
ಟಿವಿಗಳಲ್ಲಿ ಮೊದಲು ನೀವು ಕಾರ್ಯಕ್ರಮ ನೋಡ್ತಾ ಇದ್ದರೆ, ಆಗ ಒಂದು ಜಾಹೀರಾತು ಕಾಮನ್ ಆಗಿ ಬರ್ತಾ ಇತ್ತು. ಅದು ನಿಮ್ಮ ಬಟ್ಟೆಯ ಹೊಳಪನ್ನು ಹೆಚ್ಚಿಸಲು ಉಜಾಲಾ ಟ್ರೈ ಮಾಡಿ ಎಂದು. ಈ ಜಾಹೀರಾತು ನೋಡಿ ಅದೆಷ್ಟೋ ಜನ, ತಮ್ಮ ಬಿಳಿಯ ಬಟ್ಟೆಗೆ ಹೊಸ ಹೊಳಪನ್ನು ನೀಡಿದ್ದಾರೋ ಗೊತ್ತಿಲ್ಲ.
ಈ ಜಾಹೀರಾತು ಅಷ್ಟು ಫೇಮಸ್..ಹಾಗಿದ್ದರೆ ಈ ಕಂಪನಿ ಓನರ್ ಯಾರು. ಈ ಕಂಪನಿಯ ಬಗ್ಗೆ ನಿಮಗೆಷ್ಟು ಗೊತ್ತು? ಈ ಕಂಪನಿಯ ಸಂಸ್ಥಾಪಕ ಸಹ ಸೈಕಲ ಹೊಡೆದುಕೊಂಡೆ ಜೀವನದ ಬಂಡೆಯನ್ನು ಸಾಗಿಸಿ, ಈಗ ಯಶಸ್ಸಿನ ಶಿಖರವನ್ನು ಏರಿ ಕುಳಿತಿದ್ದಾರೆ. ಅವರೇ ಎಂ.ಪಿ.ರಾಮಚಂದ್ರನ್.
ಏನಾದ್ರೂ ಒಳ್ಳೆಯ ಕಾರ್ಯ ಮಾಡುವಾಗ ನೂರು ವಿಘ್ನಗಳು ಫಿಕ್ಸ್. ಹಾಗೆ ರಾಮಚಂದ್ರನ್ ಅವರ ಪಯಾಣದಲ್ಲೂ ಸಾಕಷ್ಟು ಏಳು ಬೀಳುಗಳಿವೆ. 5000 ಸಾಲ ಮಾಡಿ ಕಂಪನಿ ಆರಂಭಿಸಿ, ಇವರು ಇಂದು ಸುಮಾರು 17 ಸಾವಿರ ಕೋಟಿ ರೂ. ದೊಡ್ಡ ಕಂಪನಿ ನಿರ್ಮಿಸಿದ್ದಾರೆ.
ಕಂಪನಿಯನ್ನು ಆರಂಭಿಸಿದ್ದು ಹೀಗೆ?
ರಾಮಚಂದ್ರನ್ ಅವರು ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದ ವ್ಯಾಪರದಲ್ಲಿ ಅವರ ಪ್ರೀತಿ ಬೆಳೆಯಿತು. ಇವರು ವ್ಯಾಪಾರದ ಮೇಲಿನ ಪ್ರೀತಿ ಇವರನ್ನು ಜ್ಯೋತಿ ಲ್ಯಾಬೋರೇಟರೀಸ್ ಎಂಬ ಕಂಪನಿಯನ್ನು ಆರಂಭಿಸಲು ಪ್ರೇರಣೆ ಆಯಿತು. ಅಂದು ಸಹೋದರನಿಂದ 5000 ಸಾವಿರ ರೂ. ಸಾಲ ಪಡೆದು ದೈತ್ಯ ಕಂಪನಿ ಸ್ಥಾಪಿಸಿದರು. ಇವರು ಆರಂಭಿಸಿದ ಉತ್ಪನ್ನಕ್ಕೆ ಉಜಾಲಾ ಎಂಬ ಹೆಸರು ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಸತತ ಪ್ರಯತ್ನ
ಒಂದು ದಿನ ಪ್ರಯೋಗ ಮಾಡುವಾಗ ಅವರ ಚಿತ್ತ ಪೇಪರ್ ಮೇಲೆ ಬಿದ್ದಿತು. ಪೇಪರ್‌ದಲ್ಲಿ ನೇರಳೆ ಬಣ್ಣ ಬಳಿಸಿ ಬಿಳಿ ಬಟ್ಟೆಯನ್ನು ಸಾಕಷ್ಟು ಬ್ರೇಟ್ ಆಗಿ ಮಾಡಬಹುದು ಎಂದು ಬರೆಯಲಾಗಿತ್ತು.
ಇದಾದ ನಂತರ ಅವರು ಅದರ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು. ಇದಾದ ನಂತರ ಉಜಾಲಾ ನೀಲ್ ತಯಾರಿಸುವಲ್ಲಿ ಯಶಸ್ವಿಯಾದರು.ಇದನ್ನು ಓದಿದ ಬಳಿಕ ಅವರು ಇದರ ಮೇಲೆ ಪ್ರಯೋಗವನ್ನು ಮಾಡಿದರು.
ತಮ್ಮದೇ ಜಮೀನನಲ್ಲಿ ಕಂಪನಿ
ತನ್ನ ಸಹೋದರನಿಂದ ಎರವಲು ಪಡೆದ ಹಣದಿಂದ, ರಾಮಚಂದ್ರನ್ 1983 ರಲ್ಲಿ ಕೇರಳದ ತ್ರಿಶೂರ್‌ನಲ್ಲಿ ಕುಟುಂಬದ ಜಮೀನಿನ ಸ್ವಲ್ಪ ಭಾಗದಲ್ಲಿ ತಾತ್ಕಾಲಿಕ ಕಾರ್ಖಾನೆಯನ್ನು ಆರಂಭಿಸಿದರು. ಕಂಪನಿಗೆ ಜ್ಯೋತಿ ಲ್ಯಾಬೊರೇಟರೀಸ್ ಎಂದು ಮಗಳು ಜ್ಯೋತಿ ಹೆಸರಿಟ್ಟರು.

ಮಗಳ ಹೆಸರಿನಲ್ಲಿ ಕಂಪನಿ
ಆರಂಭದಲ್ಲಿ ಮಹಿಳೆಯರಿಂದ ಮನೆಮನೆಗೆ ಸೇಲ್ ಮಾಡಲಾಗುತ್ತಿತ್ತು. ನಂತರ ಅವರ ಉಜಾಲಾ ಬ್ರ್ಯಾಂಡ್ ದೇಶದ ಪ್ರತಿಯೊಂದು ಮನೆಗೂ ತಲುಪಿತು. ಈ ಇಂಡಿಗೋವನ್ನು ಬಿಳಿ ಬಟ್ಟೆಗಳನ್ನು ಹೊಳೆಯಲು ಬಳಸಲಾಗುತ್ತದೆ. ಜ್ಯೋತಿ ಲ್ಯಾಬೊರೇಟರೀಸ್‌ನ ಎರಡು ಪ್ರಮುಖ ಉತ್ಪನ್ನಗಳಾದ ಉಜಾಲಾ ಲಿಕ್ವಿಡ್ ಕ್ಲಾತ್ ವೈಟ್ನರ್ ಮತ್ತು ಮ್ಯಾಕ್ಸೊ ಸೊಳ್ಳೆ ನಿವಾರಕಗಳು ದೇಶದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿವೆ.