ ದ ಮಹತ್ವ, ಅಬ್ದುಲ್ ಕಲಾಂ ಸ್ಟೀಫನ್ ಹಾಕಿನ್ಸ್ ರವರ ಸಾಧನೆಯನ್ನು ಪ್ರಾಚಾರ್ಯರಾದ ಸಂಪತ್ ಕುಮಾರ್ ವಿವರಿಸಿದರು.

ವಿದ್ಯಾರ್ಥಿಗಳಾದ ಶಾರಿಕ್, ಪಾವನಿ ಅಶ್ವಿನ್ ಕೖಷ್ಣ, ತಮ್ಮ ಅಭಿಪ್ರಾಯ ವನ್ನು ಹಂಚಿಕೊಂಡರು. ಒಂದನೇ ತರಗತಿಯ ಪುಟಾಣಿಗಳು ಸಿವಿ ರಾಮನ್ ಆಗಿ ಗೌರವ್ ಸುಕೀರ್ತಿ, ಎಪಿಜೆ ಕಲಾಂ ಆಗಿ ಚೇಹಕ್, ಮೇಡಂ ಕ್ವೀರಿಯಾಗಿ ತನ್ವಿರತ್ನ ತ್ರಿವೇದಿಕ, ಛದ್ಮವೇಷ ಧರಿಸಿ ಭಾಷಣ ಮಾಡಿದರು. ನಿಹಾರಿಕ ಮತ್ತು ನಿರೀಕ್ಷಾ ಹಗಲು ರಾತ್ರಿಯ ಡೆಮೋ ಮಾಡೆಲ್ ನ್ನು ವಿವರಿಸಿದರು.

ವಿಜ್ಞಾನ ಕ್ಕೆ ಸಂಬಂದಿಸಿದಂತೆ ಕಿರುನಾಟಕ, ರಸಪ್ರಶ್ನೆ ಕಾರ್ಯಕ್ರಮವನ್ನು ಶಿಕ್ಷಕಿಯಾದ ಮೇಘನಾ. ಸಿ ಎ. ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಭಾಸ್ಕರ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಪ್ರಾಚಾರ್ಯರಾದ ಸಂಪತ್ ಕುಮಾರ್, ಉಪ ಪ್ರಾಚಾರ್ಯರಾದ ಪ್ರಫುಲ್ ಬಾರಿಕ್, ಮುಖ್ಯೋಪಾಧ್ಯಾರಾದ ವೆಂಕಟೇಶ್ ಮತ್ತು ಸಂಯೋಜಕರಾದ ಬಸವರಾಜ್ ಮತ್ತು ಏಕಾಂತ್ ರೆಡ್ಡಿ, ಶಿಕ್ಷಕರಾದ ಮಾಲತೇಶ್, ನಿವೇದಿತಾ, ಇತರೆ ಶಿಕ್ಷಕವರ್ಗದವರು ಭಾಗವಹಿಸಿದ್ದರು.