Sudeep& Kumar Controversy: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ‘ಕುಮಾರ್ ವಿವಾದ ವಿಚಾರವಾಗಿ ಇವರಿಬ್ಬರನ್ನು ಸಂಧಾನ ಮಾಡಲು ಚಿತ್ರರಂಗ ಸಜ್ಜಾಗಿರುವುದರಿಂದ ಇದೀಗ ನಿರ್ಮಾಕಪಕನನ್ನು ರವಿಚಂದ್ರನ್ ಮನೆಗೆ ಕರೆಸಿಕೊಂಡಿದ್ದಾರೆ. ವಿವಾದ ಸಲುವಾಗಿ ಬೆಂಗಳೂರಿನ ರವಿಚಂದ್ರನ್ ನಿವಾಸಕ್ಕೆ ಕುಮಾರ್ ತೆರಳಿ ತಮ್ಮ ನೋವನ್ನು ಹಿರಿಯ ನಟ ಮುಂದೆ ತೋಡಿಕೊಂಡಿದ್ದಾರೆ.
ಭೇಟಿ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದ ನಟ ರವಿಚಂದ್ರನ್, ‘ಕುಮಾರ್ ಅವರಿಗಾದ ನೋವನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ಸುದೀಪ್ ಅವರ ಕಡೆಯಿಂದ ವಿಷಯನ್ನು ತಿಳಿದು ಬಳಿಕ ನಿರ್ಧಾರಿಸಲಾಗುವುದು. ಸಾಧ್ಯವಾದಷ್ಟು ವಿವಾದಕ್ಕೆ ಬ್ರೇಕ್ ಹಾಕಿ ಮತ್ತೆ ಒಂದಾಗಿಸುವ ಪ್ರಯತ್ನ ಮಾಡುತ್ತವೆ.
ಸುದೀಪ್ ಕಥೆ ಕೇಳಿ ನಾವು ತೆಗೆದುಕೊಳ್ಳುವ ನಿರ್ಧಾರ ಕ್ಕೆ ಇಬ್ಬರೂ ಬದ್ದರಾದರೇ ಮಾತ್ರ ಸಾಂಧನದಲ್ಲಿ ಭಾಗಿ ಆಗಲಾಗುವುದು ಎಂದಿದ್ದಾರೆ. ಈಗಾಗಲೇ ಇಬ್ಬರೂ ನೊಂದಿದ್ದಾರೆ. ಚಿತ್ರರಂಗದಲ್ಲಿ ನಾವು ಸರಿಯಾಗಬೇಕು. ಒಕ್ಕೂಟದಲ್ಲಿ ಒಗ್ಗಟ್ಟಿರಬೇಕು ಕಲಾವಿದರು ಒಟ್ಟಿದ್ದರೇ ಮಾತ್ರ ಚಿತ್ರರಂಗ ಅಭಿವೃದ್ದಿ ಸಾಧ್ಯ ಎಂದಿದ್ದಾರೆ.
ಕುಮಾರ್ ಅವರು ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸುತ್ತಿದ್ದರು. ನಾನು ಬಹಿರಂಗವಾಗಿ ದಾಖಲೆಗಳನ್ನು ಕೊಡುವುದಿಲ್ಲ. ಹಿರಿಯರ ಮಾತಿಗೆ ಬೆಲೆ ಕೊಡಬೇಕು. ಹೀಗಾಗಿ ಧರಣಿ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುತ್ತೇನೆ’ಎಂದು ಅವರು ಹೇಳಿದ್ದಾರೆ.
ಆದರೆ ಈ ವಿವಾದ ವಿಚಾರವಾಗಿ ನಟ ಕಿಚ್ಚ ಸುದೀಪ್ , ರವಿಚಂದ್ರನ್ ಅವರು ಭೇಟಿ ಮಾಡ್ತಾರ, ಮಾನನಷ್ಟ ಮೊಕದ್ದಮೆಯನ್ನು ವಾಪಸು ಪಡೆಯುತ್ತಾರಾ ಎಂಬುವುದು ಕಾದು ನೋಡಬೇಕಿದೆ.
ಆದರೆ ದಿನದಿಂದ ದಿನಕ್ಕೆ ಚಿತ್ರರಂಗದಲ್ಲಿ ಒಂದೊಂದು ಘಟನೆಗಳು ಸಂಭವಿಸುತ್ತಿವೆ. ಈ ಸಂದರ್ಭದಲ್ಲಿ ಎಲ್ಲರ ಒಗಟ್ಟು ಮುಖ್ಯ. ಇತಿಹಾಸವಿರುವ ಚಿತ್ರರಂಗಕ್ಕೆ ಕಲಹ ಬೇಡ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.