Skip to content
  • Sunday, March 22, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • Suresh Raina: ಲಂಕಾ ಪ್ರೀಮಿಯರ್ ಲೀಗ್​ಗೆ ಸುರೇಶ್ ರೈನಾ ಎಂಟ್ರಿ! ಮೂಲಬೆಲೆ ಎಷ್ಟು ಗೊತ್ತಾ?
Sports

Suresh Raina: ಲಂಕಾ ಪ್ರೀಮಿಯರ್ ಲೀಗ್​ಗೆ ಸುರೇಶ್ ರೈನಾ ಎಂಟ್ರಿ! ಮೂಲಬೆಲೆ ಎಷ್ಟು ಗೊತ್ತಾ?

June 12, 2023
samagrasuddi

ಟೀಂ ಇಂಡಿಯಾದ ಮಾಜಿ ಆಟಗಾರ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಲಂಕಾ ಪ್ರೀಮಿಯರ್ ಲೀಗ್​ನತ್ತ ಮುಖ ಮಾಡಿದ್ದಾರೆ. ಈ ಬಾರಿಯ ಲಂಕಾ ಪ್ರೀಮಿಯರ್ ಲೀಗ್​ಗಾಗಿ ನಡೆಯಲ್ಲಿರುವ ಹರಾಜಿಗೆ ರೈನಾ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.ರೈನಾ ತಮ್ಮ ಮೂಲ ಬೆಲೆಯನ್ನು 50 ಸಾವಿರ ಡಾಲರ್​ (41,21,725 ರೂ.)ಗೆ ನಿಗಧಿಪಡಿಸಿದ್ದಾರೆ. ಎಲ್‌ಪಿಎಲ್ ಹರಾಜು ಜೂನ್ 14 ರಂದು ನಡೆಯಲಿದ್ದು. ಈ ಲೀಗ್​ನ ನಾಲ್ಕನೇ ಆವೃತ್ತಿಯು ಜೂನ್ 30 ರಿಂದ ಆಗಸ್ಟ್ 20 ರವರೆಗೆ ನಡೆಯಲಿದೆ.ಸುರೇಶ್ ರೈನಾಗೂ ಮೊದಲು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಏಕೈಕ ಭಾರತೀಯ ಕ್ರಿಕೆಟಿಗರಾಗಿದ್ದಾರೆ. 2020 ರ ಉದ್ಘಾಟನಾ ಸೀಸನ್​ನಲ್ಲಿ ಕ್ಯಾಂಡಿ ಟಸ್ಕರ್ಸ್ ತಂಡದ ಪರ ಪಠಾಣ್ ಕಣಕ್ಕಳಿದಿದ್ದರು. ಸೆಪ್ಟೆಂಬರ್ 2022 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೈನಾ, ಈ ವರ್ಷದ ಮಾರ್ಚ್‌ನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಆಡಿದ್ದರು. ಇನ್ನು ಐಪಿಎಲ್​ನಲ್ಲಿ ಚೆನ್ನೈ ತಂಡದಲ್ಲಿ ಹೆಚ್ಚು ವರ್ಷ ಕಳೆದಿದ್ದ ರೈನಾ ತಂಡವನ್ನು 2010, 2011, 2018, ಮತ್ತು 2021ರಲ್ಲಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಚೆನ್ನೈ ಸೂಪರ್ ಕಿಂಗ್ಸ್ ಪರ 176 ಪಂದ್ಯಗಳನ್ನಾಡಿರುವ ರೈನಾ 4,687 ರನ್ ಸಿಡಿಸಿದ್ದಾರೆ. ಹಾಗೆಯೇ ರೈನಾ 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ನಾಯಕತ್ವವನ್ನು ವಹಿಸಿದ್ದರು. ಒಟ್ಟಾರೆ ಐಪಿಎಲ್ ವೃತ್ತಿಜೀವನದಲ್ಲಿ 5,500 ಕ್ಕೂ ಹೆಚ್ಚು ರನ್ ಗಳಿಸಿದ ಅವರು ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.ಟೀಂ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ರೈನಾ ಪಾತ್ರರಾಗಿದ್ದಾರೆ. 2010 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರೈನಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದರುಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಸುಮಾರು 8,000 ರನ್‌ ಬಾರಿಸಿರುವ ಸುರೇಶ್ ರೈನಾ, 2011ರ ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಇನ್ನು ಲಂಕಾ ಪ್ರೀಮಿಯರ್ ಲೀಗ್ ಹರಾಜಿನ ವಿಚಾರಕ್ಕೆ ಬಂದರೆ 140 ವಿದೇಶಿ ಕ್ರಿಕೆಟಿಗರು ಸೇರಿದಂತೆ 500 ಕ್ಕೂ ಹೆಚ್ಚು ಕ್ರಿಕೆಟಿಗರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಈಗಾಗಲೇ ಹೇಳಿದೆ. ಈ ವರ್ಷದ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದೆ.

source https://tv9kannada.com/photo-gallery/cricket-photos/csk-legend-suresh-raina-to-be-part-of-lpl-2023-auction-psr-599473.html

Tags: Cricket, samagrasuddi, ಸಮಗ್ರ ಸುದ್ದಿ

Post navigation

WTC Final 2023: ಅಂಪೈರ್ ತೀರ್ಪನ್ನು ಟೀಕಿಸಿದ ಗಿಲ್​ಗೆ ದಂಡದ ಬರೆ! ಟೀ ಇಂಡಿಯಾಕ್ಕೂ ಭಾರಿ ದಂಡ ವಿಧಿಸಿದ ಐಸಿಸಿ
WTC Final 2023: ‘ಐಪಿಎಲ್​ಗಿಂತ ದೇಶ ಮುಖ್ಯ’; ಅಚ್ಚರಿಯ ಹೇಳಿಕೆ ನೀಡಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.4 | ದಿನ 76

March 19, 2026
samagrasuddi
  • ಚಿತ್ರದುರ್ಗ: ಮಾ. 23ರಂದು ಉಜ್ಜಯಿನಿ ಮಠದಲ್ಲಿ ಜಗದ್ಗುರು ಶ್ರೀ ಮರುಳಾರಾಧ್ಯ ಶಿವಾಚಾರ್ಯರ 31ನೇ ಪುಣ್ಯ ಸ್ಮರಣೋತ್ಸವ.
  • Life Cycle Mutual Funds: ಸೆಬಿಯ ಹೊಸ ಮ್ಯೂಚುವಲ್ ಫಂಡ್ ನಿಯಮ, ಲಾಭ ಮತ್ತು ಅನಾನುಕೂಲಗಳ ಸಂಪೂರ್ಣ ಮಾಹಿತಿ.
  • RCB Ticket Scam Alert: ಐಪಿಎಲ್ ಟಿಕೆಟ್ ಹೆಸರಿನಲ್ಲಿ ವಂಚನೆ; ಬೆಂಗ್ಳೂರು ಪೊಲೀಸರಿಂದ ಹೈ-ಅಲರ್ಟ್!
  • ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.
  • ​Day Special, ಮಾರ್ಚ್ 22: ಇತಿಹಾಸದ ಪುಟಗಳಲ್ಲಿನ ಸುವರ್ಣ ಅಕ್ಷರಗಳು ಮತ್ತು ವಿಶ್ವ ಜಲ ದಿನದ ವಿಶೇಷತೆ
Copyright © 2026
CONTACT US
Theme by: Theme Horse
Proudly Powered by: WordPress