ಚಿತ್ರದುರ್ಗ ಅ. 2: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರ ವಿರಚಿತ ವಿವೇಕಧಾರಾ ಕೃತಿ ಲೋಕಾರ್ಪಣಾ ಸಮಾರಂಭ ಅ. 4ರ ಸಂಜೆ 5.30ಕ್ಕೆ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಸ್ವಾಮಿ ಬ್ರಹ್ಮನಿಷ್ಠಾನಂದ ಸ್ವಾಮಿಜಿ ತಿಳಿಸಿದ್ದಾರೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನಾಧರಿಸಿ ಹಲವಾರು ಆಯಾಮಗಳಲ್ಲಿ ಪರಿಚಯಿಸಿದ ವಿಭಿನ್ನ ಲೇಖನಗಳ ಗುಚ್ಚವೇ ‘ವಿವೇಕಧಾರಾ’ ಕೃತಿ. ದಿವ್ಯತ್ರಯರ ಕೃಪಾರ್ಶಿವಾದದ ಫಲವಾಗಿ ಸ್ವಾಮೀಜಿಯವರಿಂದ ಮೂಡಿಬಂದಿದೆ..
ದಿವ್ಯ ಸಾನಿಧ್ಯವನ್ನು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರು ಸ್ವಾಮಿ ವಹಿಸಲಿದ್ದಾರೆ. ವಿವೇಕಧಾರಾ ಕೃತಿ ಲೋಕಾರ್ಪಣೆಯನ್ನು ಸರಕಾರಿ ಕಲಾ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀಮತಿ
ಪ್ರೊ|| ತಾರಿಣಿ ಶುಭದಾಯಿನಿ ನಡೆಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತುಮಕೂರು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ
ರಾಜೀವಲೋಚನ ಸಮಾಜ ಸೇವಕರಾದ ಡಾ|| ಜಯರಾಮ್ ರೆಡ್ಡಿ, ಲೆಕ್ಕ ಪರಿಶೋಧಕರು ಹಾಗೂ ಸಮಾಜ ಸೇವಕರಾದ ರೋ| ಕೆ.
ಮಧುಪ್ರಸಾದ್ ಭಾಗವಹಿಸಲಿದ್ದಾರೆ