ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 19
ಚಿತ್ರದುರ್ಗ ನಗರದ ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಮಕ್ಕಳಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸಲಾಯಿತು.

ಈ ಸಮಾರಂಭದಲ್ಲಿ ಮಕ್ಕಳು ಹಳ್ಳಿಯ ವೇಷವನ್ನು ಧರಿಸಿ, ಸಂಕ್ರಾಂತಿಯ ವಿಶೇಷವಾದ ಕಬ್ಬು, ಗೆಣಸು, ಸೇಂಗಾ, ಅವರೆಕಾಯಿ, ಬೆಲ್ಲಾ ಎಳ್ಳು, ಮಡಿಕೆಯಲ್ಲಿ ಹಾಲು ಕಾಯಿಸುವುದು, ಕಡ್ಲೆಗಿಡ, ಹುಲ್ಲು, ಕೃಷಿಕ ಸಮುದಾಯದ ಮೂಲವಾದ ನೇಗಿಲು, ಬೀಸುವುದು, ಕಟ್ಟುವುದು, ರಾಶಿ ಹಾಕುವುದು, ಹಸುವಿನ ಪೂಜೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಅನೇಕ ಹಾಡು, ನೃತ್ಯಗಳನ್ನು ಪ್ರದರ್ಶಿಸಿದರು ಹಾಗೆಯೇ ಹಬ್ಬದ ಮಹತ್ವವನ್ನು ಸಹ ಮಕ್ಕಳು ಸಂಭಾಷಣೆಯ ಮೂಲಕ ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಸುರೇಶ್ಕುಮಾರ್ ಸಿಸೋಡಿಯಾ, ಸಹ ಕಾರ್ಯದರ್ಶಿ ಸುರೇಶ್ ಪಟಿಯಾತ್ , ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ,ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶಾಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳು ವಿದವಿಧವಾದ ಗಾಳಿಪಟವನ್ನು ಹಾರಿಸಿ ಆನಂದಿಸಿದರು.
Views: 49