
ಭಾರತದಲ್ಲಿ ಅಸಂಖ್ಯ ಉದ್ಯಮಿಗಳು ತಮ್ಮದೇ ಸ್ವಂತ ಕಂಪನಿಗಳನ್ನು ಸ್ಥಾಪಿಸಿ ಶತಕೋಟಿ ಡಾಲರ್‌ಗಳ ಬೃಹತ್ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದಾರೆ. ಅಷ್ಟೇಅಲ್ಲ, ಅದನ್ನು ಮುಂದಿನ ಪೀಳಿಗೆ ಕೂಡ ಮುನ್ನಡೆಸಿಕೊಂಡು ಹೋಗುವ ಮೂಲಕ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಸುವ ಜತೆಗೆ ದೇಶದ ಆರ್ಥಿಕತೆ ಬೆಳವಣಿಗೆಯಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಅದೇ ಮಾದರಿಯಲ್ಲಿ ಉದ್ಯಮವನ್ನು ಸ್ಥಾಪಿಸಿ ಇದೀಗ ಅದನ್ನು ಮುನ್ನಡೆಸಿಕೊಂಡು ಹೋಗುತ್ತಿರುವವರು ಸುನೀತಾ ರೆಡ್ಡಿ.
ಸುನೀತಾ ಅವರು ತಮ್ಮ ತಂದೆ ಸ್ಥಾಪಿಸಿರುವ ಅಪೋಲೊ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅಪೋಲೊ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸುನೀತಾ ಅವರು ಕಂಪನಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. 1983ರಲ್ಲಿ ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಅನ್ನು ಖ್ಯಾತ ಹೃದ್ರೋಗ ತಜ್ಞರಾಗಿದ್ದ ಪ್ರತಾಪ್ ರೆಡ್ಡಿ ಸ್ಥಾಪಿಸಿದ್ದು, ಸುನೀತಾ ಅವರು ರೆಡ್ಡಿಯ ಪುತ್ರಿ. ಪ್ರತಾಪ್ ರೆಡ್ಡಿ ಅವರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ವಾಪಾಸ್ಸಾಗಿ ಸ್ಥಾಪಿಸಿದ ಈ ಕಂಪನಿಯ ಅಧ್ಯಕ್ಷರಾಗಿದ್ದಾರೆ.ಫೋರ್ಬ್ಸ್ ವರದಿಗಳ ಪ್ರಕಾರ, 2024ರ ಜನವರಿ 1ರ ಮಾಹಿತಿಯಂತೆ ಈ ಕಂಪನಿಯು 23300 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಹೊಂದಿದೆ. ಮಗಳು ಸುನೀತಾ ಅವರು 1989ರಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವುದಕ್ಕೆ ಪ್ರಾರಂಭಿಸಿದ್ದರು.
ಆ ಮೂಲಕ ಪ್ರಸ್ತುತ ಅಪೋಲೊ ಇಡೀ ದೇಶದಲ್ಲೇ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ಅಪೋಲೊ ಆಸ್ಪತ್ರೆಯು 82492 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.World’s Richest Woman: ಅಂಬಾನಿ, ಟಾಟಾ, ಅದಾನಿಗಿಂತ ಮುಂದಿರುವ ವಿಶ್ವದ ಶ್ರೀಮಂತ ಮಹಿಳೆಯಿವರು!ಸುನೀತಾ ಅವರು ಚೆನ್ನೈನ ಸ್ವೆಲ್ಲಾ ಮಾರಿಸ್ ಕಾಲೇಜಿನಲ್ಲಿ ಸಾರ್ವಜನಿಕ ಸಂಪರ್ಕ, ಅರ್ಥಶಾಸ್ತ್ರ ಮತ್ತು ಮಾರ್ಕೆಟಿಂಗ್‌ನಲ್ಲಿ ಬ್ಯಾಚುರಲ್ ಆಫ್ ಆರ್ಟ್ಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಅವರು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್‌ನಿಂದ ಹಣಕಾಸು ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ.
ಬಳಿಕ ಅವರು ಅಮೆರಿಕದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಓನರ್/ಮ್ಯಾನೇಜ್‌ಮೆಂಟ್ ಕೋರ್ಸ್ ಅನ್ನು ಕೂಡ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಇಂದೋರ್‌ನ ಸೇಜ್ ವಿಶ್ವವಿದ್ಯಾಲಯದಿಂದ ಜೀವ ವಿಜ್ಞಾನದಲ್ಲಿ ಗೌರವ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ. ಅವರು ತಮ್ಮ ಆರೋಗ್ಯದ ವಿಚಾರದಲ್ಲಿ ಅದಕ್ಕೆ ಪೂರಕವಾಗುವ ಜೀವನ ಶೈಲಿ ಹಾಗೂ ಸಮತೋಲಿತವಾದ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.ಸುನೀತಾ ಅವರು ಹಲವು ವರ್ಷಗಳಿಂದ ಸಿಐಐ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ. ಇನ್ನೊಂದೆಡೆ, ತಮ್ಮ ವೃತ್ತಿ ಬದುಕಿನ ನಡುವೆ ಅನೇಕ ಗ್ರೀನ್‌ಫೀಲ್ಡ್ ಹಾಗೂ ಬ್ರೌನ್‌ಫೀಲ್ಡ್ ಯೋಜನೆಗಳ ಮೇಲ್ವಿಚಾರಣೆಯನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಇಂಡಿಯಾ ಸಲಹಾ ಮಂಡಳಿ(ಐಎಬಿ) ಹಾಗೂ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0