ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ೯ನೇ ತರಗತಿಯ ಟಿ.ಜಾಗೃತ್ ಹಾಗೂ ಎಸ್.ಹರ್ಷವರ್ಧನ್ ವಿದ್ಯಾರ್ಥಿಗಳು ಆಶಾ.ಸಿ.ಹೆಚ್.ಎಂ ಇವರ ಮಾರ್ಗದರ್ಶನದಲ್ಲಿ 2024-25 ನೇ ಸಾಲಿನ ರಾಜ್ಯಮಟ್ಟದ ‘ವಿಜ್ಞಾನ ವಸ್ತು ಪ್ರದರ್ಶನದಲ್ಲಿ’ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಾರ್ವಜನಿಕ ಶಿಕ್ಷಣ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮAಗಳೂರು ಹಾಗೂ ಶಕ್ತಿ ರೆಸಿಡೆನ್ಷಿಯಲ್ ಶಾಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2024-25ನೇ ಸಾಲಿನ ರಾಜ್ಯಮಟ್ಟದ ‘ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ 9ನೇ ತರಗತಿಯ ಟಿ.ಜಾಗೃತ್ ಹಾಗೂ ಎಸ್.ಹರ್ಷವರ್ಧನ್ ಇವರು “ಬಹುಪಯೋಗಿ ಮತ್ತು ಆಧುನಿಕ ಎತ್ತಿನ ಗಾಡಿ” ಈ ವಿಷಯದಡಿ ತಯಾರಿಸಿದ ವಿಜ್ಞಾನ ಮಾದರಿಯು ತೀರ್ಪುಗಾರರ ಮೆಚ್ಚುಗೆ ಗಳಿಸಿ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ವಿಜ್ಞಾನ ಮಾದರಿಗಳಲ್ಲಿ ಮೊದಲ ಹತ್ತು ಮಾದರಿಗಳಲ್ಲಿ ಸ್ಥಾನ ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರಮಟ್ಟ ಸ್ಪರ್ಧೆಯು ಪುದುಚೇರಿಯಲ್ಲಿ 2025ನೇ ಜನವರಿ.20 ರಿಂದ 25ರವೆರೆಗೆ ಜರುಗಲಿದ್ದು,ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಪನಿರ್ದೇಶಕರಾದ ಎಂ ಆರ್ ಮಂಜುನಾಥ್ ಹಾಗೂ ಚಿತ್ರದುರ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್ ನಾಗಭೂಷಣ್ ಮಕ್ಕಳನ್ನು ಶ್ಲಾಘಿಸಿ ಅಭಿಂದಿಸಿರುತ್ತಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಟಿ.ಜಾಗೃತ್ ಹಾಗೂ ಎಸ್ ಹರ್ಷವರ್ಧನ್ ವಿದ್ಯಾರ್ಥಿಗಳು ಆಶಾ.ಸಿ.ಹೆಚ್.ಎಂ ಮಾರ್ಗದರ್ಶಿ ಶಿಕ್ಷಕರಿಗೆ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್ ಕುಮಾರ್, ಎಸ್.ಎಂ ಪೃಥ್ವೀಶ ಹಾಗೂ ಶ್ರೀಮತಿ ಸುನಿತಾ.ಪಿ.ಸಿ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ.ಎನ್.ಜಿ, ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ, ಐಸಿಎಸ್‌ಇ ಉಪಪ್ರಿನ್ಸಿಪಾಲರಾದ ಅವಿನಾಶ್ ಬಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.