ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ,ಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾ ಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ, ರಾಜ್ಯ ಹಾಗೂ ವಿಭಾಗ ಮಟ್ಟಕ್ಕೆ ಆಯ್ಕೆ.
“ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆ” 14 ವರ್ಷದೊಳಗಿನವರ ಅಥ್ಲೆಟಿಕ್ಸ್ ಬಾಲಕರ ವಿಭಾಗದ ಸ್ಪರ್ಧೆಗಳು :
ಉಮಾಶಂಕರ್ ಎತ್ತರ ಜಿಗಿತ, ದ್ವಿತೀಯ, 200 ಮೀ ಓಟದ ಸ್ಪರ್ಧೆಯಲ್ಲಿ ದ್ವಿತೀಯ, 100ಮೀ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ. ಆಯುಷ್ ಪ್ರಸಾದ್ ಉದ್ದ ಜಿಗಿತ, ಪ್ರಥಮ 400 ಮೀ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ. ವಿಕಾಸ್ ನಾಯಕ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಕಬ್ಬಡ್ಡಿ ಆಟದ ಸ್ಪರ್ಧೆಯಲ್ಲಿ ವಿಕಾಸ್ ನಾಯಕ ಮತ್ತು ತಂಡ ಪ್ರಥಮ ಸ್ಥಾನ. ಹಾಕಿ ಸ್ಪರ್ಧೆಯಲ್ಲಿ ರಾಜ್ ರಿಷಿ ಮತ್ತು ತಂಡ ಹೋಬಳಿ ಮಟ್ಟ ಪ್ರಥಮ, ತಾಲ್ಲೂಕು ಮಟ್ಟ ಪ್ರಥಮ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ನಿತೀಶ್ ಎನ್ ಎಸ್ ಮತ್ತು ತಂಡ ಹೋಬಳಿ ಮಟ್ಟದಲ್ಲಿ ಪ್ರಥಮ, ತಾಲ್ಲೂಕು ಮಟ್ಟದಲ್ಲಿ ಪ್ರಥಮ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ನಂದೀಶ್ ಹೆಚ್.ಎನ್, ಹೃತ್ವಿಕ್, ಜೈನೇಶ್ ಚೋಪ್ರ ಕ್ರಿಕೇಟ್ ಆಟದ ಆಯ್ಕೆಯಲ್ಲಿ ಜಿಲ್ಲಾ ಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಉಮಾಶಂಕರ್ ಮತ್ತು ತಂಡ ಹೋಬಳಿ ಮಟ್ಟದಲ್ಲಿ ಪ್ರಥಮ, ತಾಲ್ಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
14 ವರ್ಷದೊಳಗಿನವರ ಅಥ್ಲೆಟಿಕ್ಸ್ ಬಾಲಕೀಯರ ವಿಭಾಗ
ತೀಕ್ಷಣ ಹೆಚ್ ಎಸ್ ಹೋಬಳಿ ಮಟ್ಟ ದ್ವಿತೀಯ ಮತ್ತು ತಾಲ್ಲೂಕು ಮಟ್ಟದಿಂದ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ, ಹಾಕಿ ಸ್ಪರ್ಧೆಯಲ್ಲಿ ಪ್ರಜ್ಞಾ ಮತ್ತು ತಂಡ ಹೋಬಳಿ, ತಾಲ್ಲೂಕು ಪ್ರಥಮ. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ. ಟೇಬಲ್ ಟೆನ್ನೀಸ್ ಆಭಿಯಾ ನಾಜ್ ಮತ್ತು ತಂಡ ಹೋಬಳಿ ಮತ್ತು ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ.
17 ವರ್ಷದೊಳಗಿನವರ ಬಾಲಕರ ವಿಭಾಗದ ಸ್ಪರ್ಧೆಗಳು :
ಹಾಕಿ ಆಟದ ಸ್ಪರ್ಧೆಯಲ್ಲಿ ವರ್ದೇಶ್ ಮತ್ತು ತಂಡ ಹೋಬಳಿ ಪ್ರಥಮ, ತಾಲ್ಲೂಕು ಪ್ರಥಮ, ಜಿಲ್ಲಾ ಪ್ರಥಮ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪುನೀತ್ ಮತ್ತು ತಂಡ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ. ದಯಾಸಾಗರ್ ಮತ್ತು ಅಬ್ದುಲ್ ರಹೀಮ್ ಈ ವಿದ್ಯಾರ್ಥಿಗಳು ಕ್ರಿಕೇಟ್ ಆಟದ ಆಯ್ಕೆಯ ಸ್ಪರ್ಧೆಯಿಂದ ವಿಭಾಗ ಮಟ್ಟಕ್ಕೆ ಆಯ್ಕೆ. ಚೆಸ್ ಸ್ಪರ್ಧೆಯಲ್ಲಿ ಧನುಷ್ ರೆಡ್ಡಿ ಮತ್ತು ಸುಮೀತ್ ತಾಲ್ಲೂಕು ಮಟ್ಟದಿಂದ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ.
17 ವರ್ಷದೊಳಗಿನವರ ಬಾಲಕೀಯರ ವಿಭಾಗದ ಸ್ಪರ್ಧೆಗಳು :
ಟೇಬಲ್ ಟೆನ್ನಿಸ್ ಸ್ಫರ್ಧೆಯಲ್ಲಿ ಸಿಂಧೂರ ಮತ್ತು ತಂಡ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ. ಚೆಸ್ ಸ್ಪರ್ಧೆಯಲ್ಲಿ ಶ್ರೇಯಾ ಎಂ ಸಾಯಿ ಮೈತ್ರಿ ಎಲ್ ಎ ತಾಲ್ಲೂಕು ಮಟ್ಟದಿಂದ ಪ್ರಥಮ ಸ್ಥಾನ ಪಡೆದು ಜಿಲ್ಲಾ ಪ್ರಥಮ ಸ್ಥಾನವನ್ನು ರಾಜ್ಯ ಮಟ್ಟಕ್ಕೆ ಆಯ್ಕೆ.
ವಿವಿಧ ಕ್ರೀಡಾಕೂಟಗಳಲ್ಲಿ ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್. ಜಿ ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಐಸಿಎಸ್‌ಇ ಉಪಪ್ರಿನ್ಸಿಪಾಲರಾದ ಅವಿನಾಶ್ ಬಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಸಿ ಅಭಿನಂದಿಸಿದ್ದಾರೆ.