ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಗರ / ಹೋಬಳಿ ಮಟ್ಟದ ಕ್ರೀಡಾ ಕೂಟದಿಂದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ
- ಹಾಕಿ ಪ್ರಥಮ ಸ್ಥಾನ
• ಬಾಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
• ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
• ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ
• ಕಬ್ಬಡಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
• ಅಥ್ಲೇಟಿಕ್ ವಿಭಾಗದಲ್ಲಿ ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಭರತ್.ಡಿ.ಆರ್,
• ಮೋಹಿತ್ ಹೆಚ್ ದ್ವಿತೀಯ ಸ್ಥಾನ.
• ವಂಶಿ ಕೃಷ್ಣ ರೆಡ್ಡಿ ಎತ್ತರ ಜಿಗಿತ ದ್ವಿತೀಯ ಸ್ಥಾನ,
• ಗುಂಡು ಎಸೆತ ದಿಗಂತ್ ಕಾರ್ಣಿಕ್ ತೃತೀಯ ಸ್ಥಾನ,
• ಉದ್ದ ಜಿಗಿತ ಭರತ್ ಡಿ.ಆರ್ ಮತ್ತು ತಂಡ ದ್ವಿತೀಯ ಸ್ಥಾನ ಹಾಗೂ 4×100ಮೀ ರಿಲೇ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸುತ್ತಾರೆ.
ಹಿರಿಯ ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ

- ಹಾಕಿ ಪ್ರಥಮ ಸ್ಥಾನ
- ಟೇಬಲ್ ಟೆನ್ನಿಸ್ ಪ್ರಥಮ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ.
• ಅಥ್ಲೆಟಿಕ್ ವಿಭಾಗದಲ್ಲಿ 200m ಓಟದ ಸ್ಪರ್ಧೆಯಲ್ಲಿ ಸಮೃದ್ ದ್ವಿತೀಯ ಸ್ಥಾನ.
• ಗುಂಡು ಎಸೆತದಲ್ಲಿ ಇಂದುದರ್ ತೃತೀಯ ಸ್ಥಾನ ಗಳಿಸುತ್ತಾರೆ.
ಬಾಲಕಿಯರ ವಿಭಾಗ
• ಪ್ರೌಢಶಾಲಾ ಬಾಲಕೀಯರ ವಿಭಾಗದಲ್ಲಿ
- ಟೇಬಲ್ ಬಾಡ್ಮಿಂಟನ್ ಪ್ರಥಮ ಸ್ಥಾನ
• ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ
• ಹಾಕಿ ದ್ವಿತೀಯ ಸ್ಥಾನ
• ಬಾಲಕೀಯರ ವಿಭಾಗದಲ್ಲಿ ಕಬ್ಬಡಿ ಪ್ರಥಮ ಸ್ಥಾನ
• ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ
• ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ
ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಹಾಕಿ ಕ್ರೀಡೆಯಲ್ಲಿ ಹೋಬಳಿ ಮಟ್ಟದಲ್ಲಿ ಪ್ರಥಮ ಸ್ಥಾನ, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ಗಳಿಸಿ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಿ ತೃತೀಯ ಸ್ಥಾನಗಳಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ಅಕಾಡೆಮಿಕ್ ಅಡ್ಮಿನಿಸ್ಟ್ರೆಟರ್ ಡಾ|| ಸ್ವಾಮಿ ಕೆ.ಎನ್. ಮುಖ್ಯ ಶಿಕ್ಷಕರಾದ ಸಂಪತ್ ಕುಮಾರ್.ಸಿ.ಡಿ, ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಸಿ ಅಭಿನಂದಿಸಿದ್ದಾರೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii