“ಸತತ ಪರಿಶ್ರಮದಿಂದ ಮಾತ್ರ ಯಶಸ್ವೀ ಫಲಿತಾಂಶ ಸಾಧ್ಯ ; ಶಶಿಕಲಾ ರವಿಶಂಕರ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 09 ಪರೀಕ್ಷೆ ಪೆಡಂಭೂತವಲ್ಲ ಓದು ಅಭ್ಯಾಸ ಅಧ್ಯಯನ ಈ ಮೂರನ್ನೂ ಪರಸ್ಪರ ಅರಿತು ಹಂತಹಂತವಾಗಿ ವಿದ್ಯಾರ್ಥಿಗಳು
ಅನುಸರಿಸಿದಲ್ಲಿ ಯಶಸ್ಸು ಸಿಧ್ಧಿಸುವುದು ಎಂದು ಸತ್ವ ಮಹಿಳಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಶಿಕಲಾ ರವಿಶಂಕರ್
ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿರಿಯೂರು ತಾಲ್ಲೂಕು ಬೀರೇನಹಳ್ಳಿಯ ಎ.ವಿ.ಕೊಟ್ಟಿಗೆ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ
ಹಮ್ಮಿಕೊಂಡಿದ್ದ ಪರೀಕ್ಷಾಪೂರ್ವ ಸಿದ್ಧತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ವಿದ್ಯಾರ್ಥಿ ಜೀವನ ಅವಧಿ ಸುವರ್ಣ ಸಮಾನ.. ಪೂರ್ಣ ಪ್ರಮಾಣದಲ್ಲಿ ಬಳಸಿ ಭವಿಷ್ಯ ಸ್ವರ್ಗಕ್ಕೆ ರಹದಾರಿಯಾಗುವುದು ಎಂದರು.

ನಿರ್ದೇಶಕರಾದ ಶ್ರೀಕರಾಂಬರವರು ಹಾಗೂ ಇಂಪಾ ರೀತೇಶ್ರವರು “ಶಿಕ್ಷಣವೇ ಶಕ್ತಿ ..ವಿದ್ಯಾಭ್ಯಾಸ ನಿಮ್ಮ ಮೊದಲ
ಆದ್ಯತೆಯಾಗಿರಬೇಕು” ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಸತ್ವ ಮಹಿಳಾ ಸಂಸ್ಥೆಯಿಂದ ವಿಶೇಷವಾಗಿ
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ಹಲಗೆ ಹಾಗೂ ಪೆನ್ನುಗಳನ್ನು ನೀಡಲಾಯಿತು.

ಪ್ರಧಾನ ಕಾರ್ಯದರ್ಶಿ ಸರ್ವಮಂಗಳಾ ರಮೇಶ್ ಸಂಸ್ಥೆಯ ಕಾರ್ಯವೈಖರಿ.ಯೋಜನೆಯ ಬಗ್ಗೆ ವಿವರ ನೀಡಿದರು.ಶಾಲಾ
ಮುಖ್ಯೋಪಾಧ್ಯಾಯಿನಿ ವಿಜಯಕುಮಾರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸತ್ವ ಮಹಿಳಾ ಸಂಸ್ಥೆಯ ಖಜಾಂಜಿ ತ್ರಿವೇಣಿ ಸತೀಶ್.ಯೋಜನಾ ನಿರ್ದೇಶಕರಾದ ತ್ರಿವೇಣಿ ಶಶಿಧರ್.. ನಿರ್ದೇಶಕರಾದ ಗೀತಾ
ಹಿಮಾಚಲೇಶ್.. ಡಾಕ್ಟರ್.ಅಮೂಲ್ಯ.ರಾಜೇಶ್ವರಿ ಸಂಜಯ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಾಳಿಂದ ಪ್ರಾರ್ಥಿಸಿದರೆ,
ಕಾರ್ಯಕ್ರಮವನ್ನು ಶಿಕ್ಷಕರಾದ ಶೇಖರ್ ಗೌಡರವರು ನಿರೂಪಿಸಿ
ಜಯಲಕ್ಷ್ಮಿಯವರು ವಂದಿಸಿದರು.

Views: 0

Leave a Reply

Your email address will not be published. Required fields are marked *