ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಇಂದು ಕನ್ನಡ ದ ನಂ1 ದಿನ ಪತ್ರಿಕೆಯಾದ ವಿಜಯವಾಣಿ ಪತ್ರಿಕೆಯ ಮುದ್ರಣ ಕೇಂದ್ರಕ್ಕೆ “ಕೈಗಾರೀಕ ಪ್ರವಾಸ” ವನ್ನು ಕೈಗೊಳ್ಳಲಾಯಿತು.

ಯಾವುದೇ ಸುದ್ಧಿಯನ್ನು ಸಂಗ್ರಹಿಸುವ ವಿಧಾನ, ಪತ್ರಿಕೆಯನ್ನು ಮುದ್ರಿಸುವ, ಪತ್ರಿಕೆಯ ವಿವಿಧ ಹಂತದಲ್ಲಿನ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತ್ತು. ವಿದ್ಯಾರ್ಥಿಗಳ ಎದುರಿಗೆ ವಿಜಯವಾಣಿ “ವಿದ್ಯಾರ್ಥಿ ಉದ್ಯೋಗ ಮಿತ್ರ ” ದಿನಪತ್ರಿಕೆಯನ್ನು ಮುದ್ರಿಸಿ ಅವರಿಗೆ ಪ್ರತ್ಯಕ್ಷ ಅನುಭವ ವನ್ನು ನೀಡಿದರು. ವಿದ್ಯಾರ್ಥಿಗಳಾದ ಚಿನ್ಮಯಿ, ದೀಪಾ, ಹರಿಪ್ರೀತಮ್, ರಿಶಾಂತ್ ತಮ್ಮ ಅನಿಕೆ ಮತ್ತು ಮುದ್ರಣ ಕೇಂದ್ರಕ್ಕೆ ಭೇಟಿ ನೀಡಿದ ಅನುಭವ ವನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ
ಶಾಲೆಯ ಅಧ್ಯಕ್ಷರಾದ ಭಾಸ್ಕರ್.ಎಸ್, ಕಾರ್ಯದರ್ಶಿಗಳಾದ ರಕ್ಷಿತ್.ಎಸ್.ಬಿ, ಪ್ರಾಚಾರ್ಯರಾದ ಸಂಪತ್ ಕುಮಾರ್ ಸಿ.ಡಿ, ರವರಿದ್ದರು. ಇವರ ಜೊತೆ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋಆರ್ಡಿನೇಟರ್ ಬಸವರಾಜು.ಕೆ ಮತ್ತು ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ಶಿಕ್ಷಕೇತರ ವರ್ಗದವರು ಮಾಹಿತಿಯನ್ನು ತಿಳಿದುಕೊಂಡರು.