ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ,ಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಕ್ರೀಡಾ ಕೂಟದಿಂದ ಸ್ಪರ್ಧಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
“ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ, ವಿಜೇತರಾಗಿ ನಂತರ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.”
ಅಥ್ಲೆಟಿಕ್ಸ್
ನೌಮನ್ ಅಹಮ್ಮದ್ ಷರೀಫ್
ನೌಮನ್ ಅಹಮ್ಮದ್ ಷರೀಫ್ 10ನೇ ತರಗತಿ 100ಮೀ,
400ಮೀ, 400ಮೀ ಹರ್ಡಲ್ಸ್, 4×100ಮೀ ರಿಲೇ, 4×400ಮೀ ರಿಲೇ
ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ
ಚಾಂಪಿಯನ್ ಷಿಫ್ ಪಡೆದು 5 ಚಿನ್ನದ ಪದಕಗಳನ್ನು
ಪಡೆದಿದ್ದಾರೆ.
ಮೋಹಿತ್ ಸಿ ಹೆಚ್
ಮೋಹಿತ್ ಸಿ ಹೆಚ್ 10ನೇ ತಗರತಿ ರಿಲೇ 4ಘಿ100ಮೀ
ಪ್ರಥಮ, ರಿಲೇ 4ಘಿ400ಮೀ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೊಹಮ್ಮದ್ ಸೈಫುಲ್ಲಾ
ಮೊಹಮ್ಮದ್ ಸೈಫುಲ್ಲಾ 10ನೇ ತಗರತಿ ರಿಲೇ
4×100ಮೀ ಪ್ರಥಮ, ರಿಲೇ 4×400ಮೀ ಪ್ರಥಮ ಸ್ಥಾನ
ಪಡೆದಿದ್ದಾರೆ.
ವರ್ದೇಶ್.ಸಿ.ಹೆಚ್
ವರ್ದೇಶ್.ಸಿ.ಹೆಚ್ 10ನೇ ತಗರತಿ ರಿಲೇ 4×100ಮೀ
ಪ್ರಥಮ, ರಿಲೇ 4×400ಮೀ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಮೇಲ್ಕಂಡ 4 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ, ವಿಜೇತರಾಗಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಐಸಿಎಸ್‌ಇ ಉಪಪ್ರಿನ್ಸಿಪಾಲರಾದ ಅವಿನಾಶ್ ಬಿ, ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.