
ದಾವಣಗೆರೆ ನಂಜಪ್ಪ ಆಸ್ಪತ್ರೆಯಲ್ಲಿ ಸಣ್ಣ ಕರುಳಿನಲ್ಲಿ ಉಂಟಾದ ರಕ್ತಸ್ರಾವಕ್ಕೆ ಯಶಸ್ವಿ ಚಿಕಿತ್ಸೆ ಆಧುನಿಕ ತಂತ್ರಜ್ಞಾನವಾದ ಕ್ಯಾಪ್ಸುಲ್ ಎಂಡೋಸ್ಕೋಪಿ ಕಾರ್ಯವಿಧಾನ ಬಳಕೆ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 07 ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ರೋಗಿಗೆ ಸಣ್ಣ ಕರುಳಿನಲ್ಲಿ ಉಂಟಾದ ಅತಿ ಅಪರೂಪದ ರಕ್ತಸ್ರಾವವನ್ನು ಆಧುನಿಕ
ತಂತ್ರಜ್ಞಾನವಾದ ಕ್ಯಾಪ್ಸುಲ್ ಎಂಡೋಸ್ಕೋಪಿ ಕಾರ್ಯವಿಧಾನದಿಂದ ಪತ್ತೆ ಹಚ್ಚಿ ತುರ್ತಾಗಿ ಬೇಕಾದಂತಹ ಚಿಕಿತ್ಸೆಯನ್ನು
ನಂಜಪ್ಪ ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಯಶಸ್ವಿಯಾಗಿ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಆಸ್ಪತ್ರೆಯ ಆಡಳಿತ ಮಂಡಳಿ 62 ವರ್ಷದ ವ್ಯಕ್ತಿ ಶಕ್ತಿಹೀನನಾಗಿ ದುರ್ಬಲತೆಯಿಂದ ಬಳಲುತ್ತಿದ್ದು,
4-5 ದಿನಗಳಿಂದ ಕಪ್ಪು ಬಣ್ಣದ ಮಲ ವಿಸರ್ಜನೆ ಆಗುತ್ತಿತ್ತು. ವ್ಯಕ್ತಿಯು ಆಸ್ಪತ್ರೆಗೆ ಆಗಮಿಸಿದಾಗ, ಹೀಮೋಗ್ಲೋಬಿನ್‍ನ ಮಟ್ಟ ಬಹಳ
ಕಡಿಮೆಯಾಗಿತ್ತು. ಪ್ರಾರಂಭದಲ್ಲಿ ರಕ್ತಸ್ರಾವದ ಮೂಲವನ್ನು ಕಂಡುಹಿಡಿಯಲು ಕಷ್ಟಕರವಾಗಿದ್ದರಿಂದ ಕ್ಯಾಪ್ಸುಲ್ ಎಂಡೋಸ್ಕೋಪಿ
ವಿಧಾನವನ್ನು ಬಳಸಲಾಯಿತು.
ಈ ವಿಧಾನವು ಅತ್ಯಂತ ಪರಿಣಾಮಕಾರಿಯಾಗಿದ್ದು, ನಿಖರವಾಗಿ ಚಿಕಿತ್ಸೆ ನೀಡಲು ಬಹಳ ಸಹಕಾರಿಯಾಗಿದೆ. ಗ್ಯಾಸ್ಟ್ರೋ
ಎಂಟಿರೊಲೋಜಿಸ್ಟ್ ವೈದ್ಯ ಡಾ ಶಿವರಾಜ್ ಅಫ್ಜಲ್‍ಪುರ್‍ಕರ್ ಈ ವಿಧಾನವೇ ಸೂಕ್ತವೆಂದು ನಿರ್ಣಯಿಸಿ ರಕ್ತಸ್ರಾವದ ಮೂಲವನ್ನು
ಯಶಸ್ವಿಯಾಗಿ ಪತ್ತೆ ಹಚ್ಚಿದರು. ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಿದರು.
ಫಲಿತಾಂಶ : ಕ್ಯಾಪ್ಸುಲ್ ಎಂಡೋಸ್ಕೋಪಿ ಇತ್ತೀಚಿನ ತಂತ್ರಜ್ಞಾನವಾಗಿದ್ದು, ಜೀರ್ಣಾಂಗ ವ್ಯೂಹದ ವಿಶೇಷವಾಗಿ ಸಣ್ಣ ಕರುಳಿನಲ್ಲಿ
ಉಂಟಾದ ತೊಂದರೆಗಳನ್ನು ಕಂಡುಹಿಡಿಯಲು ಸಹಾಯವಾಗುತ್ತದೆ. ರೋಗಿಗೆ ವೈರ್‍ಲೆಸ್ ಕ್ಯಾಮೆರಾವನ್ನು ಹೊಂದಿರುವ ಮಾತ್ರೆ
ಗಾತ್ರದ ಕ್ಯಾಪ್ಸುಲ್ ಅನ್ನು ನುಂಗಿಸಿದಾಗ, ಅದು ಕರುಳಿಗೆ ಹೋಗುತ್ತದೆ. ನಂತರ ಆ ಕ್ಯಾಪ್ಸುಲ್ ಕರುಳಿನ ಭಾಗದಲ್ಲಿ ಉಂಟಾದ
ರಕ್ತಸ್ರಾವ ಹಾಗೂ ಇನ್ನಿತರೆ ಸಮಸ್ಯೆಗಳ ಚಿತ್ರಗಳನ್ನು ಸೆರೆ ಹಿಡಿದು ರೆಕಾರ್ಡಿಂಗ್ ಸಾಧನಕ್ಕೆ ರವಾನಿಸುತ್ತದೆ. ಇದರಿಂದ ವೈದ್ಯರು
ಖಚಿತವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.
ಲಾಭಗಳು : ನೋವುರಹಿತ, ಸುಲಭ, ಸುರಕ್ಷಿತ, ದೇಹದ ಅತೀ ಸಣ್ಣ ಪ್ರದೇಶಗಳಲ್ಲೂ ಕ್ಯಾಪ್ಸುಲ್ ಕಳುಹಿಸಿ ಸಮಸ್ಯೆಗಳನ್ನು
ಕಂಡುಹಿಡಿಯಬಹುದಾಗಿರುತ್ತದೆ.
ದಾವಣಗೆರೆ ನಂಜಪ್ಪ ಆಸ್ಪತ್ರೆಯಲ್ಲಿ ನವೀನತೆ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೋಗಿಗಳಿಗೆ ಯಶಸ್ವಿಯಾಗಿ
ಚಿಕಿತ್ಸೆ ನೀಡುತ್ತಿರುವುದನ್ನು ಈ ವಿಧಾನವು ತೋರಿಸುತ್ತದೆ. ಕ್ಯಾಪ್ಸುಲ್ ಎಂಡೋಸ್ಕೋಪಿ ಹಾಗೂ ಇತರೆ ಗ್ಯಾಸ್ಟ್ರೋ
ಎಂಟಿರೊಲೋಜಿ ವಿಶಿಷ್ಟ ಸೇವೆಗಳನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ ದಾವಣಗೆರೆಯ ನಂಜಪ್ಪ ಆಸ್ಪತ್ರೆಯ ದೂರವಾಣಿ ಸಂಖ್ಯೆ :
7022260111 ಸಂಪರ್ಕಿಸಬಹುದು.
Views: 0