
ಹೋಲ್ಕರ್ ಸ್ಟೇಡಿಯಂನಲ್ಲಿ ಭಾರತ ತಂಡ, ಆಸ್ಟ್ರೇಲಿಯಾ (India Vs Australia)ವಿರುದ್ಧ ಸೋಲು ಕಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ತೋರಿದ ಆಟವನ್ನು ಗಮನಿಸಿದರೆ ಮೂರನೇ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆಲ್ಲಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಆಸ್ಟ್ರೇಲಿಯಾ ಭಾರತವನ್ನು ತನ್ನದೇ ಬಲೆಯಲ್ಲಿ ಸಿಲುಕಿಸಿತು. ಸ್ಪಿನ್ ನೆರವಿನ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರಾಬಲ್ಯ ಸಾಧಿಸಿ, ಭಾರತವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಈ ಸೋಲಿನಿಂದ ನಿರಾಸೆಗೊಂಡಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar), ಸೋಲಿಗೆ ರವೀಂದ್ರ ಜಡೇಜಾ (Ravindra Jadeja) ಕಾರಣ ಎಂದು ಆರೋಪಿಸಿದ್ದಾರೆ.
ಟೆಸ್ಟ್ ಆರಂಭದ ಮೊದಲ ದಿನವೇ ಜಡೇಜಾ ಮಾಡಿದ ತಪ್ಪನ್ನು ಸುನಿಲ್ ಗವಾಸ್ಕರ್ ಎತ್ತಿ ತೋರಿಸಿದ್ದಾರೆ. ಜಡೇಜಾ ಮಾಡಿದ ಆ ತಪ್ಪು ಭಾರತವನ್ನು ಇಕ್ಕಟಿಗೆ ಸಿಲುಕಿಸಿತು, ಅಲ್ಲಿಂದ ಭಾರತ ತಂಡ ಸೋಲಿನತ್ತ ಸಾಗಿತು ಎಂದಿದ್ದಾರೆ. ವಾಸ್ತವವಾಗಿ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೆನ್ ಅವರನ್ನು ಜಡೇಜಾ ಔಟ್ ಮಾಡಿದ್ದರು ಆದರೆ ಈ ಚೆಂಡು ನೋ ಬಾಲ್ ಆಗಿತ್ತು.
IND vs AUS: ಟೀಂ ಇಂಡಿಯಾ ಖಾತೆಗೆ ಬೇಡದ ದಾಖಲೆಗಳನ್ನು ಹಾಕಿದ ಇಂದೋರ್ ಟೆಸ್ಟ್ ಸೋಲು..!
ಜಡೇಜಾ ಮಾಡಿದ ತಪ್ಪು, ಆಸ್ಟ್ರೇಲಿಯಾಕ್ಕೆ ಅನುಕೂಲ
ಲಬುಶೆನ್ ಔಟಾದರೂ ನೋ ಬಾಲ್ನಿಂದಾಗಿ ಬದುಕುಳಿದಿದ್ದರು. ಇದರ ನಂತರ, ಅವರು ಮತ್ತೊಬ್ಬ ಆರಂಭಿಕ ಉಸ್ಮಾನ್ ಖವಾಜಾ ಅವರೊಂದಿಗೆ 96 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಹೀಗಾಗಿ ಕಾಂಗರೂ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್ ಗಳಿಸಿತು. ಇದರೊಂದಿಗೆ ಭಾರತಕ್ಕಿಂತ 88 ರನ್‌ಗಳ ಮುನ್ನಡೆ ಸಾಧಿಸಿತು.
ಪಂದ್ಯದ ನಂತರ ಮಾತನಾಡಿದ ಗವಾಸ್ಕರ್, “ನೀವು ಪಂದ್ಯವನ್ನು ಹಿಂತಿರುಗಿ ನೋಡಿದರೆ, ಭಾರತಕ್ಕೆ ಆ ಕ್ಷಣವು ತುಂಬಾ ದುಬಾರಿಯಾಯಿತು ಎಂಬುದನ್ನು ನಿಮಗೆಲ್ಲ ಬಿಡಿಸಿ ಹೇಳಬೇಕಾಗಿಲ್ಲ. ಲಬುಶೆನ್ ಶೂನ್ಯಕ್ಕೆ ಔಟಾಗಿದ್ದರು. ಆದರೆ ಜಡೇಜಾ ಮಾಡಿದ ನೋ ಬಾಲ್ನಿಂದಾಗಿ ಬದುಕುಳಿದ ಅವರು 96 ರನ್‌ಗಳ ಜೊತೆಯಾಟ ಹಂಚಿಕೊಂಡರು. ಇದು ಟರ್ನಿಂಗ್ ಪಾಯಿಂಟ್ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಜಡೇಜಾ ನಂಬರ್-1
ಮತ್ತೊಂದೆಡೆ, ಪ್ರಸ್ತುತ ಸರಣಿಯ ಮೂರು ಪಂದ್ಯಗಳನ್ನು ನೋಡಿದರೆ, ಜಡೇಜಾ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜಡೇಜಾ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಈ ಸರಣಿಯಲ್ಲಿ ಭಾರತ ಪರ ಉತ್ತಮ ಇನ್ನಿಂಗ್ಸ್ ಕೂಡ ಆಡಿದ್ದಾರೆ. ಅವರ ಬ್ಯಾಟ್ ಮೂರು ಪಂದ್ಯಗಳಲ್ಲಿ 107 ರನ್ ಗಳಿಸಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ 70 ರನ್ ಗಳಿಸಿದ್ದರು. ಇಂದೋರ್ನಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ ನಾಲ್ಕು ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ರನ್ ಗಳಿಸಿದ ಜಡೇಜಾ, ವಿಕೆಟ್ ಇಲ್ಲದೆ ಪಂದ್ಯ ಅಂತ್ಯಗೊಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ